Sara Ali Khan: ಸಾರಾ ಅಲಿ ಖಾನ್ ಹೊಸ ವೇಷ ಕಂಡು ನೆಟ್ಟಿಗರಿಗೆ ಅಚ್ಚರಿ; ಮೀಸೆ-ಗಡ್ಡದ ಲುಕ್ನಲ್ಲಿ ಸೈಫ್ ಪುತ್ರಿ
Homi Adajania | Sara Ali Khan: ಹಲವು ಸಿನಿಮಾಗಳಲ್ಲಿ ಸಾರಾ ಅಲಿ ಖಾನ್ ಬ್ಯುಸಿ ಆಗಿದ್ದಾರೆ. ಹೋಮಿ ಅದಜಾನಿಯಾ ನಿರ್ದೇಶನದ ‘ಮರ್ಡರ್ ಮುಬಾರಕ್’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.
ನಟಿ ಸಾರಾ ಅಲಿ ಖಾನ್ (Sara Ali Khan) ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ನಟಿಯರು ಫೋಟೋ ಶೇರ್ ಮಾಡಿಕೊಳ್ಳುವುದು ಹೊಸ ವಿಚಾರ ಏನಲ್ಲ. ಆದರೆ ಈ ಬಾರಿ ಸಾರಾ ಅಲಿ ಖಾನ್ ಅವರು ಮೀಸೆ-ಗಡ್ಡ ಅಂಟಿಸಿಕೊಂಡು ಪೋಸ್ ನೀಡಿದ್ದಾರೆ. ಅದನ್ನು ನೋಡಿ ನೆಟ್ಟಿಗರಿಗೆ ಅಚ್ಚರಿ ಆಗಿದೆ. ಅವರು ಈ ರೀತಿ ಫೋಟೋ ಹಂಚಿಕೊಳ್ಳಲು ಕಾರಣ ಕೂಡ ಇದೆ. ಮಂಗಳವಾರ (ಫೆ.28) ನಿರ್ದೇಶಕ ಹೋಮಿ ಅದಜಾನಿಯಾ (Homi Adajania) ಅವರ ಹುಟ್ಟುಹಬ್ಬ. ಆ ಪ್ರಯುಕ್ತ ಅವರಿಗೆ ವಿಶ್ ಮಾಡುವ ಸಲುವಾಗಿ ಸಾರಾ ಅಲಿ ಖಾನ್ ಅವರು ಈ ವೇಷದಲ್ಲಿ ಪೋಸ್ ನೀಡಿದ್ದಾರೆ. ಹಾಗಂತ ಅವರು ನಿಜವಾಗಿ ಮೀಸೆ-ಗಡ್ಡ ಅಂಟಿಸಿಕೊಂಡಿಲ್ಲ. ಬದಲಿಗೆ, ಫಿಲ್ಟರ್ ಬಳಸಿ ಈ ರೀತಿ ಎಡಿಟ್ ಮಾಡಿದ್ದಾರೆ.
ಸಾರಾ ಅಲಿ ಖಾನ್ ಅವರ ಈ ಫೋಟೋ ಕ್ಲಿಕ್ಕಿಸಿದ್ದು ಹೋಮಿ ಅದಜಾನಿಯಾ ಅವರು. ಹಾಗಾಗಿ ಅವರ ಬರ್ತ್ಡೇ ಪ್ರಯುಕ್ತ ಇದೇ ಫೋಟೋವನ್ನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ ಸೈಫ್ ಅಲಿ ಖಾನ್ ಪುತ್ರಿ. ಅಲ್ಲದೇ, ಹೋಮಿ ಅದಜಾನಿಯಾ ಜೊತೆ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನೂ ಅವರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Sara Ali Khan: ಶಿವನ ಧ್ಯಾನ ಮಾಡಿದ ಸಾರಾ ಅಲಿ ಖಾನ್; ಒಂದು ವರ್ಗದಿಂದ ಬಂತು ಟೀಕೆ
ಸೈಫ್ ಅಲಿ ಖಾನ್ ಮಗಳು ಎಂಬ ಕಾರಣಕ್ಕೆ ಸಾರಾ ಅಲಿ ಖಾನ್ ಅವರಿಗೆ ಬಾಲಿವುಡ್ನಲ್ಲಿ ಹಲವು ಅವಕಾಶಗಳು ಸಿಕ್ಕಿವೆ. ಸ್ಟಾರ್ ಕಲಾವಿದರ ಜೊತೆ ನಟಿಸುವ ಮೂಲಕ ಅವರು ಫೇಮಸ್ ಆಗಿದ್ದಾರೆ. ಕಾರ್ತಿಕ್ ಆರ್ಯನ್, ಅಕ್ಷಯ್ ಕುಮಾರ್, ಧನುಶ್, ರಣವೀರ್ ಸಿಂಗ್ ಮುಂತಾದ ನಟರ ಜೊತೆ ಅವರು ತೆರೆಹಂಚಿಕೊಂಡಿದ್ದಾರೆ. ಹಾಗಿದ್ದರೂ ಕೂಡ ನಿರೀಕ್ಷಿತ ಮಟ್ಟದ ಗೆಲುವು ಅವರಿಗೆ ಸಿಕ್ಕಿಲ್ಲ.
ಇದನ್ನೂ ಓದಿ: ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ ಸಾರಾ ಅಲಿ ಖಾನ್; ಅಭಿಮಾನಿಗಳಿಗೆ ಕಾಡುತ್ತಿದೆ ಅನುಮಾನ
ಹಲವು ಸಿನಿಮಾಗಳಲ್ಲಿ ಸಾರಾ ಅಲಿ ಖಾನ್ ಬ್ಯುಸಿ ಆಗಿದ್ದಾರೆ. ಹೋಮಿ ಅದಜಾನಿಯಾ ನಿರ್ದೇಶನದ ‘ಮರ್ಡರ್ ಮುಬಾರಕ್’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಆ ಚಿತ್ರದ ಶೂಟಿಂಗ್ ಮುಗಿದಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ‘ಏ ವತನ್ ಮೇರೆ ವತನ್’ ಚಿತ್ರಕ್ಕೂ ಸಾರಾ ಅಲಿ ಖಾನ್ ನಾಯಕಿ ಆಗಿದ್ದಾರೆ. ಇನ್ನೂ ಹಲವು ಪ್ರಾಜೆಕ್ಟ್ಗಳು ಅವರ ಕೈಯಲ್ಲಿವೆ.
ಇದನ್ನೂ ಓದಿ: ಸಲ್ಮಾನ್ ಖಾನ್ಗೆ ಅಂಕಲ್ ಎಂದು ಕರೆದ ಸಾರಾ ಅಲಿ ಖಾನ್; ನಟನ ರಿಯಾಕ್ಷನ್ ಹೇಗಿತ್ತು?
ಸೋಶಿಯಲ್ ಮೀಡಿಯಾದಲ್ಲಿ ಸಾರಾ ಅಲಿ ಖಾನ್ ಸಕ್ರಿಯರಾಗಿದ್ದಾರೆ. ದಿನದಿಂದ ದಿನಕ್ಕೆ ಅವರ ಜನಪ್ರಿಯತೆ ಹೆಚ್ಚುತ್ತಿದೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು ಬರೋಬ್ಬರಿ 4.1 ಕೋಟಿ ಜನರು ಫಾಲೋ ಮಾಡುತ್ತಿದ್ದಾರೆ. ನೆಟ್ಟಿಗರು ಆಗಾಗ ಅವರನ್ನು ಟ್ರೋಲ್ ಮಾಡುತ್ತಾರೆ. ಆದರೆ ಅದಕ್ಕೆಲ್ಲ ಸಾರಾ ಅಲಿ ಖಾನ್ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:33 am, Wed, 1 March 23