Sara Ali Khan: ಸಾರಾ​ ಅಲಿ ಖಾನ್​ ಹೊಸ ವೇಷ ಕಂಡು ನೆಟ್ಟಿಗರಿಗೆ ಅಚ್ಚರಿ; ಮೀಸೆ-ಗಡ್ಡದ ಲುಕ್​ನಲ್ಲಿ ಸೈಫ್​ ಪುತ್ರಿ

Homi Adajania | Sara Ali Khan: ಹಲವು ಸಿನಿಮಾಗಳಲ್ಲಿ ಸಾರಾ ಅಲಿ ಖಾನ್​ ಬ್ಯುಸಿ ಆಗಿದ್ದಾರೆ. ಹೋಮಿ ಅದಜಾನಿಯಾ ನಿರ್ದೇಶನದ ‘ಮರ್ಡರ್​ ಮುಬಾರಕ್​’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ ಎಂಬ ಮಾಹಿತಿ ಇದೆ.

Sara Ali Khan: ಸಾರಾ​ ಅಲಿ ಖಾನ್​ ಹೊಸ ವೇಷ ಕಂಡು ನೆಟ್ಟಿಗರಿಗೆ ಅಚ್ಚರಿ; ಮೀಸೆ-ಗಡ್ಡದ ಲುಕ್​ನಲ್ಲಿ ಸೈಫ್​ ಪುತ್ರಿ
ಸಾರಾ ಅಲಿ ಖಾನ್

Updated on: Mar 01, 2023 | 10:33 AM

ನಟಿ ಸಾರಾ ಅಲಿ ಖಾನ್​ (Sara Ali Khan) ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ನಟಿಯರು ಫೋಟೋ ಶೇರ್​ ಮಾಡಿಕೊಳ್ಳುವುದು ಹೊಸ ವಿಚಾರ ಏನಲ್ಲ. ಆದರೆ ಈ ಬಾರಿ ಸಾರಾ ಅಲಿ ಖಾನ್​ ಅವರು ಮೀಸೆ-ಗಡ್ಡ ಅಂಟಿಸಿಕೊಂಡು ಪೋಸ್​ ನೀಡಿದ್ದಾರೆ. ಅದನ್ನು ನೋಡಿ ನೆಟ್ಟಿಗರಿಗೆ ಅಚ್ಚರಿ ಆಗಿದೆ. ಅವರು ಈ ರೀತಿ ಫೋಟೋ ಹಂಚಿಕೊಳ್ಳಲು ಕಾರಣ ಕೂಡ ಇದೆ. ಮಂಗಳವಾರ (ಫೆ.28) ನಿರ್ದೇಶಕ ಹೋಮಿ ಅದಜಾನಿಯಾ (Homi Adajania) ಅವರ ಹುಟ್ಟುಹಬ್ಬ. ಆ ಪ್ರಯುಕ್ತ ಅವರಿಗೆ ವಿಶ್​ ಮಾಡುವ ಸಲುವಾಗಿ ಸಾರಾ ಅಲಿ ಖಾನ್​ ಅವರು ಈ ವೇಷದಲ್ಲಿ ಪೋಸ್​ ನೀಡಿದ್ದಾರೆ. ಹಾಗಂತ ಅವರು ನಿಜವಾಗಿ ಮೀಸೆ-ಗಡ್ಡ ಅಂಟಿಸಿಕೊಂಡಿಲ್ಲ. ಬದಲಿಗೆ, ಫಿಲ್ಟರ್ ಬಳಸಿ ಈ ರೀತಿ ಎಡಿಟ್​ ಮಾಡಿದ್ದಾರೆ.

ಸಾರಾ ಅಲಿ ಖಾನ್​ ಅವರ ಈ ಫೋಟೋ ಕ್ಲಿಕ್ಕಿಸಿದ್ದು ಹೋಮಿ ಅದಜಾನಿಯಾ ಅವರು. ಹಾಗಾಗಿ ಅವರ ಬರ್ತ್​ಡೇ ಪ್ರಯುಕ್ತ ಇದೇ ಫೋಟೋವನ್ನು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಪೋಸ್ಟ್​ ಮಾಡುವ ಮೂಲಕ ವಿಶ್​ ಮಾಡಿದ್ದಾರೆ ಸೈಫ್​ ಅಲಿ ಖಾನ್​ ಪುತ್ರಿ. ಅಲ್ಲದೇ, ಹೋಮಿ ಅದಜಾನಿಯಾ ಜೊತೆ ವರ್ಕೌಟ್​ ಮಾಡುತ್ತಿರುವ ವಿಡಿಯೋವನ್ನೂ ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Sara Ali Khan: ಶಿವನ ಧ್ಯಾನ ಮಾಡಿದ ಸಾರಾ ಅಲಿ ಖಾನ್; ಒಂದು ವರ್ಗದಿಂದ ಬಂತು ಟೀಕೆ

ಇದನ್ನೂ ಓದಿ
Sara Ali Khan: ಶಿವನ ಧ್ಯಾನ ಮಾಡಿದ ಸಾರಾ ಅಲಿ ಖಾನ್; ಒಂದು ವರ್ಗದಿಂದ ಬಂತು ಟೀಕೆ
ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ ಸಾರಾ ಅಲಿ ಖಾನ್; ಅಭಿಮಾನಿಗಳಿಗೆ ಕಾಡುತ್ತಿದೆ ಅನುಮಾನ
ಸಲ್ಮಾನ್ ಖಾನ್​ಗೆ ಅಂಕಲ್​ ಎಂದು ಕರೆದ ಸಾರಾ ಅಲಿ ಖಾನ್​; ನಟನ ರಿಯಾಕ್ಷನ್ ಹೇಗಿತ್ತು?
ಬಿಕಿನಿ ತೊಟ್ಟು ಪಡ್ಡೆಗಳ ನಿದ್ದೆ ಕದ್ದ ಸಾರಾ ಅಲಿ ಖಾನ್​; ಇಲ್ಲಿದೆ ಫೋಟೋ ಗ್ಯಾಲರಿ

ಸೈಫ್​ ಅಲಿ ಖಾನ್​ ಮಗಳು ಎಂಬ ಕಾರಣಕ್ಕೆ ಸಾರಾ ಅಲಿ ಖಾನ್​ ಅವರಿಗೆ ಬಾಲಿವುಡ್​ನಲ್ಲಿ ಹಲವು ಅವಕಾಶಗಳು ಸಿಕ್ಕಿವೆ. ಸ್ಟಾರ್​ ಕಲಾವಿದರ ಜೊತೆ ನಟಿಸುವ ಮೂಲಕ ಅವರು ಫೇಮಸ್​ ಆಗಿದ್ದಾರೆ. ಕಾರ್ತಿಕ್ ಆರ್ಯನ್​, ಅಕ್ಷಯ್​ ಕುಮಾರ್​, ಧನುಶ್​, ರಣವೀರ್​ ಸಿಂಗ್​ ಮುಂತಾದ ನಟರ ಜೊತೆ ಅವರು ತೆರೆಹಂಚಿಕೊಂಡಿದ್ದಾರೆ. ಹಾಗಿದ್ದರೂ ಕೂಡ ನಿರೀಕ್ಷಿತ ಮಟ್ಟದ ಗೆಲುವು ಅವರಿಗೆ ಸಿಕ್ಕಿಲ್ಲ.

ಇದನ್ನೂ ಓದಿ: ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ ಸಾರಾ ಅಲಿ ಖಾನ್; ಅಭಿಮಾನಿಗಳಿಗೆ ಕಾಡುತ್ತಿದೆ ಅನುಮಾನ

ಹಲವು ಸಿನಿಮಾಗಳಲ್ಲಿ ಸಾರಾ ಅಲಿ ಖಾನ್​ ಬ್ಯುಸಿ ಆಗಿದ್ದಾರೆ. ಹೋಮಿ ಅದಜಾನಿಯಾ ನಿರ್ದೇಶನದ ‘ಮರ್ಡರ್​ ಮುಬಾರಕ್​’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಆ ಚಿತ್ರದ ಶೂಟಿಂಗ್​ ಮುಗಿದಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೆ, ‘ಏ ವತನ್​ ಮೇರೆ ವತನ್​’ ಚಿತ್ರಕ್ಕೂ ಸಾರಾ ಅಲಿ ಖಾನ್​ ನಾಯಕಿ ಆಗಿದ್ದಾರೆ. ಇನ್ನೂ ಹಲವು ಪ್ರಾಜೆಕ್ಟ್​ಗಳು ಅವರ ಕೈಯಲ್ಲಿವೆ.

ಇದನ್ನೂ ಓದಿ: ಸಲ್ಮಾನ್ ಖಾನ್​ಗೆ ಅಂಕಲ್​ ಎಂದು ಕರೆದ ಸಾರಾ ಅಲಿ ಖಾನ್​; ನಟನ ರಿಯಾಕ್ಷನ್ ಹೇಗಿತ್ತು?

ಸೋಶಿಯಲ್​ ಮೀಡಿಯಾದಲ್ಲಿ ಸಾರಾ ಅಲಿ ಖಾನ್​ ಸಕ್ರಿಯರಾಗಿದ್ದಾರೆ. ದಿನದಿಂದ ದಿನಕ್ಕೆ ಅವರ ಜನಪ್ರಿಯತೆ ಹೆಚ್ಚುತ್ತಿದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು ಬರೋಬ್ಬರಿ 4.1 ಕೋಟಿ ಜನರು ಫಾಲೋ ಮಾಡುತ್ತಿದ್ದಾರೆ. ನೆಟ್ಟಿಗರು ಆಗಾಗ ಅವರನ್ನು ಟ್ರೋಲ್ ಮಾಡುತ್ತಾರೆ. ಆದರೆ ಅದಕ್ಕೆಲ್ಲ ಸಾರಾ ಅಲಿ ಖಾನ್​ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:33 am, Wed, 1 March 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us