ಸುಧಾ ಕೊಂಗರ ನಿರ್ದೇಶನದ ‘ಸೂರರೈ ಪೋಟ್ರು’ ಸಿನಿಮಾ ಭರ್ಜರಿ ಮೆಚ್ಚುಗೆ ಪಡೆದಿತ್ತು. ಈ ಚಿತ್ರ ರಾಷ್ಟ್ರಪ್ರಶಸ್ತಿ ಬಾಚಿಕೊಂಡಿತ್ತು. ಕೊವಿಡ್ ಸದ್ದು ಮಾಡುತ್ತಿರುವ ಸಂದರ್ಭದಲ್ಲೇ ಈ ಸಿನಿಮಾ ರಿಲೀಸ್ ಆದರೂ ಜನರು ಈ ಚಿತ್ರವನ್ನು ಥಿಯೇಟರ್ನಲ್ಲಿ ನೋಡಿ ಮೆಚ್ಚಿಕೊಂಡಿದ್ದರು. ಈ ಚಿತ್ರವನ್ನು ‘ಸರ್ಫಿರಾ’ ಹೆಸರಲ್ಲಿ ಹಿಂದಿಗೆ ರಿಮೇಕ್ ಮಾಡಲಾಗಿದ್ದು ಅಕ್ಷಯ್ ಕುಮಾರ್ ನಟಿಸಿದ್ದರು. ಆದರೆ, ಈ ಸಿನಿಮಾ ಯಶಸ್ಸು ಕಾಣುತ್ತಿಲ್ಲ. ಈ ಬಗ್ಗೆ ಅಕ್ಷಯ್ ಕುಮಾರ್ ಅವರು ಅಪ್ಸೆಟ್ ಆಗುತ್ತಾರಂತೆ. ಈ ಬಗ್ಗೆ ನಿರ್ದೇಶಕಿ ಸುಧಾ ಕೊಂಗರ ಅವರು ಮಾತನಾಡಿದ್ದಾರೆ.
‘ಸಿನಿಮಾ ಶೂಟಿಂಗ್ ಆರಂಭದ ಆರೇಳು ದಿನ ನಾನು ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ನಮ್ಮ ಮಧ್ಯೆ ಘರ್ಷಣೆ ಇತ್ತು. ಆದರೆ, ಅವರು ಸಿಟ್ಟಾಗುತ್ತಿದ್ದಾಗಲಿ ಅಥವಾ ಕೂಗಾಡುತ್ತಿದ್ದುದಾಗಲಿ ಮಾಡುತ್ತಾ ಇರಲಿಲ್ಲ. ನಾನು ಆ ಬಗ್ಗೆ ಆಲೋಚಿಸುತ್ತಲೂ ಇರಲಿಲ್ಲ. ನನಗೆ ಏನು ಬೇಕೋ ಅದನ್ನೇ ಶೂಟ್ ಮಾಡುತ್ತಿದ್ದೆ. ಆದರೆ, ಅವರು ಕುಗ್ಗಿದ್ದಾಗ ನೋಡೋಕೆ ಆಗಲ್ಲ’ ಎಂದಿದ್ದಾರೆ ಅವರು.
‘ನಾವು ಅಂದು ಉಡುಪಿ ದೃಶ್ಯವನ್ನು ಶೂಟ್ ಮಾಡಬೇಕಿತ್ತು. ಅದಕ್ಕೂ ಹಿಂದಿನ ದಿನ ಅವರ ಸಿನಿಮಾ ರಿಲೀಸ್ ಆಗಿ ಮಿಶ್ರಪ್ರತಿಕ್ರಿಯೆ ಪಡೆದಿತ್ತು. ಈ ಕಾರಣಕ್ಕೆ ಅವರು ಸೆಟ್ನಲ್ಲಿ ನಿರುತ್ಸಾಹಿ ಆಗಿ ಕುಳಿತಿದ್ದರು. ಆ ಉಡುಪಿ ದೃಶ್ಯ ನನ್ನ ಫೇವರಿಟ್ ಆಗಿತ್ತು. ಅದನ್ನು ಹೇಗೆ ಶೂಟ್ ಮಾಡುತ್ತೇವೇನೋ ಎನ್ನುವ ಭಯ ನನ್ನನ್ನು ಕಾಡುತ್ತಿತ್ತು. ಆದರೂ ದೃಶ್ಯ ಪರ್ಫೆಕ್ಟ್ ಆಗಿ ಬಂದಿತ್ತು’ ಎಂದಿದ್ದಾರೆ ಸುಧಾ.
ಇದನ್ನೂ ಓದಿ: ಅಕ್ಷಯ್ ಕುಮಾರ್ ಸೋಲಿನ ಸಾಲಿಗೆ ಮತ್ತೊಂದು ಸಿನಿಮಾ; ಹೊಸ ಚಿತ್ರದ ಗಳಿಕೆ 2 ಕೋಟಿ ರೂ.!
‘ಆ ದೃಶ್ಯ ಸರಿಯಾಗಿ ಬಂದಿದೆ ಎಂದು ನಾನು ಹೇಳಿದೆ. ಆದಾಗ್ಯೂ ರೀಟೇಕ್ ತೆಗೆದುಕೊಳ್ಳೋಕೆ ಅವರು ಹೇಳಿದರು. ನನಗೋಸ್ಕರ ಮತ್ತೊಂದು ಟೇಕ್ ಎಂದರು. ಇದು ಹಿಂದೆಂದೂ ಆಗಿರಲಿಲ್ಲ. ಅವರು ಪ್ರತಿ ಚಿತ್ರಕ್ಕೂ ಸಂಪೂರ್ಣ ಪರಿಶ್ರಮ ಹಾಕುತ್ತಾರೆ’ ಎಂದಿದ್ದಾರೆ ಸುಧಾ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.