ಪ್ರಚಾರಕ್ಕಾಗಿ ತಮ್ಮದೇ ಖಾಸಗಿ ವಿಡಿಯೋ ಲೀಕ್ ಮಾಡಿದರೇ ನಟಿ ಊರ್ವಶಿ

ಬಾಲಿವುಡ್ ನಟಿ ಊರ್ವಶಿ ರೌಟೆಲ್ಲಾರ ಖಾಸಗಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಈ ವಿಡಿಯೋವನ್ನು ಪ್ರಚಾರಕ್ಕಾಗಿ ಖುದ್ದು ಊರ್ವಶಿಯೇ ಲೀಕ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಪ್ರಚಾರಕ್ಕಾಗಿ ತಮ್ಮದೇ ಖಾಸಗಿ ವಿಡಿಯೋ ಲೀಕ್ ಮಾಡಿದರೇ ನಟಿ ಊರ್ವಶಿ
Follow us
ಮಂಜುನಾಥ ಸಿ.
|

Updated on: Jul 17, 2024 | 7:31 PM

ನಟಿಯರ ಖಾಸಗಿ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತಾವೆ. ಕೆಲವು ಜನಪ್ರಿಯ ನಟಿಯರ ವಿಡಿಯೋಗಳೇ ಈ ಹಿಂದೆ ವೈರಲ್ ಆಗಿದ್ದಿದೆ. ಆಗೆಲ್ಲ ನಟಿಯರು ದೂರು ದಾಖಲಿಸಿದ್ದರು ಆದರೆ ಇದೀಗ ನಟಿ ಊರ್ವಶಿ ರೌಟೆಲ್ಲಾರ ಖಾಸಗಿ ವಿಡಿಯೋ ಒಂದು ವೈರಲ್ ಆಗಿದೆ. ವಿಡಿಯೋನಲ್ಲಿ ಊರ್ವಶಿ ರೌಟೆಲ್ಲಾ ಬಾತ್​ರೂಂನಲ್ಲಿ ತಮ್ಮ ವಿವಸ್ತ್ರರಾಗುತ್ತಿದ್ದಾರೆ. ಆದರೆ ಈ ವಿಡಿಯೋವನ್ನು ಪ್ರಚಾರಕ್ಕಾಗಿ ಖುದ್ದು ಊರ್ವಶಿಯೇ ಲೀಕ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಕೆಲವು ನಟಿ-ನಟರಿದ್ದಾರೆ, ಮಾಡೆಲ್​ಗಳಿದ್ದಾರೆ ಪ್ರಚಾರಕ್ಕಾಗಿ ಯಾವ ಹಂತಕ್ಕೂ ಹೋಗಬಲ್ಲರು, ಬಾಲಿವುಡ್​ನಲ್ಲಿ ಇಂಥಹವರು ತುಸು ಹೆಚ್ಚು. ಚಿತ್ರ ವಿಚಿತ್ರ ಬಟ್ಟೆಗಳನ್ನು ಧರಿಸುವುದು, ಸತ್ತಂತೆ ನಾಟಕ ಆಡುವುದು, ಅರೆಬೆತ್ತಲೆಯಾಗಿ ಪಾಪರಾಟ್ಜಿಗಳ ಮುಂದೆ ಕಾಣಿಸಿಕೊಳ್ಳುವುದು ಇಂಥಹವರ ಸಾಲಿನಲ್ಲಿ ನಟಿ ಊರ್ವಶಿ ರೌಟೆಲಾ ಸಹ ಸೇರುತ್ತಾರೆ. ಈ ಹಿಂದೆ ಕ್ರಿಕೆಟಿಗ ರಿಷಬ್ ಪಂಥ್ ಬಗ್ಗೆ ಇಲ್ಲ ಸಲ್ಲದ್ದು ಮಾತನಾಡಿ ಸುದ್ದಿಯಾಗಿದ್ದ ನಟಿ ಊರ್ವಶಿ ರೌಟೆಲಾ ಈಗ ತಮ್ಮದೇ ಖಾಸಗಿ ವಿಡಿಯೋವನ್ನು ಪ್ರಚಾರಕ್ಕಾಗಿ ವೈರಲ್ ಮಾಡಿದ್ದಾರೆ ಎನ್ನುವ ಆರೋಪ ಮಾಡಲಾಗುತ್ತಿದೆ.

ಇದನ್ನೂ ಓದಿ:ಆ್ಯಕ್ಷನ್ ದೃಶ್ಯ ಮಾಡಲು ಹೋಗಿ ಕಾಲು ಮುರಿದುಕೊಂಡ ನಟಿ ಊರ್ವಶಿ ರೌಟೇಲಾ

ವಿಡಿಯೋನಲ್ಲಿ ಕುರ್ತಾ ಧರಿಸಿರುವ ಊರ್ವಶಿ ರೌಟೆಲಾ, ಸ್ನಾನ ಮಾಡಲೆಂದು ಬಾತ್​ರೂಂಗೆ ಬರುತ್ತಾರೆ. ಅವರ ಕೊರಳಿನಲ್ಲಿ ತಾಳಿ ರೀತಿ ಕಾಣುವ ಸರವೂ ಇದೆ. ಊರ್ವಶಿ ಟವೆಲ್ ಅನ್ನು ಹ್ಯಾಂಗರ್​ಗೆ ನೇತುಹಾಕಿ ತಮ್ಮ ಬಟ್ಟೆ ಕಳೆಯಲು ಮುಂದಾಗುತ್ತಾರೆ ಅಲ್ಲಿಗೆ ವಿಡಿಯೋ ಎಂಡ್ ಆಗಿದೆ. ಈ ವಿಡಿಯೋವನ್ನು ಊರ್ವಶಿ ರೌಟೆಲ್ಲಾ ಬಾತ್​ರೂಂ ವಿಡಿಯೋ ಲೀಕ್ ಎಂಬ ಅಡಿಬರಹದೊಂದಿಗೆ ವೈರಲ್ ಮಾಡಲಾಗುತ್ತಿದೆ. ಆದರೆ ಇದು ಪ್ರಚಾರಕ್ಕಾಗಿ ವೈರಲ್ ಮಾಡಿರುವ ವಿಡಿಯೋ ಎಂದು ಹಲವು ನೆಟ್ಟಿಗರು ಆರೋಪಿಸಿದ್ದು, ಕಮೆಂಟ್ ಮಾಡಿದ್ದಾರೆ.

ಈ ಹಿಂದೆಯೂ ಕೆಲವು ಬಾರಿ ಊರ್ವಶಿ ರೌಟೆಲ್ಲಾ ಪ್ರಚಾರಕ್ಕಾಗಿ ಕೆಲವು ಸ್ಟಂಟ್​ಗಳನ್ನು ಮಾಡಿದ್ದಿದೆ. ಈ ಹಿಂದೆ ತಮ್ಮ ತಾರಾ ಮೌಲ್ಯದ ಬಗ್ಗೆ ಸುಳ್ಳು ಹೇಳಿ ಟ್ರೋಲ್ ಆಗಿದ್ದರು. ರಿಷಬ್ ಪಂತ್ ಬಗ್ಗೆ ಮಾತನಾಡಿಯೂ ಟ್ರೋಲ್ ಆಗಿದ್ದರು. ಈಗ ತಮ್ಮದೇ ಖಾಸಗಿ ವಿಡಿಯೋ ಲೀಕ್ ಮಾಡಿಸಿ ಸುದ್ದಿಯಾಗಿದ್ದಾರೆ. ಊರ್ವಶಿ ರೌಟೆಲ್ಲಾ ಪ್ರಸ್ತುತ ತೆಲುಗಿನ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ನಂದಮೂರಿ ಬಾಲಕೃಷ್ಣ ನಾಯಕ. ಹಿಂದಿಯ ಕೆಲವು ವೆಬ್ ಸರಣಿಗಳಲ್ಲಿಯೂ ಊರ್ವಶಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ