ವಿಮಾನ ನಿಲ್ದಾಣದಲ್ಲಿ ಶಾರುಖ್​ನ ತಡೆದು ಎಲ್ಲಾ ದಾಖಲೆ ಪರಿಶೀಲನೆ; ನಟನ ಪ್ರತಿಕ್ರಿಯೆ ಏನು?

ಶಾರುಖ್ ಖಾನ್ ಅವರು ಪಾಪರಾಜಿಗಳ ಕ್ಯಾಮೆರಾ ಕಣ್ಣಿನಿಂದ ದೂರವೇ ಇರುತ್ತಾರೆ. ಈಗ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ವಿಮಾನ ನಿಲ್ದಾಣದಲ್ಲಿ ಶಾರುಖ್​ನ ತಡೆದು ಎಲ್ಲಾ ದಾಖಲೆ ಪರಿಶೀಲನೆ; ನಟನ ಪ್ರತಿಕ್ರಿಯೆ ಏನು?
ಶಾರುಖ್ ಖಾನ್
Edited By:

Updated on: Dec 01, 2023 | 10:39 AM

ಶಾರುಖ್ ಖಾನ್ (Shah Rukh Khan) ಅವರು ಗುರುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋನ ಪಾಪರಾಜಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶಾರುಖ್ ಮ್ಯಾನೇಜರ್ ಅವರು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ದಾಖಲೆಗಳನ್ನು ನೀಡಿ ಮಾತುಕತೆ ಆಡುತ್ತಿರುವುದು ವಿಡಿಯೋದಲ್ಲಿ ಇದೆ. ಇತ್ತೀಚಿನ ದಿನಗಳಲ್ಲಿ ಶಾರುಖ್ ಖಾನ್ ಅವರು ಪಾಪರಾಜಿಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಈಗ ಅವರು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು ಅನೇಕರಿಗೆ ಅಚ್ಚರಿ ತಂದಿದೆ.

ಶಾರುಖ್ ಖಾನ್ ಅವರು ಬೇರೆ ಬೇರೆ ಕೆಲಸಕ್ಕಾಗಿ ಹಲವು ಕಡೆಗಳಲ್ಲಿ ಸುತ್ತಾಟ ನಡೆಸುತ್ತಾ ಇರುತ್ತಾರೆ. ಹೀಗಾಗಿ ಅವರು ಮುಂಬೈ ವಿಮಾನ ನಿಲ್ದಾಣ ಬಳಸಲೇಬೇಕು. ಆದರೆ, ವಿಮಾನ ನಿಲ್ದಾಣಕ್ಕೆ ಬರುವ ಮತ್ತು ಹೋಗುವ ಕುರಿತ ಯಾವುದೇ ಮಾಹಿತಿಯನ್ನು ಅವರು ಲೀಕ್ ಆಗಲು ಬಿಡುವುದಿಲ್ಲ. ಹೀಗಾಗಿ ಶಾರುಖ್ ಖಾನ್ ಅಷ್ಟಾಗಿ ಪಾಪರಾಜಿಗಳ ಕ್ಯಾಮೆರಾಗೆ ಸಿಗುವುದಿಲ್ಲ. ಈಗ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡು ಎಲ್ಲರಲ್ಲೂ ಅಚ್ಚರಿ ಮುಡಿಸಿದ್ದಾರೆ.

ಶಾರುಖ್ ಖಾನ್ ಅವರು ಉದ್ದನೆಯ ಕೂದಲು ಬಿಟ್ಟಿದ್ದಾರೆ. ಯಾವ ಚಿತ್ರಕ್ಕಾಗಿ ಅವರು ಈ ಹೇರ್​ಸ್ಟೈಲ್ ಮಾಡಿಕೊಂಡಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ಭದ್ರತಾ ಸಿಬ್ಬಂದಿಗಳು ಶಾರುಖ್ ಖಾನ್ ಅವರ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಬಳಿಕವೇ ಒಳಗೆ ಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಭದ್ರತಾ ಸಿಬ್ಬಂದಿ ಕೂಲಂಕುಶವಾಗಿ ದಾಖಲೆ ಪರಿಶೀಲಿಸಿದ್ದಾರೆ. ಈ ವೇಳೆ ಶಾರುಖ್ ಸಿಟ್ಟು ಮಾಡಿಕೊಳ್ಳಲಿಲ್ಲ. ಬದಲಿಗೆ ದೊಡ್ಡದಾಗಿ ನಕ್ಕಿದ್ದಾರೆ. ಶಾರುಖ್ ಸದ್ಯ ‘ಡಂಕಿ’ ಸಿನಿಮಾ ರಿಲೀಸ್​ಗಾಗಿ ಕಾದಿದ್ದಾರೆ. ಈ ಚಿತ್ರಕ್ಕೆ ರಾಜ್​ಕುಮಾರ್ ಹಿರಾನಿ ನಿರ್ದೇಶನ ಇದೆ. ಅವರು ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಚಾರ ನೀಡುತ್ತಿಲ್ಲ. ಇದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.

ಇದನ್ನೂ ಓದಿ: ‘ಡಂಕಿ’ ಕ್ರೇಜ್: ಶಾರುಖ್ ಖಾನ್ ಸಿನಿಮಾ ನೋಡಲು ವಿದೇಶದಿಂದ ಬರುತ್ತಿದ್ದಾರೆ ಅಭಿಮಾನಿಗಳು

‘ಜವಾನ್’ ಹಾಗೂ ‘ಪಠಾಣ್’ ಸಿನಿಮಾ ಮೂಲಕ ಶಾರುಖ್ ಖಾನ್ ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರಗಳಿಗಿಂತ ‘ಡಂಕಿ’ ಸಿನಿಮಾ ಭಿನ್ನವಾಗಿದೆ. ಈ ವರ್ಷ ರಿಲೀಸ್ ಆದ ಅವರ ನಟನೆಯ ಎರಡೂ ಸಿನಿಮಾಗಳು ಮಾಸ್ ಶೈಲಿಯಲ್ಲಿ ಇದ್ದವು. ಈ ಸಿನಿಮಾ ಕ್ಲಾಸ್ ಆಗಿದೆ. ವಿಕ್ಕಿ ಕೌಶಲ್, ತಾಪ್ಸೀ ಪನ್ನು ಮೊದಲಾದವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ