ಬಾಲಿವುಡ್ (Bollywood) ಸ್ಟಾರ್ ನಟರಾದ ಶಾರುಖ್ ಖಾನ್ (Shah Rukh Khan), ಅಜಯ್ ದೇವಗನ್ ಹಾಗೂ ಅಕ್ಷಯ್ ಕುಮಾರ್ ಅವರುಗಳಿಗೆ ಅಲಹಾಬಾದ್ ಹೈಕೋರ್ಟ್ ನೊಟೀಸ್ ನೀಡಿದೆ. ಈ ಮೂವರು ಸ್ಟಾರ್ ನಟರು ತಂಬಾಕು ಜಾಹೀರಾತಿನಲ್ಲಿ ನಟಿಸಿರುವ ಕಾರಣ ನ್ಯಾಯಾಲಯವು ನೊಟೀಸ್ ನೀಡಿದ್ದು, ಹಾಜರಾಗುವಂತೆ ಸೂಚಿಸಿದೆ. ಮೋತಿಲಾಲ್ ಯಾದವ್ ಎಂಬುವರು ಈ ನಟರ ವಿರುದ್ಧ ಸಲ್ಲಿಸುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಶಾರುಖ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಅವರಿಗೆ ನೊಟೀಸ್ ನೀಡಲಾಗಿದೆ.
‘ಪದ್ಮ ಪ್ರಶಸ್ತಿಯಂಥಹಾ ಗೌರವಾನ್ವಿತ ಪ್ರಶಸ್ತಿ ಪಡೆದಿರುವ ವ್ಯಕ್ತಿಗಳು ತಂಬಾಕು ಜಾಹೀರಾತಿನಲ್ಲಿ ಕಾಣಿಸಿಕೊಂಡು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ ಹಾಗೂ ಅವರಿಗೆ ನೀಡಲಾಗಿರುವ ಪದ್ಮ ಪ್ರಶಸ್ತಿಗೂ ಅಗೌರವ ತಂದಿದ್ದಾರೆ. ಅವರು ನಟಿಸಿರುವ ಜಾಹೀರಾತಿನ ಪ್ರಸಾರಕ್ಕೆ ತಡೆ ನೀಡಬೇಕು. ಗೌರವಾನ್ವಿತ ಪ್ರಶಸ್ತಿಗೆ ಭಾಜನವಾಗಿಯೂ ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಜಾಹೀರಾತಿನಲ್ಲಿ ನಟಿಸಿರುವ ನಟರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದುರು.
ಇದನ್ನೂ ಓದಿ:‘ಡಂಕಿ’ ಕ್ರೇಜ್: ಶಾರುಖ್ ಖಾನ್ ಸಿನಿಮಾ ನೋಡಲು ವಿದೇಶದಿಂದ ಬರುತ್ತಿದ್ದಾರೆ ಅಭಿಮಾನಿಗಳು
ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸೆಕರೇಟರಿಗೆ ಹಾಗೂ ಇನ್ನೂ ಕೆಲವರಿಗೆ ಸೇರಿದಂತೆ ಶಾರುಖ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್ ಅವರಿಗೆ ನೊಟೀಸ್ ನೀಡಲಾಗಿದೆ. ಈ ಹಿಂದೆ ಅಮಿತಾಬ್ ಬಚ್ಚನ್ ಸಹ ತಂಬಾಕು ಸಂಸ್ಥೆಗೆ ನೊಟೀಸ್ ನೀಡಿದ್ದರು, ಒಪ್ಪಂದದ ಅವಧಿ ಮುಗಿದಿದ್ದರೂ ತಾವು ನಟಿಸಿರುವ ಜಾಹೀರಾತು ಪ್ರಸಾರ ಮಾಡುತ್ತಿರುವ ಬಗ್ಗೆ ದೂರು ನೀಡಿದ್ದರು. ಅಕ್ಷಯ್ ಕುಮಾರ್ ಸಹ, ತಾವು ತಂಬಾಕು ಜಾಹೀರಾತಿನಿಂದ ಹಿಂದೆ ಸರಿದಿರುವುದಾಗಿ ಹೇಳಿದ್ದರು.
ವಿಮಲ್ ನ ತಂಬಾಕು ಜಾಹೀರಾತಿನಲ್ಲಿ ಬಾಲಿವುಡ್ನ ಹಲವು ದೊಡ್ಡ ನಟರು ನಟಿಸಿದ್ದಾರೆ. ಅಮಿತಾಬ್ ಬಚ್ಚನ್, ರಣ್ವೀರ್ ಸಿಂಗ್, ಶಾರುಖ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್ ಇನ್ನೂ ಕೆಲವು ದೊಡ್ಡ ನಟರು ತಂಬಾಕು ಜಾಹೀರಾತಿನಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟರುಗಳು ತಂಬಾಕು ಜಾಹೀರಾತಿನಲ್ಲಿ ನಟಿಸುತ್ತಿರುವುದಕ್ಕೆ ನೆಟ್ಟಿಗರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. ವಿರೋಧ ವ್ಯಕ್ತವಾದ ಬಳಿಕ ನಟ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್ ಅವರುಗಳು ತಾವು ತಂಬಾಕು ಜಾಹೀರಾತಿನಲ್ಲಿ ನಟಿಸುವುದಿಲ್ಲವೆಂಬ ನಿರ್ಣಯ ತೆಗೆದುಕೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ