ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರಿಗೆ ಇಂದು (ನವೆಂಬರ್ 2) ಜನ್ಮದಿನ. ಅವರು 58ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಈ ವರ್ಷ ಬ್ಯಾಕ್ ಟು ಬ್ಯಾಕ್ ಗೆಲುವು ಸಿಕ್ಕಿರುವುದರಿಂದ ಖುಷಿ ಆಗಿದೆ. ಹೀಗಾಗಿ, ಸೆಲೆಬ್ರಿಟಿಗಳಿಗಾಗಿ ಭರ್ಜರಿ ಪಾರ್ಟಿ ಕೂಡ ಆಯೋಜನೆ ಮಾಡಿದ್ದಾರೆ. ಶಾರುಖ್ ಖಾನ್ ಮನೆ ಮುಂದೆ ಅಭಿಮಾನಿಗಳ ದಂಡು ನೆರೆದಿದೆ. ಮಧ್ಯರಾತ್ರಿ ಅವರು ಅಭಿಮಾನಿಗಳಿಗೆ ದರ್ಶನ ಕೊಟ್ಟಿದ್ದಾರೆ . ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಶಾರುಖ್ ಖಾನ್ ಅವರು ಮುಂಬೈನಲ್ಲಿ ಮನೆ ಹೊಂದಿದ್ದಾರೆ. ಇದಕ್ಕೆ ಮನ್ನತ್ ಎಂದು ಹೆಸರು ಇಟ್ಟಿದ್ದಾರೆ. ಮನ್ನತ್ ಎದುರು ಅಭಿಮಾನಿಗಳ ದಂಡು ನೆರೆದಿದೆ. ಮಧ್ಯರಾತ್ರಿಯಿಂದಲೇ ಶಾರುಖ್ ಖಾನ್ ಫ್ಯಾನ್ಸ್ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ‘ಹ್ಯಾಪಿ ಬರ್ತ್ಡೇ ಎಸ್ಆರ್ಕೆ’ ಎಂಬಿತ್ಯಾದಿ ಬೋರ್ಡ್ಗಳನ್ನು ಇಟ್ಟುಕೊಂಡು ಅಭಿಮಾನಿಗಳು ನಿಂತಿದ್ದಾರೆ.
ಶಾರುಖ್ ಖಾನ್ ಮನೆ ಎದುರು ಬಾಲ್ಕನಿ ಇದೆ. ಬರ್ತ್ಡೇ ದಿನ ಅವರು ಸಾಮಾನ್ಯವಾಗಿ ಇಲ್ಲಿಗೆ ಬಂದು ಅಭಿಮಾನಿಗಳತ್ತ ಕೈ ಬೀಸಿ ಹೋಗುತ್ತಾರೆ. ಈ ಬಾರಿಯೂ ಶಾರುಖ್ ಖಾನ್ ಅವರು ಆಗಮಿಸಿ ಅಭಿಮಾನಿಗಳತ್ತ ಕೈಬೀಸಿದ್ದಾರೆ. ಮಧ್ಯಾಹ್ನದ ವೇಳೆಗೆ ಅವರು ಮತ್ತೊಮ್ಮೆ ಅಭಿಮಾನಿಗಳಿಗೆ ದರ್ಶನ ಕೊಡುವ ಸಾಧ್ಯತೆ ಇದೆ.
ಶಾರುಖ್ ಜನ್ಮದಿನದ ಅಂಗವಾಗಿ ಆಯೋಜಿಸಿರುವ ಬರ್ತ್ಡೇ ಪಾರ್ಟಿ ಮೇಲೆ ಎಲ್ಲರ ಗಮನ ಇದೆ. ಶಾರುಖ್ ಪಾರ್ಟಿಯಲ್ಲಿ ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ ಸೇರಿ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕುವ ಸಾಧ್ಯತೆ ಇದೆ. ಇದಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ. ಪಾರ್ಟಿ ನಡೆಯುವ ಸ್ಥಳದಲ್ಲಿ ಈಗಾಗಲೇ ಪಾಪರಾಜಿಗಳು ಹಾಜರಿ ಹಾಕಿದ್ದಾರೆ.
Birthday traditions with his F̶a̶n̶d̶o̶m̶ KINGDOM 👑
🎥: Instant Bollywood | #HappyBirthdaySRK #ShahRukhKhan #SRKDay pic.twitter.com/n8ckAOxkTK
— KolkataKnightRiders (@KKRiders) November 1, 2023
No PR can afford this and No Star can pull this. #ShahRukhKhan’s Stardom will be a dream for the biggest of the biggest. Mid-Night Crowd!!
This is SHAHDOM!!#HappyBirthdaySRK
— JUST A FAN. (@iamsrk_brk) November 1, 2023
ಇದನ್ನೂ ಓದಿ: ಸಖತ್ ಅದ್ದೂರಿಯಾಗಿರಲಿದೆ ಶಾರುಖ್ ಖಾನ್ ಬರ್ತ್ಡೇ ಪಾರ್ಟಿ; ಯಾರಿಗೆಲ್ಲ ಆಹ್ವಾನ?
ಶಾರುಖ್ ಖಾನ್ ಅವರು ‘ಡಂಕಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾದ ಟೀಸರ್ ರಿಲೀಸ್ ಆಗಲಿದೆ ಎಂದು ವರದಿ ಆಗಿದೆ. ಈ ಸಿನಿಮಾ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:07 am, Thu, 2 November 23