ನಟ ಶಾರುಖ್ ಖಾನ್ (Shah Rukh Khan) ಗುರುವಾರ (ನವೆಂಬರ್ 2) ತಮ್ಮ 58ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಪ್ರತಿ ವರ್ಷದಂತೆ ಈ ಬಾರಿಯೂ ಸಹಸ್ರಾರು ಅಭಿಮಾನಿಗಳು ಅವರ ನಿವಾಸ ಮನ್ನತ್ ಮುಂದೆ ಜಮಾಯಿಸಿ ಪ್ರೀತಿಯ ಕಿಂಗ್ ಖಾನ್ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು. ಮುಂಬೈ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಿಂದ ಅಭಿಮಾನಿಗಳು ಶಾರುಖ್ ಮನೆಗೆ ಆಗಮಿಸಿದ್ದರು. ಕೆಲವು ಅಭಿಮಾನಿಗಳು ಶಾರುಖ್ ನೋಡಲು ಬಂದು ಭಾರೀ ನಷ್ಟ ಅನುಭವಿಸಿದ್ದಾರೆ. 17ಕ್ಕೂ ಅಧಿಕ ಮೊಬೈಲ್ ಕಳ್ಳತನ ಆಗಿದೆ.
ಶಾರುಖ್ ನೋಡಲು ಅಭಿಮಾನಿಗಳು ನೆರೆದಿದ್ದರು. ಅವರು ತಮ್ಮ ಅಭಿಮಾನಿಗಳನ್ನು ನಿರಾಶೆಗೊಳಿಸಲಿಲ್ಲ. ಅವರು ಅಭಿಮಾನಿಗಳನ್ನು ನೋಡಲು ಮನೆಯಿಂದ ಹೊರಬಂದರು. ಅವರು ಅಭಿಮಾನಿಗಳತ್ತ ಕೈ ಬೀಸಿದರು. ಶಾರುಖ್ ಖಾನ್ ನೋಡಲು ಬಂದವರ ಜೊತೆ ಕೆಲ ಕಳ್ಳರೂ ಇದ್ದರು. ಶಾರುಖ್‌ಗೆ ವಿಶ್ ಮಾಡಲು ಬಂದಿದ್ದ ಅನೇಕ ಅಭಿಮಾನಿಗಳ ಮೊಬೈಲ್ನ ಅವರು ಕದ್ದಿದ್ದಾರೆ.
ಶಾರುಖ್ ನೋಡಲು ಬಂದವರ ಪೈಕಿ ಸುಮಾರು 17 ಅಭಿಮಾನಿಗಳು ತಮ್ಮ ಮೊಬೈಲ್ ಫೋನ್‌ಗಳನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರತಿ ವರ್ಷವೂ ಶಾರುಖ್ ಜನ್ಮದಿನದಂದು ಅಭಿಮಾನಿಗಳು ನೆರೆಯುತ್ತಾರೆ. ಪ್ರತಿ ವರ್ಷ ಈ ರೀತಿಯ ಅಹಿತಕರ ಘಟನೆ ನಡೆಯುತ್ತದೆ.
ಶಾರುಖ್ ಅವರು ಬುಧವಾರ ಮಧ್ಯರಾತ್ರಿ ಹಾಗೂ ಗುರುವಾರ ಸಂಜೆ ಮನೆಯ ಬಾಲ್ಕನಿಗೆ ಬಂದು ಅಭಿಮಾನಿಗಳತ್ತ ಕೈ ಬೀಸಿದ್ದಾರೆ. ಅಭಿಮಾನಿಗಳು ಶಾರುಖ್ ಅವರನ್ನು ನೋಡಿ ಖುಷಿಪಟ್ಟಿದ್ದಾರೆ. ಯಾವುದೇ ಅಹಿತಕರ ಘಟನೆ, ತೊಂದರೆ ಆಗದಂತೆ ನೋಡಿಕೊಳ್ಳಲು ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಆದಾಗ್ಯೂ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ.
ಇದನ್ನೂ ಓದಿ: ನಾನು ಸಲಿಂಗಿ ಎಂದಿದ್ದ ಶಾರುಖ್ ಖಾನ್: ಕಾರಣವೇನು?
ಶಾರುಖ್ ಖಾನ್ ಅವರು 58ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ವರ್ಷ ಅವರ ನಟನೆಯ ‘ಪಠಾಣ್’ ಮತ್ತು ‘ಜವಾನ್’ ಎರಡೂ ಚಿತ್ರಗಳು ಸೂಪರ್ ಹಿಟ್ ಆದವು. ಅವರು ದಾಖಲೆಯ ಮೇಲೆ ದಾಖಲೆ ಬರೆದರು. ಹಾಗಾಗಿ ಅವರ ಹುಟ್ಟುಹಬ್ಬ ವಿಶೇಷವಾಗಿತ್ತು. ಸೆಲೆಬ್ರಿಟಿಗಳಿಗಾಗಿ ಅವರು ವಿಶೇಷ ಪಾರ್ಟಿ ಆಯೋಜನೆ ಮಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:50 am, Fri, 3 November 23