ನಾನು ಸಲಿಂಗಿ ಎಂದಿದ್ದ ಶಾರುಖ್ ಖಾನ್: ಕಾರಣವೇನು?

Shah Rukh Khan: ಶಾರುಖ್ ಖಾನ್ ತಮ್ಮನ್ನು ತಾವು ಸಲಿಂಗಿ ಎಂದು ಹೇಳಿಕೊಂಡಿದ್ದರು. ಆದರೆ ಅವರು ಹಾಗೆ ಹೇಳಿಕೊಳ್ಳಲು ಕಾರಣವೇನು? ಅವರ ಹಳೆಯ ಸಂದರ್ಶನದ ಸಾರಾಂಶ ಇಲ್ಲಿದೆ.

ನಾನು ಸಲಿಂಗಿ ಎಂದಿದ್ದ ಶಾರುಖ್ ಖಾನ್: ಕಾರಣವೇನು?
ಶಾರುಖ್ ಖಾನ್
Follow us
ಮಂಜುನಾಥ ಸಿ.
|

Updated on:Nov 02, 2023 | 3:22 PM

ದಶಕಗಳಿಂದಲೂ ಗಾಸಿಪ್ ಎಂಬುದು ಬಾಲಿವುಡ್​ನ (Bollywood) ಭಾಗವಾಗಿಯೇ ಬೆಳೆದು ಬಂದಿದೆ. ಅಮಿತಾಬ್ ಬಚ್ಚನ್​ಗಿಂತಲೂ ಹಿಂದಿನ ಕಾಲದಿಂದಲೂ ನಟ-ನಟಿಯರ ಅಫೇರ್​ಗಳು, ಅವುಗಳ ಬಗೆಗಿನ ವರ್ಣರಂಜಿತ ಸುದ್ದಿಗಳು ಪ್ರಕಟ, ಪ್ರಸಾರ ಆಗುತ್ತಲೇ ಇದ್ದವು. ಇತ್ತೀಚೆಗಂತೂ ಕೆಲವು ನಟ-ನಟಿಯರ ಹೆಸರುಗಳು ವಾರಕ್ಕೊಬ್ಬರೊಡನೆ ಜೋಡಣೆಯಾಗುತ್ತದೆ. ಆದರೆ ಈ ಗಾಸಿಪ್​ಗಳ ಗ್ರಿಪ್ಪಿಗೆ ಸಿಗದೆ ತಪ್ಪಿಸಿಕೊಂಡಿರುವ ನಟರೆಂದರೆ ಅದು ಶಾರುಖ್ ಖಾನ್. ಬಾಲಿವುಡ್​ನ ಕಿಂಗ್ ಆಫ್ ರೊಮ್ಯಾನ್ಸ್ ಎಂದೇ ಹೆಸರಾಗಿದ್ದರೂ ಸಹ ಶಾರುಖ್ ಖಾನ್ ಹೆಸರು ಸಹನಟಿಯರೊಟ್ಟಿಗೆ ಕೇಳಿ ಬಂದಿದ್ದು ಅಪರೂಪದಲ್ಲಿ ಅತ್ಯಂತ ಅಪರೂಪ.

ದಶಕಗಳ ಹಿಂದೆ ಮಾಡಿದ ಸಂದರ್ಶನವೊಂದರಲ್ಲಿ, ಸಂದರ್ಶಕಿ ಶಾರುಖ್ ಖಾನ್​ಗೆ ಈ ಬಗ್ಗೆ ಪ್ರಶ್ನೆ ಕೇಳಿದ್ದರು, ನಿಮ್ಮ ವಾರಗೆಯ ನಟರ ರೀತಿ ನಿಮ್ಮ ಹೆಸರೇಕೆ ಸಹನಟಿಯರೊಟ್ಟಿಗೆ ಕೇಳಿ ಬರುವುದಿಲ್ಲ ಎಂದು ಅದಕ್ಕೆ ತಮಾಷೆಯಾಗಿ ಉತ್ತರಿಸಿರುವ ಶಾರುಖ್ ಖಾನ್, ‘ನಾನು ಗೇ (ಸಲಿಂಗಿ) ಇರಬೇಕು, ಕೆಲವರಂತೂ ನಾನು ಸಲಿಂಗಿ ಎಂದೇ ಭಾವಿಸಿಬಿಟ್ಟಿದ್ದಾರೆ ಎಂದು ನಕ್ಕಿದ್ದಾರೆ. ಮುಂದುವರೆದು, ಈ ಬಗ್ಗೆ ನಾನು ಹೇಳುವುದೇನಿದೆ, ನಾನು ನನ್ನ ಪತ್ನಿಯೊಡನೆ ಬಹಳ ಖುಷಿಯಿಂದ ಇದ್ದೀನಿ, ಸಹ ನಟಿಯರು ಇರುವುದು ಅವರೊಟ್ಟಿಗೆ ನಟಿಸುವುದಕ್ಕೆ ವಿನಃ ಪ್ರೀತಿಸಲು ಅಲ್ಲ ಎಂದು ನಾನು ನಂಬಿದ್ದೇನೆ ಹಾಗೆಯೇ ನಡೆದುಕೊಂಡಿದ್ದೀನಿ” ಎಂದಿದ್ದರು ಶಾರುಖ್ ಖಾನ್.

”ನನ್ನ ಕೆಲವು ಸಹನಟಿಯರೊಟ್ಟಿಗೆ ನಾನೂ ಆತ್ಮೀಯ ಸಂಬಂಧವನ್ನು ಇಟ್ಟುಕೊಂಡಿದ್ದೇನೆ. ಅವರೊಂದಿಗೆ ಉತ್ತಮ ಗೆಳೆತನ ನನಗೆ ಇದೆ. ಹಲವರು ನನ್ನ ಮನೆಗೆ ಬರುತ್ತಾರೆ, ನಾನು ಅವರ ಮನೆಗೆ ಹೋಗುತ್ತೇನೆ. ಖುಷಿ ಹಾಗೂ ದುಃಖಗಳಲ್ಲಿ ನಾನು ಭಾಗಿಯಾಗುತ್ತೇನೆ. ಅವರೂ ಸಹ ನನ್ನ ಖುಷಿ ಹಾಗೂ ದುಃಖಗಳಲ್ಲಿ ಭಾಗಿಯಾಗತ್ತಾರೆ. ಆದರೆ ಅದೊಂದು ಅಂತರ ಹಾಗೂ ಪರಸ್ಪರ ಗೌರವ ಎಂದಿಗೂ ಇದೆ, ಮುಂದೆಯೂ ಇರುತ್ತದೆ” ಎಂದಿದ್ದಾರೆ ಶಾರುಖ್ ಖಾನ್.

ಇದನ್ನೂ ಓದಿ:Shah Rukh Khan: ಶಾರುಖ್ ಖಾನ್‌ ಹೆಸರನ್ನು ಅಭಿನವ್ ಎಂದು ಬದಲಾಯಿಸಿದ್ದ ಪತ್ನಿ ಗೌರಿ ಖಾನ್​; ಕಾರಣ ಏನು?

ಬಾಲಿವುಡ್​ಗೆ ಬಂದ ಬಗೆಯ ಬಗ್ಗೆಯೂ ಮಾತನಾಡಿರುವ ಶಾರುಖ್ ಖಾನ್, ”ನನ್ನ ತಾಯಿಯನ್ನು ಕಳೆದುಕೊಂಡು ಖಿನ್ನತೆಯಲ್ಲಿದ್ದಾಗ ಬದಲಾವಣೆಗಾಗಿ ನಾನು ಮುಂಬೈಗೆ ಬಂದೆ. ಆದರೆ ಇಲ್ಲಿ ನನಗೆ ಕೆಲವು ಅತ್ಯುತ್ತಮ ವ್ಯಕ್ತಿಗಳು ಸಿಕ್ಕರು. ಅವರು ನನ್ನನ್ನು ಬಹಳ ಚೆನ್ನಾಗಿ ನೋಡಿಕೊಂಡರು. ನನಗೆ ಅವಕಾಶಗಳನ್ನು ಕೊಟ್ಟರು, ತಿದ್ದಿ ತೀಡಿದರು. ಇತರರಂತೆ ನನಗೆ ‘ಫ್ಯಾನ್ಸಿ ಸ್ಟಗಲ್’ ಕತೆ ಇಲ್ಲ. ನನ್ನನ್ನು ಇಲ್ಲಿನ ಜನ ಚೆನ್ನಾಗಿಯೇ ನೋಡಿಕೊಂಡರು. ನಾನು ಕಷ್ಟಪಟ್ಟೆ, ಹೋರಾಡಿದೆ ಎಂದೆಲ್ಲ ಹೇಳಿದರೆ ನಾನು ಅವರಿಗೆ ಅವಮಾನ ಮಾಡಿದಂತಾಗುತ್ತದೆ” ಎಂದಿದ್ದರು ಶಾರುಖ್ ಖಾನ್.

ಶಾರುಖ್ ಖಾನ್ ಕೇವಲ 23 ಸಿನಿಮಾಗಳನ್ನಷ್ಟೆ ಮಾಡಿರುವಾಗ ಮಾಡಿರುವ ಆ ಸಂದರ್ಶನದಲ್ಲಿ ತಮ್ಮ ಆಗಿನ ಸಂಭಾವನೆ ಬಗ್ಗೆಯೂ ಮಾತನಾಡಿರುವ ಶಾರುಖ್, ”ಪತ್ರಿಕೆಗಳಲ್ಲಿ ಬರೆಯುತ್ತಿರುವಷ್ಟೆಲ್ಲ ನಾನು ಸಂಭಾವನೆ ಪಡೆಯುತ್ತಿಲ್ಲ. ನಾನು ಈ ವರೆಗೆ 23 ಸಿನಿಮಾಗಳನ್ನು ಮಾಡಿದ್ದೇನೆ. ಅದರಲ್ಲಿ ಅರ್ಧದಷ್ಟು ಬಾಕ್ಸ್ ಆಫೀಸ್​ನಲ್ಲಿ ಹಿಟ್ ಆಗಿವೆ. ಆ 50% ಸಿನಿಮಾಗಳಿಂದ ಬಾಲಿವುಡ್​ಗೆ ಸುಮಾರು 150-200 ಕೋಟಿ ಲಾಭವಾಗಿದೆ. ಅದರಲ್ಲಿ ಒಂದು ಅಥವಾ ಎರಡು ಪರ್ಸೆಂಟ್ ತೆಗೆದುಕೊಂಡರೆ ತಪ್ಪಲ್ಲ ಎಂಬುದು ನನ್ನ ಭಾವನೆ” ಎಂದು ಜಾಣತನದ ಉತ್ತರ ನೀಡಿದ್ದರು ಶಾರುಖ್ ಖಾನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:21 pm, Thu, 2 November 23