ಈ ಸೆಲೆಬ್ರಿಟಿಗಳ ಬೆಡ್​ರೂಂ ಸೀಕ್ರೆಟ್ ಬಗ್ಗೆ ನಿಮಗೆಷ್ಟು ಗೊತ್ತು?

| Updated By: ರಾಜೇಶ್ ದುಗ್ಗುಮನೆ

Updated on: Nov 29, 2023 | 10:27 AM

ಶಾರುಖ್ ಖಾನ್, ಸಲ್ಮಾನ್ ಖಾನ್, ರಣವೀರ್ ಸಿಂಗ್ ಮೊದಲಾದವರು ಬೆಡ್​ರೂಂ ಸೀಕ್ರೆಟ್ ರಿವೀಲ್ ಮಾಡಿದ್ದರು. ಸೆಲೆಬ್ರಿಟಿಗಳ ಬೆಡ್​ರೂಂ ಸೀಕ್ರೆಟ್​ಗಳ ಬಗ್ಗೆ ನಿಮಗೆ ಎಷ್ಟು ಗೊತ್ತು? ಆ ಬಗ್ಗೆ ಇಲ್ಲಿದೆ ಮಾಹಿತಿ.

ಈ ಸೆಲೆಬ್ರಿಟಿಗಳ ಬೆಡ್​ರೂಂ ಸೀಕ್ರೆಟ್ ಬಗ್ಗೆ ನಿಮಗೆಷ್ಟು ಗೊತ್ತು?
ಈ ಸೆಲೆಬ್ರಿಟಿಗಳ ಬೆಡ್​ರೂಂ ಸೀಕ್ರೆಟ್ ಬಗ್ಗೆ ನಿಮಗೆಷ್ಟು ಗೊತ್ತು?
Follow us on

ಸೆಲೆಬ್ರಿಟಿಗಳು ಏನು ಮಾಡುತ್ತಾರೆ, ಅವರ ಜೀವನ ಕ್ರಮ ಯಾವ ರೀತಿಯಲ್ಲಿ ಇರುತ್ತದೆ ಎಂಬಿತ್ಯಾದಿ ಕುತೂಹಲ ಅಭಿಮಾನಿಗಳ ಮನದಲ್ಲಿ ಸದಾ ಕಾಡುತ್ತಲೇ ಇರುತ್ತದೆ. ಅನೇಕ ಸೆಲೆಬ್ರಿಟಿಗಳು ಈ ಬಗ್ಗೆ ಓಪನ್ ಆಗಿ ಮಾತನಾಡಿಕೊಂಡಿದ್ದಿದೆ. ಕೆಲವು ವಿಚಾರಗಳು ಬೇರೆಯವರಿಂದ ಲೀಕ್ ಆಗಿದೆ. ಈ ಬಾಲಿವುಡ್ (Bollywood) ಸೆಲೆಬ್ರಿಟಿಗಳ ಬೆಡ್​ರೂಂ ಸೀಕ್ರೆಟ್​ಗಳ ಬಗ್ಗೆ ನಿಮಗೆ ಎಷ್ಟು ಗೊತ್ತು? ಆ ಬಗ್ಗೆ ಇಲ್ಲಿದೆ ಮಾಹಿತಿ.

ಶಾರುಖ್ ಖಾನ್

ಶಾರುಖ್ ಖಾನ್ ಅವರು ‘ಪಠಾಣ್’ ಹಾಗೂ ‘ಜವಾನ್’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ‘ಡಂಕಿ’ ರಿಲೀಸ್​ಗಾಗಿ ಕಾದಿದ್ದಾರೆ. ಸಲ್ಮಾನ್ ಖಾನ್ ಅವರು ಶಾರುಖ್ ಕುರಿತು ಒಂದು ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದರು. ಶಾರುಖ್ ಖಾನ್​ಗೆ ಗೊರಕೆ ಸಮಸ್ಯೆ ಇದೆಯಂತೆ. ನಿದ್ರಿಸಿದಾಗ ಅವರು ಜೋರಾಗಿ ಗೊರಕೆ ಹೊಡೆಯುತ್ತಾರಂತೆ. ‘ಗೌರಿ ಖಾನ್​ಗೆ ಎಷ್ಟು ಕಷ್ಟ ಆಗಿರಬಹುದು’ ಎಂದು ಅನೇಕರು ನಗೆ ಚಟಾಕಿ ಹಾರಿಸಿದ್ದರು.

ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಮನೆಯಲ್ಲಿ ದೊಡ್ಡ ಬೆಡ್​ ಇಲ್ಲವಂತೆ! ‘ನಾನು ಸಿಂಗಲ್. ಹೀಗಾಗಿ, ಸಣ್ಣ ಮಂಚದ ಮೇಲೆ ಮಲಗುತ್ತೇನೆ’ ಎಂದಿದ್ದರು. ಈ ವಿಚಾರವನ್ನು ಅವರೇ ಹೇಳಿದ್ದರೂ ಅನೇಕರು ಇದನ್ನು ನಂಬಿಲ್ಲ. ‘ಸಲ್ಲು ಮದುವೆ ಆಗದೆ ಇರಬಹುದು. ಆದರೆ, ಅವರು ಸಿಂಗಲ್ ಅಲ್ಲ’ ಎಂದು ಅನೇಕರು ಹೇಳಿದ್ದರು.

ಪ್ರಿಯಾಂಕಾ ಚೋಪ್ರಾ

ನಿಕ್ ಜೋನಸ್ ಕುರಿತು ಒಂದು ಕ್ಯೂಟ್ ವಿಚಾರವನ್ನು ಪ್ರಿಯಾಂಕಾ ಚೋಪ್ರಾ ರಿವೀಲ್ ಮಾಡಿದ್ದರು. ಪ್ರತಿ ದಿನ ಮುಂಜಾನೆ ನಿಕ್ ಜೋನಸ್​ಗೆ ಎಚ್ಚರ ಆದಾಗ ಪ್ರಿಯಾಂಕಾ ಚೋಪ್ರಾ ಅವರ ಮುಖ ಕಾಣಬೇಕಂತೆ. ಆಗ ದಿನ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಅವರದ್ದು.

ಆಲಿಯಾ ಭಟ್

ಆಲಿಯಾ ಭಟ್ ಅವರು ಹಾಸಿಗೆಯಲ್ಲಿ ಎಲ್ಲೆಂದರಲ್ಲಿ ಬೇಕೋ ಅಲ್ಲೆಲ್ಲ ನಿದ್ರಿಸುತ್ತಾರಂತೆ. ರಣಬೀರ್ ಕಪೂರ್ ಅವರು ಈ ಬಗ್ಗೆ ಅಪಸ್ವರ ತೆಗೆದಿದ್ದರು. ಇದನ್ನು ಸಹಿಸಿಕೊಳ್ಳೋದು ಕಷ್ಟ ಎಂದು ಹೇಳಿದ್ದರು.

ಮೀರಾ ರಜಪೂತ್

ಶಾಹಿದ್ ಕಪೂರ್ ಅವರು ಮೀರಾ ರಜಪೂತ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಅವರ ಪತ್ನಿ ಮೀರಾ ಅವರು ಸದಾ ಶಾಹಿದ್ ಕಪೂರ್ ಅವರ ಟಿ-ಶರ್ಟ್ ಧರಿಸಿ ಮಲಗುತ್ತಾರಂತೆ.

ರಣವೀರ್ ಸಿಂಗ್

ರಣವೀರ್ ಸಿಂಗ್ ಅವರು ಕಾಫಿ ವಿತ್ ಕರಣ್ ಸೀಸನ್ 7ಗೆ ಬಂದಿದ್ದರು. ಈ ವೇಳೆ ಅವರು ಒಂದು ಶಾಕಿಂಗ್ ಹೇಳಿಕೆ ರಿವೀಲ್ ಮಾಡಿದ್ದರು. ಅವರು ಸೆಕ್ಸ್​ ಪ್ಲೇಲಿಸ್ಟ್ ಹೊಂದಿದ್ದಾರಂತೆ. ಮೊದಲ ರಾತ್ರಿಯಲ್ಲಿ ಇದನ್ನು ಅವರು ಪ್ಲೇ ಮಾಡಿದ್ದರು.

ಇದನ್ನೂ ಓದಿ: ಮಲೈಕಾ ಅರೋರಾಗೆ 50 ವರ್ಷ; ಅರ್ಧ ಶತಕ ಕಳೆದರೂ ಮಾಸದ ಬ್ಯೂಟಿ

ಮಲೈಕಾ ಅರೋರಾ

ಮಲೈಕಾ ಅರೋರಾ ಅವರು ಸೆಕ್ಸ್ ವಿಚಾರವಾಗಿ ಮಾತನಾಡಿದ್ದರು. ‘ನನಗೆ ಬೆಡ್​ನಲ್ಲಿ ಟಾಪ್​ನಲ್ಲಿ ಇರೋದು ಇಷ್ಟ ಆಗುತ್ತದೆ’ ಎಂದು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:03 am, Wed, 29 November 23