ಖ್ಯಾತ ನಿರ್ದೇಶಕನ ಮೊಬೈಲ್​ಅನ್ನು ದಾಲ್​ನಲ್ಲಿ ಮುಳುಗಿಸಿದ ಶಾರುಖ್​ ಖಾನ್​; ವಿಡಿಯೋ ವೈರಲ್​

| Updated By: ರಾಜೇಶ್ ದುಗ್ಗುಮನೆ

Updated on: Mar 24, 2022 | 7:29 PM

ಶಾರುಖ್​ ಹಾಗೂ ಅನುರಾಗ್​ ಕಶ್ಯಪ್​ ಇಬ್ಬರೂ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಇತ್ತೀಚೆಗೆ ರಿಲೀಸ್​ ಆದ ಜಾಹೀರಾತು ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಈಗ ಹೊಸ ಜಾಹೀರಾತು ರಿಲೀಸ್​ ಆಗಿದೆ.

ಖ್ಯಾತ ನಿರ್ದೇಶಕನ ಮೊಬೈಲ್​ಅನ್ನು ದಾಲ್​ನಲ್ಲಿ ಮುಳುಗಿಸಿದ ಶಾರುಖ್​ ಖಾನ್​; ವಿಡಿಯೋ ವೈರಲ್​
ಶಾರುಖ್​ ಖಾನ್
Follow us on

ನಟ ಶಾರುಖ್​ ಖಾನ್ (Shah Rukh Khan)​ ಅವರ ಕೊನೆಯ ಸಿನಿಮಾ ತೆರೆಗೆ ಬಂದು ಸುಮಾರು ನಾಲ್ಕು ವರ್ಷಗಳೇ ಕಳೆದಿವೆ. ಈಗ ಅವರು ಮತ್ತೆ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಇದರ ಜತೆಗೆ ಶಾರುಖ್​ ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಎಸ್​ಆರ್​ಕೆ+ (SRK+)  ಹೆಸರಿನ ಒಟಿಟಿ ತರುವುದಾಗಿಯೂ ಅವರು ಘೋಷಣೆ ಮಾಡಿದ್ದರು. ಅದು ಡಿಸ್ನಿ ಪ್ಲಸ್ ಹಾಟ್​ಸ್ಟಾರ್​ಗಾಗಿ ಮಾಡಿದ ಜಾಹೀರಾತು ಎಂಬುದು ಆ ಬಳಿಕ ಗೊತ್ತಾಗಿತ್ತು. ಈ ಮಧ್ಯೆ, ಶಾರುಖ್​ ಖ್ಯಾತ ನಿರ್ದೇಶಕ ಅನುರಾಗ್​ ಕಶ್ಯಪ್ (Anurag Kashyap)​ ಅವರ ಮೊಬೈಲ್​ಅನ್ನು ದಾಲ್​ನಲ್ಲಿ ಮುಳುಗಿಸಿದ್ದಾರೆ. ಈ ವಿಡಿಯೋ ವೈರಲ್​ ಆಗಿದೆ.

ಶಾರುಖ್​ ಹಾಗೂ ಅನುರಾಗ್​ ಕಶ್ಯಪ್​ ಇಬ್ಬರೂ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಇತ್ತೀಚೆಗೆ ರಿಲೀಸ್​ ಆದ ಜಾಹೀರಾತು ಸಾಕಷ್ಟು ಮೆಚ್ಚುಗೆ ಪಡೆದುಕೊಂಡಿತ್ತು. ಈಗ ಹೊಸ ಜಾಹೀರಾತು ರಿಲೀಸ್​ ಆಗಿದೆ. ಈ ಜಾಹೀರಾತಿನಲ್ಲಿ ಶಾರುಖ್​, ಅನುರಾಗ್​ ಊಟ ಮಾಡುತ್ತಿರುತ್ತಾರೆ. ಈ ವೇಳೆ ಶಾರುಖ್ ಪಿ.ಎ. ‘ಒಟಿಟಿ ಪ್ಲಾಟ್​ಫಾರ್ಮ್​ಗೆ ಹೊಹೊಸ ಆಲೋಚನೆಗಳು ಬೇಕು’ ಎಂದು ಹೇಳುತ್ತಾರೆ. ಆದರೆ, ಅನುರಾಗ್​ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಒಂದೇ ಸಮನೆ ಊಟ ಮಾಡುತ್ತಲೇ ಇರುತ್ತಾರೆ. ಈ ವೇಳೆ ಸಿಟ್ಟಾದ ಶಾರುಖ್​ ಅವರು ಅನುರಾಗ್​ ಮೊಬೈಲ್​ಅನ್ನು ದಾಲಿನ​ ಪಾತ್ರೆಯಲ್ಲಿ ಹಾಕುತ್ತಾರೆ. ಆ ಬಳಿಕ ಕ್ಷಮೆ ಕೇಳುತ್ತಾರೆ.

ಶಾರುಖ್​ ಖಾನ್ ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟ. ‘ಪಠಾಣ್​’ ಸಿನಿಮಾ ಕೆಲಸದಲ್ಲಿ ಅವರು ಬ್ಯುಸಿ ಇದ್ದಾರೆ. ಈ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಇದರ ಜತೆಗೆ ನಿರ್ಮಾಣದಲ್ಲೂ ಶಾರುಖ್​ ಖಾನ್​ ಬ್ಯುಸಿ ಆಗಿದ್ದಾರೆ. ‘ರೆಡ್​ ಚಿಲ್ಲೀಸ್ ಎಂಟರ್​ಟೇನ್​ಮೆಂಟ್​​’ ಸ್ಟುಡಿಯೋಸ್​ ಅಡಿಯಲ್ಲಿ ಹಲವು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈಗ ಅವರು ಎಸ್​ಆರ್​ಕೆ+ ಹೆಸರಿನ ಒಟಿಟಿ ಪ್ಲಾಟ್​ಫಾರ್ಮ್​ ಲಾಂಚ್ ಮಾಡೋಕೆ ರೆಡಿ ಆಗಿದ್ದಾರೆ ಎನ್ನಲಾಗಿತ್ತು. ಖುದ್ದು ಶಾರುಖ್​ ಅವರೇ ಹೊಸ ಪೋಸ್ಟರ್​ ಹಂಚಿಕೊಂಡು ಈ ಬಗ್ಗೆ ಅಪ್​ಡೇಟ್​ ನೀಡಿದ್ದರು. ಆದರೆ, ಇದು ಡಿಸ್ನಿ+ ಸ್ಟಾರ್ ಜತೆಗೆ ಮಾಡಿಕೊಂಡಿದ್ದ ಒಪ್ಪಂದ ಎಂಬುದು ಆ ಬಳಿಕ ಗೊತ್ತಾಗಿತ್ತು. ಈ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

‘ಪಠಾಣ್​’ ಸಿನಿಮಾದಿಂದ ಒಂದು ಗೆಲುವು ಕಾಣುವುದು ಶಾರುಖ್​ ಖಾನ್​ ಅವರಿಗೆ ತುಂಬ ಅನಿವಾರ್ಯ ಆಗಿದೆ. ಹಾಗಾಗಿ ಅವರು ಈ ಚಿತ್ರಕ್ಕಾಗಿ ಎಲ್ಲಿಲ್ಲದಂತೆ ಕಷ್ಟಪಡುತ್ತಿದ್ದಾರೆ ಎನ್ನಲಾಗಿದೆ. 8 ಪ್ಯಾಕ್​ ಆ್ಯಬ್ಸ್​ ಮೂಲಕ ಅಭಿಮಾನಿಗಳ ಮುಂದೆ ಬಂದು ಮನರಂಜನೆ ನೀಡಲು ಅವರು ತೀರ್ಮಾನಿಸಿದಂತಿದೆ. ಅದಕ್ಕಾಗಿ ದೇಹ ದಂಡಿಸಿ ತಯಾರಾಗಿದ್ದಾರೆ. ಆದರೆ ಶೂಟಿಂಗ್​ ಸಂದರ್ಭದಲ್ಲಿಯೇ ಈ ಫೋಟೋಗಳು ಲೀಕ್​ ಆಗಿರುವುದರಿಂದ ಅಭಿಮಾನಿಗಳಿಗೆ ಮತ್ತು ಚಿತ್ರತಂಡಕ್ಕೆ ಬೇಸರ ಮೂಡಿಸಿದೆ.

ಇದನ್ನೂ ಓದಿ: ಶಾರುಖ್​ ನಟನೆಯ ‘ಪಠಾಣ್​’ ರಿಲೀಸ್ ​ಡೇಟ್​ ಬಗ್ಗೆ ಹೊಸ ಅಪ್​ಡೇಟ್​ ನೀಡಿದ ದೀಪಿಕಾ ಪಡುಕೋಣೆ

ಶಾರುಖ್​ ಖಾನ್​ 8 ಪ್ಯಾಕ್​ ಬಾಡಿ ಫೋಟೋ ವೈರಲ್​; ‘ಪಠಾಣ್​’ ಚಿತ್ರದಲ್ಲಿ ಹೊಸ ಗೆಟಪ್​