ಶಾರುಖ್ ಖಾನ್ ಅವರು ತಮ್ಮ ಜೀವನದಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿದವರು. ಅವರು ಬಾಲಿವುಡ್ನಲ್ಲಿ ಇದ್ದು ಹಲವು ದಶಕ ಕಳೆದಿದೆ. ಅವರು ತಮ್ಮ ಜೀವನದಲ್ಲಿ ನಡೆದ ಹಲವು ಅನುಭವಗಳ ಬಗ್ಗೆ ಮಾತನಾಡಿದ್ದರು. ಅವರಿಗೆ ವಿಮಾನ ನಿಲ್ದಾಣದಲ್ಲಿ ಒಂದು ವಿಚಿತ್ರ ಅನುಭವ ಆಗಿತ್ತು. ಆ ಬಗ್ಗೆ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. ಹಾಗಾದರೆ ಅದು ಏನು ಆ ಅನುಭವ? ಇಲ್ಲಿದೆ ವಿವರ.
ಅದು ‘ಪರದೇಶ್’ ಚಿತ್ರದ ಶೂಟಿಂಗ್ ಸಮಯ. ಅಂದರೆ 1996ರ ಸಂದರ್ಭ ಇರಬಹುದು. ಶಾರುಖ್ ಖಾನ್ ಅವರು ನ್ಯೂಯಾರ್ಕ್ನಲ್ಲಿ ಇದ್ದರು. ಅವರು ಆಗ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದರು. ಗೌರಿ ಖಾನ್ ಪ್ರೆಗ್ನೆಂಟ್ ಆಗಿದ್ದರು. ಮಗು ಆಗುವ ಖುಷಿಯಲ್ಲಿ ಇದ್ದ ಶಾರುಖ್ಗೆ ಶಾಕಿಂಗ್ ಸುದ್ದಿ ಒಂದು ಬಂದಿತ್ತು. ‘ಗೌರಿ ಖಾನ್ಗೆ ಮಿಸ್ ಕ್ಯಾರೇಜ್ ಆಗಿದೆ’ ಎಂದು ಸುದ್ದಿ ಬಂದಿತ್ತು. ಈ ಸುದ್ದಿ ಕೇಳಿ ಶಾರುಖ್ ಖಾನ್ ನ್ಯೂಯಾರ್ಕ್ ವಿಮಾನ ನಿಲ್ದಾಣದಿಂದ ಭಾರತಕ್ಕೆ ಬರುವವರಿದ್ದರು.
‘ಪರದೇಶ್ ಸಿನಿಮಾ ಶೂಟ್ ಮಾಡುತ್ತಿದ್ದೆ. ಇದಕ್ಕೆ ನ್ಯೂಯಾರ್ಕ್ನಲ್ಲಿದ್ದೆ. ಲಾಸ್ ಎಂಜಲೀಸ್ನಿಂದ ನ್ಯೂಯಾರ್ಕ್ ಬಂದೆ. ನಾನು ಬ್ಯಾಗ್ ಹಿಡಿದುಕೊಂಡು ನಿಲ್ದಾಣದಲ್ಲಿ ಓಡುತ್ತಿದ್ದೆ. ಆಗ ಮಹಿಳೆ ಒಬ್ಬರು ಬಂದು ಆಟೋಗ್ರಾಫ್ ಎಂದು ಕೂಗಿದರು. ನಾನು ನನ್ನದೇ ಚಿಂತೆಯಲ್ಲಿ ಇದ್ದೆ. ನಾನು ಕಷ್ಟಪಟ್ಟು ಚೆಕ್ಇನ್ ಆದೆ. ಅಲ್ಲಿಯೂ ಮಹಿಳೆ ಬಂದಳು. ನಾನು ನಿಮ್ಮ ದೊಡ್ಡ ಅಭಿಮಾನಿ ಎಂದಳು’ ಎಂದು ಘಟನೆ ವಿವರಿಸಿದ್ದಾರೆ ಶಾರುಖ್.
ಇದನ್ನೂ ಓದಿ: ‘ಸ್ತ್ರೀ 2’ ನಿರ್ದೇಶಕನ ಹಿಂದೆ ಬಿದ್ದ ಶಾರುಖ್ ಖಾನ್? ಅಡ್ವೆಂಚರ್ ಸಿನಿಮಾಗೆ ಸಹಿ
ಆ ಬಳಿಕ ನಡೆದಿದ್ದು ಮಾತ್ರ ಸಖತ್ ಫನ್ನಿ ಆಗಿತ್ತು. ಏಕೆಂದರೆ ಮಹಿಳೆ ಬರುತ್ತಿದ್ದಂತೆ ಶಾರುಖ್ ಎಂದು ಕೂಗೋ ಬದಲು, ‘ಅಕ್ಷಯ್ ಐ ಲವ್ಯೂ’ ಎಂದರು. ಆಗ ಶಾರುಖ್ ಖಾನ್ಗೆ ಇದು ಕನ್ಫ್ಯೂಸ್ ಆಗಿ ಹೇಳಿದ್ದು ಅನ್ನೋದು ಸ್ಪಷ್ಟವಾಗಿತ್ತು. ಶಾರುಖ್ ಖಾನ್ ಅವರನ್ನು ಅಕ್ಷಯ್ ಎಂದು ಭಾವಿಸಿದ್ದರು ಆ ಮಹಿಳೆ.
ಶಾರುಖ್ ಖಾನ್ ಅವರು ಕಳೆದ ವರ್ಷ ಬ್ಯಾಕ್ ಟು ಬ್ಯಾಕ್ ಮೂರು ಹಿಟ್ ನೀಡಿದ್ದರು. ಈಗ ಅವರು ಕೆಲವು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಈ ಪೈಕಿ ‘ಕಿಂಗ್’ ಮೊದಲಾದ ಸಿನಿಮಾಗಳು ಪ್ರಮುಖವಾಗಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ