‘ಸ್ತ್ರೀ 2’ ನಿರ್ದೇಶಕನ ಹಿಂದೆ ಬಿದ್ದ ಶಾರುಖ್ ಖಾನ್? ಅಡ್ವೆಂಚರ್ ಸಿನಿಮಾಗೆ ಸಹಿ

ಕೆಲವು ವರದಿಗಳ ಪ್ರಕಾರ ಶಾರುಖ್ ಖಾನ್ ಅವರು ನಿರ್ದೇಶಕ ಅಮರ್ ಕೌಶಿಕ್ ಜೊತೆ ಮಾತುಕತೆ ನಡೆಸುತ್ತಿದ್ದಾರಂತೆ. ಅಮರ್ ಕೌಶಿಕ್ ಅವರು ‘ಸ್ತ್ರೀ 2’ ನಿರ್ದೇಶನ ಮಾಡಿ ಫೇಮಸ್ ಆಗಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 600 ಕೋಟಿ ರೂಪಾಯಿ ಗಳಿಕೆ ಮಾಡಿದೆ.

‘ಸ್ತ್ರೀ 2’ ನಿರ್ದೇಶಕನ ಹಿಂದೆ ಬಿದ್ದ ಶಾರುಖ್ ಖಾನ್? ಅಡ್ವೆಂಚರ್ ಸಿನಿಮಾಗೆ ಸಹಿ
ಶಾರುಖ್
Follow us
ರಾಜೇಶ್ ದುಗ್ಗುಮನೆ
|

Updated on: Oct 04, 2024 | 12:51 PM

ಶಾರುಖ್ ಖಾನ್ ನಟನೆಯ ‘ಪಠಾಣ್’, ‘ಜವಾನ್’ ಹಾಗೂ ‘ಡಂಕಿ’ ಸಿನಿಮಾದಿಂದ ಆಗಿರೋ ಬಿಸ್ನೆಸ್ ಬರೋಬ್ಬರಿ 2,500 ಕೋಟಿ ರೂಪಾಯಿ. ಇದಾದ ಬಳಿಕ ಅವರ ನಟನೆಯ ಯಾವುದೇ ಹೊಸ ಸಿನಿಮಾ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ. ಹಾಗಂದ ಮಾತ್ರಕ್ಕೆ ಅವರು ಸಿನಿಮಾ ಕಥೆನ ಕೇಳುತ್ತಲೇ ಇಲ್ಲ ಎಂದಲ್ಲ. ಅವರು ಕೆಲವು ಕಥೆಗಳನ್ನು ಕೇಳಿ ಫೈನಲ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಶಾರುಖ್ ಖಾನ್ ಅವರು ‘ಕಿಂಗ್’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾನ ಸುಜಯ್ ಘೋಷ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಇದರ ಜೊತೆಗೆ ‘ಪಠಾಣ್ 2’ ಚಿತ್ರದಲ್ಲೂ ನಟಿಸುತ್ತಿದ್ದು ಯಶ್ ರಾಜ್ ಫಿಲ್ಮ್ಸ್ ಇದನ್ನು ನಿರ್ಮಾಣ ಮಾಡುತ್ತಿದೆ. ಇದಕ್ಕೆ ಇನ್ನೂ ನಿರ್ದೇಶಕರು ಫೈನಲ್​ ಆಗಿಲ್ಲ. ‘ಕಿಂಗ್’ ಆರಂಭಕ್ಕೂ ಮೊದಲು ಅವರು ಮೂರು ಸಿನಿಮಾಗಳನ್ನು ಫೈನಲ್ ಮಾಡಿಕೊಳ್ಳುವ ಆಲೋಚನೆಯಲ್ಲಿ ಇದ್ದಾರೆ.

ಕೆಲವು ವರದಿಗಳ ಪ್ರಕಾರ ಶಾರುಖ್ ಖಾನ್ ಅವರು ನಿರ್ದೇಶಕ ಅಮರ್ ಕೌಶಿಕ್ ಜೊತೆ ಮಾತುಕತೆ ನಡೆಸುತ್ತಿದ್ದಾರಂತೆ. ಅಮರ್ ಕೌಶಿಕ್ ಅವರು ‘ಸ್ತ್ರೀ 2’ ನಿರ್ದೇಶನ ಮಾಡಿ ಫೇಮಸ್ ಆಗಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 600 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಅಮರ್ ಕೌಶಿಕ್ ಅವರು ಶಾರುಖ್​ಗಾಗಿ ಅಡ್ವೆಂಚರ್ ಫಿಲ್ಮ್ ಮಾಡುತ್ತಿದ್ದಾರೆ ಎಂದು ವರದಿ ಆಗಿದೆ.

ಹಾಗಾದರೆ ಈ ಸಿನಿಮಾ ‘ಸ್ತ್ರೀ’ ಯೂನಿವರ್ಸ್​ಗೆ ಕನೆಕ್ಷನ್ ಹೊಂದಿರುತ್ತದೆಯೇ? ಖಂಡಿತವಾಗಿಯೂ ಇಲ್ಲ. ‘ಸ್ತ್ರೀ’ ಯೂನಿವರ್ಸ್​ಗೂ ಇದಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಸದ್ಯ ಶಾರಖ್ ಹಾಗೂ ಅಮರ್ ಕೌಶಿಕ್ ಮಧ್ಯೆ ಮಾತುಕತೆ ನಡೆದಿದ್ದು, ಇನ್ನು ಯಾವುದೂ ಫೈನಲ್ ಆಗಿಲ್ಲ.

ಇದನ್ನೂ ಓದಿ: ‘ಪುಷ್ಪ ನಾನು ಮಾಡಬೇಕಿತ್ತು, ಅಲ್ಲು ಅರ್ಜುನ್ ಸರ್ ಗ್ರೇಟ್ ಬಿಡಿ’: ಶಾರುಖ್ ಖಾನ್

ಶಾರುಖ್ ಖಾನ್ ಅವರು ರಾಜ್ ಮತ್ತು ಡಿಕೆ ಜೊತೆ ಸಿನಿಮಾ ಮಾಡುವ ಉದ್ದೇಶ ಹೊಂದಿದ್ದಾರೆ. ಕಾಮಿಡಿ ಆ್ಯಕ್ಷನ್ ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾ ಫೈನಲ್ ಆಗಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ. ರಾಜ್ ಮತ್ತು ಡಿಕೆ ಒಳ್ಳೆಯ ಕಸುಬುದಾರಿಕೆ ಹೊಂದಿದ್ದಾರೆ. ಅವರ ಜೊತೆ ಶಾರುಖ್ ಸಿನಿಮಾ ಮಾಡಿದರೆ ನಿಜಕ್ಕೂ ಸಿನಿಮಾ ಉತ್ತಮವಾಗಿ ಮೂಡಿ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.