ಬರೋಬ್ಬರಿ 130 ಕೋಟಿ ರೂಪಾಯಿಗೆ ‘ಸಿಂಘಂ ಅಗೇನ್’ ಒಟಿಟಿ ಡೀಲ್​; ಯಾವಾಗ ರಿಲೀಸ್?

ಅಂದಾಜು 350 ಕೋಟಿ ರೂಪಾಯಿ ಬಜೆಟ್​ನಲ್ಲಿ ‘ಸಿಂಘಂ ಅಗೇನ್’ ಸಿನಿಮಾ ನಿರ್ಮಾಣ ಆಗಿದೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾಗೆ 200 ಕೋಟಿ ರೂಪಾಯಿಗೂ ಅಧಿಕ ಕಮಾಯಿ ಆಗಿದೆ. ಒಟಿಟಿ ಪ್ರಸಾರ ಹಕ್ಕುಗಳ ಮಾರಾಟದಿಂದ 130 ಕೋಟಿ ರೂಪಾಯಿ ಸಿಕ್ಕಿದೆ. ಅದೇ ಖುಷಿಯಲ್ಲಿ ಅದ್ದೂರಿಯಾಗಿ ಟ್ರೇಲರ್​ ಲಾಂಚ್​ ಮಾಡಲಾಗುತ್ತಿದೆ.

ಬರೋಬ್ಬರಿ 130 ಕೋಟಿ ರೂಪಾಯಿಗೆ ‘ಸಿಂಘಂ ಅಗೇನ್’ ಒಟಿಟಿ ಡೀಲ್​; ಯಾವಾಗ ರಿಲೀಸ್?
ಅಜಯ್​ ದೇವಗನ್
Follow us
ಮದನ್​ ಕುಮಾರ್​
|

Updated on: Oct 03, 2024 | 8:39 PM

ಅಜಯ್​ ದೇವಗನ್​ ನಟನೆಯ ‘ಸಿಂಘಂ ಅಗೇನ್​’ ಸಿನಿಮಾ ಮೇಲೆ ಸಖತ್ ನಿರೀಕ್ಷೆ ಇದೆ. ಈ ಚಿತ್ರಕ್ಕೆ ರೋಹಿತ್​ ಶೆಟ್ಟಿ ಅವರು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಸಿನಿಮಾದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅದ್ದೂರಿಯಾಗಿ ಟ್ರೇಲರ್​ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಈ ನಡುವೆ ಒಂದು ಎಗ್ಸೈಟಿಂಗ್​ ಸುದ್ದಿ ಕೇಳಿಬಂದಿದೆ. ‘ಸಿಂಘಂ ಅಗೇನ್’ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳು ಬರೋಬ್ಬರಿ 130 ಕೋಟಿ ರೂಪಾಯಿಗೆ ಮಾರಾಟ ಆಗಿದೆ ಎನ್ನಲಾಗಿದೆ. ‘ಅಮೇಜಾನ್​ ಪ್ರೈಂ ವಿಡಿಯೋ’ ಸಂಸ್ಥೆಯು ಒಟಿಟಿ ಹಕ್ಕುಗಳನ್ನು ಖರೀದಿಸಿದೆ.

ಒಟಿಟಿ ಹಕ್ಕುಗಳು ಮಾರಾಟ ಆಗಿವೆ ಎಂದರೆ ‘ಸಿಂಘಂ ಅಗೇನ್​’ ಸಿನಿಮಾ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗುತ್ತೆ ಎಂದರ್ಥವಲ್ಲ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ನವೆಂಬರ್​ 1ರಂದು ತೆರೆಕಾಣಲಿದೆ. ಥಿಯೇಟರ್​ನಲ್ಲಿ ಭರ್ಜರಿ ಪ್ರದರ್ಶನ ಕಂಡ ಹಲವು ದಿನಗಳ ನಂತರ ಒಟಿಟಿಗೆ ಬರಲಿದೆ. ಬೇಡಿಕೆ ಜಾಸ್ತಿ ಇರುವುದರಿಂದ ಈಗಲೇ ಒಟಿಟಿ ಡೀಲ್​ ಮುಗಿದಿದೆ. ನಿರ್ದೇಶಕ ರೋಹಿತ್​ ಶೆಟ್ಟಿ ಅವರು ‘ಅಮೇಜಾನ್​ ಪ್ರೈಂ ವಿಡಿಯೋ’ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹಾಗಾಗಿ ಈ ಸಿನಿಮಾಗೆ ದೊಡ್ಡ ಮೊತ್ತದ ಡೀಲ್​ ಕುದುರಿದೆ.

‘ಸಿಂಘಂ ಅಗೇನ್​’ ಸಿನಿಮಾ ಬಗ್ಗೆ ಭಾರಿ ನಿರೀಕ್ಷೆ ಮೂಡಲು ಇನ್ನೊಂದು ಕಾರಣ ಇದೆ. ಅಜಯ್​ ದೇವಗನ್​ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿಭಾಯಿಸಿರುವುದು ಹೌದಾದರೂ ಕೆಲವು ಅತಿಥಿ ಪಾತ್ರಗಳಲ್ಲಿ ಬಾಲಿವುಡ್​ನ ಘಟಾನುಘಟಿ ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆ. ಕರೀನಾ ಕಪೂರ್​, ರಣವೀರ್​ ಸಿಂಗ್​, ಅಕ್ಷಯ್​ ಕಮಾರ್​, ದೀಪಿಕಾ ಪಡುಕೋಣೆ, ಟೈಗರ್​ ಶ್ರಾಫ್​, ಅರ್ಜುನ್​ ಕಪೂರ್​, ಸನ್ನಿ ಡಿಯೋಲ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಒಟಿಟಿಗೆ ಬಂದಿದೆ ಅಜಯ್​ ದೇವಗನ್​ ನಟನೆಯ ಫ್ಲಾಪ್​ ಸಿನಿಮಾ; ಆದರೆ ಜನ ಕೇಳ್ತಿರೋದೇ ಬೇರೆ

ಅಕ್ಟೋಬರ್​ 7ರಂದು ಮುಂಬೈನ ‘ನೀತಾ ಮುಕೇಶ್ ಅಂಬಾನಿ ಕಲ್ಚರಲ್​ ಸೆಂಟರ್​’ನಲ್ಲಿ ಎರಡು ಸಾವಿರ ಅಭಿಮಾನಿಗಳ ಸಮ್ಮುಖದಲ್ಲಿ ‘ಸಿಂಘಂ ಅಗೇನ್​’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಲಿದೆ. ಟ್ರೇಲರ್​ ಬಿಡುಗಡೆ ಬಳಿಕ ಸಿನಿಮಾದ ಮೇಲಿಲ ನಿರೀಕ್ಷೆ ಇನ್ನಷ್ಟು ಜಾಸ್ತಿ ಆಗಲಿದೆ. ರೋಹಿತ್​ ಶೆಟ್ಟಿ, ಅಜಯ್​ ದೇವಗನ್​ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಸಿಂಘಂ ಅಗೇನ್’ ಸಿನಿಮಾ ಸ್ಥಾನ ಪಡೆದುಕೊಂಡಿದೆ. ಭಾರಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.