ಒಟಿಟಿಗೆ ಬಂದಿದೆ ಅಜಯ್​ ದೇವಗನ್​ ನಟನೆಯ ಫ್ಲಾಪ್​ ಸಿನಿಮಾ; ಆದರೆ ಜನ ಕೇಳ್ತಿರೋದೇ ಬೇರೆ

100 ಕೋಟಿ ರೂಪಾಯಿಗೂ ಅಧಿಕ ಬಂಡವಾಳ ಹೂಡಿ ‘ಔರೋ ಮೆ ಕಹಾ ಧಮ್​ ಥಾ’ ಚಿತ್ರವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ಕೇವಲ 8.5 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತು. ಈಗ ಒಟಿಟಿಯಲ್ಲಿ ಈ ಸಿನಿಮಾವನ್ನು ವೀಕ್ಷಿಸಬಹುದು. ಆದರೆ ಸಿನಿಪ್ರಿಯರು ಬೇರೊಂದು ಸಿನಿಮಾಗಾಗಿ ಬೇಡಿಕೆ ಇಟ್ಟಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಒಟಿಟಿಗೆ ಬಂದಿದೆ ಅಜಯ್​ ದೇವಗನ್​ ನಟನೆಯ ಫ್ಲಾಪ್​ ಸಿನಿಮಾ; ಆದರೆ ಜನ ಕೇಳ್ತಿರೋದೇ ಬೇರೆ
ಟಬು, ಅಜಯ್​ ದೇವಗನ್​
Follow us
ಮದನ್​ ಕುಮಾರ್​
|

Updated on: Sep 27, 2024 | 7:12 PM

ಬಾಲಿವುಡ್​ ನಟ ಅಜಯ್​ ದೇವಗನ್​ ಅವರು ಈ ವರ್ಷ ಸೋಲು ಮತ್ತು ಗೆಲುವು ಎರಡನ್ನೂ ಕಂಡಿದ್ದಾರೆ. ‘ಶೈತಾನ್’ ಸಿನಿಮಾದಿಂದ ಅವರಿಗೆ ಗೆಲುವು ಸಿಕ್ಕಿತು. ಆದರೆ ‘ಮೈದಾನ್​’ ಮತ್ತು ‘ಔರೋ ಮೆ ಕಹಾ ಧಮ್​ ಥಾ’ ಸಿನಿಮಾದಿಂದ ಸೋಲು ಅನುಭವಿಸುವಂತಾಯಿತು. ಈಗ ಎರಡು ಸಿನಿಮಾಗಳ ಸತತ ಸೋಲಿನಿಂದ ಅವರಿಗೆ ಬೇಸರ ಆಗಿದೆ. ಚಿತ್ರಮಂದಿರದಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ‘ಔರೋ ಮೆ ಕಹಾ ಧಮ್​ ಥಾ’ ಚಿತ್ರವನ್ನು ನೋಡಿಲ್ಲ. ಈಗ ಈ ಸಿನಿಮಾ ಒಟಿಟಿಗೆ ಬಂದಿದೆ. ‘ಅಮೇಜಾನ್​ ಪ್ರೈಂ ವಿಡಿಯೋ’ದಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ.

ಲವ್​ ಸ್ಟೋರಿ ಇರುವ ‘ಔರೋ ಮೆ ಕಹಾ ಧಮ್​ ಥಾ’ ಸಿನಿಮಾದಲ್ಲಿ ಅಜಯ್​ ದೇವಗನ್​ ಮತ್ತು ಟಬು ಅವರು ಜೋಡಿಯಾಗಿ ನಟಿಸಿದ್ದಾರೆ. ಚಿತ್ರಮಂದಿರದಲ್ಲಿ ಈ ಸಿನಿಮಾ ಆಗಸ್ಟ್​ 2ರಂದು ಬಿಡುಗಡೆ ಆಗಿತ್ತು. ಪ್ರೇಕ್ಷಕರನ್ನು ಸೆಳೆದುಕೊಳ್ಳುವಲ್ಲಿ ಸಿನಿಮಾ ವಿಫಲವಾಯಿತು. ನೂರಾರು ಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಚಿತ್ರ ನಿರ್ಮಾಣ ಆಗಿತ್ತು. ಆದರೆ ಕಲೆಕ್ಷನ್​ ಆಗಿದ್ದು ಕೇವಲ 8.5 ಕೋಟಿ ರೂಪಾಯಿ. ಅಜಯ್​ ದೇವಗನ್​ ಅವರಂತಹ ಸ್ಟಾರ್​ ಹೀರೋ ಸಿನಿಮಾಗೆ ಇದು ತುಂಬ ಕಳಪೆ ಕಲೆಕ್ಷನ್​.

ಸ್ಟಾರ್ ನಟರ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಸೋತರೂ ಕೂಡ ಒಟಿಟಿಯಲ್ಲಿ ಹೇಗೋ ಡೀಲ್​ ಕುದುರಿಸುತ್ತವೆ. ಚಿತ್ರಮಂದಿರಕ್ಕೆ ಬಾರದೇ ಇರುವ ಅಭಿಮಾನಿಗಳು ಕೊನೇಪಕ್ಷ ಒಟಿಟಿಯಲ್ಲಾದರೂ ನೋಡುತ್ತಾರೆ ಎಂಬ ಅಭಿಪ್ರಾಯ ಅನೇಕರಿಗೆ ಇದೆ. ಹಾಗಾಗಿ ಈಗ ‘ಔರೋ ಮೆ ಕಹಾ ಧಮ್​ ಥಾ’ ಸಿನಿಮಾವನ್ನು ಒಟಿಟಿಯಲ್ಲಿ ರಿಲೀಸ್​ ಮಾಡಲಾಗಿದೆ. ಆದರೆ ಜನರು ಈ ಸಿನಿಮಾ ಬಗ್ಗೆ ಅಷ್ಟೇನೂ ಆಸಕ್ತಿ ತೋರಿಸಿದಂತೆ ಕಾಣುತ್ತಿಲ್ಲ.

ಇದನ್ನೂ ಓದಿ: ಕನ್ನಡದ ನಿರ್ದೇಶಕನ ಜೊತೆ ಅಜಯ್​ ದೇವಗನ್​ ಸಿನಿಮಾ? ನಡೆಯುತ್ತಿದೆ ಮಾತುಕಥೆ

‘ಅಮೇಜಾನ್​ ಪ್ರೈಂ ವಿಡಿಯೋ’ದ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ‘ಔರೋ ಮೆ ಕಹಾ ಧಮ್​ ಥಾ’ ಸಿನಿಮಾದ ಒಟಿಟಿ ರಿಲೀಸ್​ ಬಗ್ಗೆ ಪೋಸ್ಟ್​​ ಮಾಡಲಾಗಿದೆ. ಇದಕ್ಕೆ ಕಮೆಂಟ್​ ಮಾಡಿದ ಜನರು ಬೇರೊಂದು ಬೇಡಿಕೆ ಇಟ್ಟಿದ್ದಾರೆ. ‘ಮೊದಲು ಸ್ತ್ರೀ 2 ಚಿತ್ರದ ಪ್ರಸಾರ ಆರಂಭಿಸಿ’ ಎಂದು ಸಿನಿಪ್ರಿಯರು ಕಮೆಂಟ್​ ಮಾಡುತ್ತಿದ್ದಾರೆ. ಆ ಸಿನಿಮಾಗೆ ಸಖತ್​ ಬೇಡಿಕೆ ಇದೆ. ಸದ್ಯಕ್ಕೆ ‘ಅಮೇಜಾನ್​ ಪ್ರೈಂ ವಿಡಿಯೋ’ದಲ್ಲಿ ಹೆಚ್ಚುವರಿ ಹಣ ನೀಡಿ ‘ಸ್ತ್ರೀ 2’ ನೋಡುವ ಆಯ್ಕೆಯನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಚಂದದಾರರು ಈ ಸಿನಿಮಾವನ್ನು ಹೆಚ್ಚುವರಿ ಹಣ ಪಾವತಿಸದೇ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.