Pathaan Movie: ಪಾಕಿಸ್ತಾನದಲ್ಲಿ ‘ಪಠಾಣ್​’ ಚಿತ್ರದ ಅಕ್ರಮ ಪ್ರದರ್ಶನ; ಕಾನೂನು ಕ್ರಮ ಕೈಗೊಂಡ ಸೆನ್ಸಾರ್​ ಮಂಡಳಿ

|

Updated on: Feb 06, 2023 | 3:15 PM

Shah Rukh Khan Fans | Pakistan: ಕರಾಚಿಯಲ್ಲಿ ‘ಪಠಾಣ್​’ ಸಿನಿಮಾವನ್ನು ಕಾನೂನು ಬಾಹಿರವಾಗಿ ಪ್ರದರ್ಶಿಸಲಾಗಿದೆ. ಆನ್​ಲೈನ್​ ಮೂಲಕ 900 ರೂಪಾಯಿ ಬೆಲೆಗೆ ಟಿಕೆಟ್​ ಮಾರಾಟ ಮಾಡಲಾಗಿದೆ.

Pathaan Movie: ಪಾಕಿಸ್ತಾನದಲ್ಲಿ ‘ಪಠಾಣ್​’ ಚಿತ್ರದ ಅಕ್ರಮ ಪ್ರದರ್ಶನ; ಕಾನೂನು ಕ್ರಮ ಕೈಗೊಂಡ ಸೆನ್ಸಾರ್​ ಮಂಡಳಿ
ಶಾರುಖ್ ಖಾನ್
Follow us on

ನಟ ಶಾರುಖ್​ ಖಾನ್​ (Shah Rukh Khan) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಪಾಕಿಸ್ತಾನದಲ್ಲೂ ಅವರನ್ನು ಇಷ್ಟಪಡುವ ಜನರು ಸಾಕಷ್ಟು ಮಂದಿ ಇದ್ದಾರೆ. ಆದರೆ ಕಾರಣಾಂತರಗಳಿಂದ ಅಲ್ಲಿ ಭಾರತದ ಸಿನಿಮಾಗಳು ರಿಲೀಸ್​ ಆಗುತ್ತಿಲ್ಲ. ‘ಪಠಾಣ್​’ ಚಿತ್ರದ ಪ್ರದರ್ಶನಕ್ಕೆ ಪಾಕಿಸ್ತಾನದಲ್ಲಿ (Pakistan) ಅವಕಾಶ ಸಿಕ್ಕಿಲ್ಲ. ಹಾಗಿದ್ದರೂ ಕೂಡ ಕೆಲವರು ಈ ಸಿನಿಮಾವನ್ನು ಕದ್ದುಮುಚ್ಚಿ ನೋಡಿದ್ದಾರೆ. ಅಕ್ರಮವಾಗಿ ‘ಪಠಾಣ್​’ ಚಿತ್ರವನ್ನು ಪ್ರದರ್ಶನ ಮಾಡಿದವರ ಮೇಲೆ ಅಲ್ಲಿನ ಸೆನ್ಸಾರ್​ ಮಂಡಳಿ ಕ್ರಮ ಕೈಗೊಂಡಿದೆ ಎಂದು ವರದಿ ಆಗಿದೆ. ವಿಶ್ವಾದ್ಯಂತ ‘ಪಠಾಣ್​’ ಸಿನಿಮಾ (Pathaan Movie) ಅಬ್ಬರಿಸುತ್ತಿದೆ. ಗಲ್ಲಾಪೆಟ್ಟಿಗೆಯಲ್ಲಿ 700 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿ ಮುನ್ನುಗ್ಗುತ್ತಿದೆ. ಆದರೆ ಪಾಕ್​ನಲ್ಲಿರುವ ಶಾರುಖ್​ ಖಾನ್​ ಅಭಿಮಾನಿಗಳು ಈ ಚಿತ್ರವನ್ನು ಮಿಸ್​ ಮಾಡಿಕೊಂಡಿದ್ದಾರೆ.

ಸಿದ್ದಾರ್ಥ್​ ಆನಂದ್​ ಅವರು ‘ಪಠಾಣ್​’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ದೀಪಿಕಾ ಪಡುಕೋಣೆ, ಜಾನ್​ ಅಬ್ರಾಹಂ ಕೂಡ ಈ ಚಿತ್ರದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಕರಾಚಿಯಲ್ಲಿ ‘ಪಠಾಣ್​’ ಸಿನಿಮಾವನ್ನು ಕಾನೂನು ಬಾಹಿರವಾಗಿ ಪ್ರದರ್ಶಿಸಲಾಗುತ್ತಿತ್ತು. ಆನ್​ಲೈನ್​ ಮೂಲಕ 900 ರೂಪಾಯಿ ಬೆಲೆಗೆ ಟಿಕೆಟ್​ ಮಾರಾಟ ಮಾಡಲಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಅಲ್ಲಿನ ಸೆನ್ಸಾರ್​ ಮಂಡಳಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ‘ಪಠಾಣ್​’ ಪ್ರದರ್ಶನವನ್ನು ಕೂಡಲೇ ನಿಲ್ಲಿಸಿದ್ದಾರೆ.

ಇದನ್ನೂ ಓದಿ: Pathaan: ‘ಪಠಾಣ್​ ಇಷ್ಟ ಆಗಿಲ್ಲ’: ಮಗುವಿನ ವಿಮರ್ಶೆಯನ್ನೂ ಗಂಭೀರವಾಗಿ ತೆಗೆದುಕೊಂಡ ಶಾರುಖ್​ ಖಾನ್​

ಇದನ್ನೂ ಓದಿ
Siddharth Anand: ಬಾಲಿವುಡ್​ಗೆ 2023ರ ಮೊದಲ ಬ್ಲಾಕ್​ ಬಸ್ಟರ್​​ ನೀಡಿದ ‘ಪಠಾಣ್​’ ನಿರ್ದೇಶಕ ಸಿದ್ದಾರ್ಥ್​ ಆನಂದ್​
Kangana Ranaut: ‘ಪಠಾಣ್​’ ಸೂಪರ್​ ಹಿಟ್​; ‘ಚಿತ್ರರಂಗ ಇರೋದು ಹಣ ಮಾಡೋಕಲ್ಲ’ ಅಂತ ಕೊಂಕು ನುಡಿದ ಕಂಗನಾ
Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
Pathaan Movie Twitter Review: ‘ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ’; ‘ಪಠಾಣ್​’ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು

ಸೆನ್ಸಾರ್​ ಮಂಡಳಿಯಿಂದ ಸೂಕ್ತ ಪ್ರಮಾಣಪತ್ರ ಸಿಗದ ಹೊರತು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಯಾವುದೇ ಸಿನಿಮಾವನ್ನು ಸಾರ್ವಜನಿಕವಾಗಿ ಅಥವಾ ಖಾಸಗಿಯಾಗಿ ಪ್ರದರ್ಶನ ಮಾಡುವಂತಿಲ್ಲ. ಈ ನಿಯಮ ಉಲ್ಲಂಘಿಸಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ಸೆನ್ಸಾರ್​ ಮಂಡಳಿ ತಿಳಿಸಿದೆ ಎಂದು ವರದಿ ಆಗಿದೆ.

ಬಾಂಗ್ಲಾದೇಶದಿಂದ ಭಾರತಕ್ಕೆ ಬಂದು ‘ಪಠಾಣ್​’ ನೋಡಿದ ಫ್ಯಾನ್ಸ್​:

ಕಾನೂನಿನ ಕೆಲವು ಅಡೆತಡೆಗಳ ಕಾರಣದಿಂದಾಗಿ ಬಾಂಗ್ಲಾದೇಶದಲ್ಲಿ ‘ಪಠಾಣ್​’ ಸಿನಿಮಾ ರಿಲೀಸ್​ ಆಗಿಲ್ಲ. ಆದರೆ ಅಲ್ಲಿರುವ ಶಾರುಖ್​ ಖಾನ್​ ಅಭಿಮಾನಿಗಳ ಉತ್ಸಾಹ ಕಡಿಮೆಯಾಗಿಲ್ಲ. ಹೇಗಾದರೂ ಮಾಡಿ ತಮ್ಮ ನೆಚ್ಚಿನ ನಟ ಸಿನಿಮಾ ನೋಡಲೇಬೇಕು ಎಂಬ ಹಠದಿಂದ ಕೆಲವು ಅಭಿಮಾನಿಗಳು ಭಾರತಕ್ಕೆ ಬಂದಿದ್ದಾರೆ. ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಭಾರತದ ತ್ರಿಪುರಕ್ಕೆ ಬಂದು ‘ಪಠಾಣ್​’ ಚಿತ್ರವನ್ನು ನೋಡಿದ್ದಾರೆ.

ಇದನ್ನೂ ಓದಿ: Shah Rukh Khan: ‘ಪಠಾಣ್​’ ಕಲೆಕ್ಷನ್​ ಇಷ್ಟೇನಾ ಅಂತ ಕೇಳಿದವರಿಗೆ ಸಾವಿರಾರು ಕೋಟಿ ಲೆಕ್ಕ ನೀಡಿದ ಶಾರುಖ್​ ಖಾನ್​

ತ್ರಿಪುರದಲ್ಲಿನ ಚಿತ್ರಮಂದಿರದ ಮಾಲೀಕರೊಬ್ಬರು ಈ ವಿಚಾರವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ‘ಇದು ನಿಜಕ್ಕೂ ಗ್ರೇಟ್​. ಜನರು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದು ‘ಪಠಾಣ್​’ ಸಿನಿಮಾವನ್ನು ನೋಡಿದ್ದಾರೆ. ನಮ್ಮ ‘ರೂಪಸಿ’ ಚಿತ್ರಮಂದಿರಕ್ಕೆ ಬಂದಿದ್ದಕ್ಕೆ ಧನ್ಯವಾದಗಳು’ ಎಂದು ಅವರು ಟ್ವೀಟ್​ ಮಾಡಿದ್ದಾರೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.