ಚಂದ್ರನ ಅಂಗಳದಲ್ಲಿ ಜಾಗ ಖರೀದಿಸಿದ್ದಾರೆ ಬಾಲಿವುಡ್​ನ ಈ ಸೆಲೆಬ್ರಿಟಿಗಳು; ಇಲ್ಲಿದೆ ವಿವರ

| Updated By: ಮದನ್​ ಕುಮಾರ್​

Updated on: Aug 28, 2023 | 3:34 PM

ಚಂದ್ರನ ಮೇಲೆ ಬಾಲಿವುಡ್​ನ ಕೆಲವು ಸೆಲೆಬ್ರಿಟಿಗಳು ಜಾಗ ಖರೀದಿ ಮಾಡಿದ್ದಾರೆ! ಚಂದ್ರನ ಮೇಲೆ ಶಾರುಖ್ ಖಾನ್ ಸೇರಿ ಅನೇಕ ಸೆಲೆಬ್ರಿಟಿಗಳು ಜಾಗ ಖರೀದಿ ಮಾಡಿದ್ದಾರೆ. ಹಾಗಂತ ಈ ಜಾಗದ ಮೇಲೆ ಅವರು ಹಕ್ಕು ಸಾಧಿಸೋಕೆ ಆಗುವುದಿಲ್ಲ.

ಚಂದ್ರನ ಅಂಗಳದಲ್ಲಿ ಜಾಗ ಖರೀದಿಸಿದ್ದಾರೆ ಬಾಲಿವುಡ್​ನ ಈ ಸೆಲೆಬ್ರಿಟಿಗಳು; ಇಲ್ಲಿದೆ ವಿವರ
ಚಂದ್ರನ ಮೇಲೆ ಜಾಗ ಖರೀದಿಸಿದ ಬಾಲಿವುಡ್​ ಸೆಲೆಬ್ರಿಟಿಗಳು
Follow us on

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಕಳುಹಿಸಿರುವ ‘ಚಂದ್ರಯಾನ 3’ ಉಪಗ್ರಹ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟಿದೆ. ಈಗ ಪ್ರಪಂಚದಾದ್ಯಂತ ಚಂದ್ರಯಾನದ್ದೇ (​​Chandrayaan 3) ಸುದ್ದಿ. ಇದರ ಭಾಗವಾದ ವಿಜ್ಞಾನಿಗಳಿಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಚ್ಚರಿಯ ವಿಚಾರ ಎಂದರೆ ಚಂದ್ರನ ಮೇಲೆ ಬಾಲಿವುಡ್​ನ ಕೆಲವು ಸೆಲೆಬ್ರಿಟಿಗಳು ಜಾಗ ಖರೀದಿ ಮಾಡಿದ್ದಾರೆ! ಹೌದು, ಚಂದ್ರನ ಮೇಲೆ ಶಾರುಖ್ ಖಾನ್ (​​Shah Rukh Khan) ಸೇರಿ ಅನೇಕ ಸೆಲೆಬ್ರಿಟಿಗಳು ಜಾಗ ಖರೀದಿ ಮಾಡಿದ್ದಾರೆ. ಹಾಗಂತ ಈ ಜಾಗದ ಮೇಲೆ ನೀವು ಹಕ್ಕು ಸಾಧಿಸೋಕೆ ಆಗುವುದಿಲ್ಲ. ಚಂದ್ರನ ಮೇಲೆ ಜಾಗ ಖರೀದಿಸಿದ ಸೆಲೆಬ್ರಿಟಿಗಳು ಯಾರ್ಯಾರು ಅಂತ ತಿಳಿದುಕೊಳ್ಳಬೇಕಾ ಈ ಸ್ಟೋರಿನಾ ಕಂಪ್ಲೀಟ್ ಓದಿ…

ಶಾರುಖ್ ಖಾನ್:

ಬಾಲಿವುಡ್ ನಟ ಶಾರುಖ್ ಖಾನ್ ಚಂದ್ರನ ಮೇಲೂ ತಮ್ಮ ಆಸ್ತಿ ಹೊಂದಿದ್ದಾರೆ! ಶಾರುಖ್ ಖಾನ್ ಅವರ ಅಭಿಮಾನಿ ಬಳಗ ಸಖತ್ ದೊಡ್ಡದಿದೆ. ಅಚ್ಚರಿ ಎಂದರೆ ಆಸ್ಟ್ರೇಲಿಯಾದ ಮಹಿಳಾ ಅಭಿಮಾನಿ ಪ್ರತಿ ವರ್ಷ ಅವರ ಹುಟ್ಟು ಹಬ್ಬದಂದು ಚಂದ್ರನ ಮೇಲೆ ಜಾಗ ಖರೀದಿಸಿ ನೀಡುವ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಾರೆ. ಈ ಬಗ್ಗೆ ಶಾರುಖ್ ಖಾನ್ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಚಂದ್ರನ ಮೇಲೆ ‘ಸೀ ಆಫ್ ಟ್ರಾನ್​ಕ್ವಾಲಿ’ ಹೆಸರಿನ ಪ್ರದೇಶದಲ್ಲಿ ಶಾರುಖ್ ಖಾನ್ ಆಸ್ತಿ ಹೊಂದಿದ್ದಾರೆ.

ಇದನ್ನೂ ಓದಿ: ಭಾರತ ಚಂದ್ರಯಾನ 3ರಲ್ಲಿ ಕಂಡ ಯಶಸ್ಸಿನ ಬಳಿಕ ಚಂದ್ರನತ್ತ ಹೆಜ್ಜೆ ಇಡಲು ಸಜ್ಜಾದ ಜಪಾನ್

ಸುಶಾಂತ್ ಸಿಂಗ್ ರಜಪೂತ್:

ಬಾಲಿವುಡ್​ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಚಂದ್ರನ ‘ಮರ್ರೆ ಮಾಸ್ಕೋವಿ (ಸೀ ಆಫ್ ಮಾಸ್ಕೋವಿ)’ ಎಂಬಲ್ಲಿ ಜಾಗವನ್ನು ಹೊಂದಿದ್ದರು. ಇವರು ಇದಕ್ಕಾಗಿ ಸುಮಾರು 55 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಇಂಜಿನಿಯರಿಂಗ್ ಪದವಿಧರರಾದ ಇವರು ಬಾಹ್ಯಾಕಾಶದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಈ ಬಗ್ಗೆ ಅವರು ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.

ಅಂಕಿತ್ ಗುಪ್ತಾ:

ಬಿಗ್ ಬಾಸ್ ಖ್ಯಾತಿಯ ಅಂಕಿತ್ ಗುಪ್ತ ಕಿರುತೆರೆಯಲ್ಲಿ ಬ್ಯುಸಿ ಇದ್ದಾರೆ. ಧಾರಾವಾಹಿಗಳಲ್ಲಿ ನಟಿಸುವ ಮೂಲಕ ಅವರು ಹಿಂದಿ ವೀಕ್ಷಕರಿಗೆ ಚಿರಪರಿಚಿತರಾಗಿದ್ದಾರೆ. ಅವರು ಚಂದ್ರನ ಮೇಲೆ ಆಸ್ತಿ ಹೊಂದಿದ್ದಾರೆ. ಇವರ ಅಭಿಮಾನಿಯೊಬ್ಬರು ಈ ಜಾಗವನ್ನು ಖರೀದಿಸಿ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Chandrayaan 3 Success: ಚಂದ್ರಯಾನ 3 ರ ಯಶಸ್ಸಿನ ಶ್ರೇಯಸ್ಸಿಗೆ ಶುರುವಾಗಿದೆ ಪೈಪೋಟಿ?

ಪ್ರಿಯಾಂಕಾ ಚಹರ್ ಚೌಧರಿ:

ಚಂದ್ರನ ಮೇಲೆ ಆಸ್ತಿಯನ್ನು ಹೊಂದಿರುವ ಪೈಕಿ ಕಿರುತೆರೆ ನಟಿ ಪ್ರಿಯಾಂಕಾ ಚಹರ್ ಚೌಧರಿ ಕೂಡ ಒಬ್ಬರು. ಇವರು ‘ಬಿಗ್ ಬಾಸ್ ಹಿಂದಿಯ 16ನೇ ಸೀಸನ್​’ನಲ್ಲಿ ಸ್ಪರ್ಧಿಯಾಗಿದ್ದರು. ಬಿಗ್ ಬಾಸ್​​ ಮನೆಯಿಂದ ಹೊರ ಬಂದ ಬಳಿಕ ಅವರಿಗೆ ಅಭಿಮಾನಿಯೊಬ್ಬರು ಚಂದ್ರನ ಮೇಲಿನ ಜಾಗ ಖರೀದಿಸಿ ಇವರಿಗೆ ನೀಡಿದ್ದರು ಎನ್ನಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.