
ಶಾರುಖ್ ಖಾನ್ ಪಾಲಿಗೆ 2023 ಅದ್ಭುತ ವರ್ಷವಾಗಿತ್ತು. ಸಾಲು-ಸಾಲಾಗಿ ಹಿಂದಿ ಸಿನಿಮಾಗಳು ಮುಳುಗುತ್ತಿರುವ ಸಮಯದಲ್ಲಿ ಶಾರುಖ್ ಖಾನ್ ಒಂದೇ ವರ್ಷ ಬರೋಬ್ಬರಿ ಮೂರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದರು. 2023ರಲ್ಲಿ ಶಾರುಖ್ ಖಾನ್ ನಟನೆಯ ‘ಪಠಾಣ್‘, ‘ಜವಾನ್’ ಹಾಗೂ ‘ಡಂಕಿ’ ಸಿನಿಮಾಗಳು ಬಿಡುಗಡೆ ಆದವು. ಮೂರೂ ಸಿನಿಮಾಗಳು ಬ್ಲಾಕ್ ಬಸ್ಟರ್ ಆದವು. ‘ಡಂಕಿ’ 2023ರ ಡಿಸೆಂಬರ್ನಲ್ಲಿ ಬಿಡುಗಡೆ ಆಯ್ತು. ಅದಾದ ಬಳಿಕ ಒಂದೂವರೆ ವರ್ಷ ಬಿಡುವು ಪಡೆದ ಶಾರುಖ್ ಖಾನ್ ಇದೀಗ ಮತ್ತೆ ಸಿನಿಮಾ ಚಿತ್ರೀಕರಣ ಶುರು ಮಾಡುತ್ತಿದ್ದಾರೆ. ಅದೂ ಅವರ ಅದೃಷ್ಟದ ನಾಯಕಿ ಜೊತೆಗೆ.
ಶಾರುಖ್ ಖಾನ್ ‘ಕಿಂಗ್’ ಹೆಸರಿನ ಆಕ್ಷನ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದಲೂ ಹರಿದಾಡುತ್ತಲೇ ಇದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಹ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಇದೀಗ ಈ ಸಿನಿಮಾದ ಚಿತ್ರೀಕರಣ ಶುರುವಾಗುವ ಸಮಯ ಬಂದಿದೆ. ‘ಕಿಂಗ್’ ಸಿನಿಮಾ ಮೇ ತಿಂಗಳಲ್ಲಿ ಪ್ರಾರಂಭ ಆಗಲಿದೆಯಂತೆ.
ಇದನ್ನೂ ಓದಿ:ಹೊಸ ಮನೆಗೆ ವಾಸ್ತವ್ಯ ಬದಲಿಸಿದ ಶಾರುಖ್ ಖಾನ್, ಕೊಡುತ್ತಿರುವ ಬಾಡಿಗೆ ಎಷ್ಟು?
‘ಕಿಂಗ್’ ಸಿನಿಮಾದಲ್ಲಿ ನಾಯಕಿಯಾಗಿ ಶಾರುಖ್ ಖಾನ್ರ ಲಕ್ಕಿ ನಟಿ ನಟಿಸಲಿದ್ದಾರೆ. ‘ಕಿಂಗ್’ ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಲಿದ್ದಾರೆ. ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್ ಒಟ್ಟಿಗೆ ನಟಿಸುತ್ತಿರುವ ಐದನೇ ಸಿನಿಮಾ ಇದಾಗಲಿದೆ. ಶಾರುಖ್ ಹಾಗೂ ದೀಪಿಕಾ ಜೋಡಿಯಾಗಿ ನಟಿಸಿದ ಐದೂ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ. ‘ಓಂ ಶಾಂತಿ ಓಂ’, ‘ಚೆನ್ನೈ ಎಕ್ಸ್ಪ್ರೆಸ್’, ‘ಹ್ಯಾಪಿ ನ್ಯೂ ಇಯರ್’, ‘ಪಠಾಣ್’ ಸಿನಿಮಾಗಳಲ್ಲಿ ಇವರು ಒಟ್ಟಿಗೆ ನಟಿಸಿದ್ದು ಆ ಎಲ್ಲ ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ.
ಇತ್ತೀಚೆಗಷ್ಟೆ ತಾಯಿಯಾಗಿರುವ ದೀಪಿಕಾ ಪಡುಕೋಣೆ, ಚಿತ್ರರಂಗದಿಂದ ಸಣ್ಣ ವಿರಾಮ ತೆಗೆದುಕೊಂಡಿದ್ದರು. ‘ಕಲ್ಕಿ 2898 ಎಡಿ’ ಸಿನಿಮಾದ ಬಳಿಕ ಯಾವುದೇ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸಿರಲಿಲ್ಲ. ಇದೀಗ ‘ಕಿಂಗ್’ ಸಿನಿಮಾ ಮೂಲಕ ಅವರೂ ಸಹ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ತಾಯಿಯಾಗಿದ್ದ ದೀಪಿಕಾ ಪಡುಕೋಣೆ ಅವರ ದೇಹ ತೂಕ ಸಹಜವಾಗಿಯೇ ಹೆಚ್ಚಾಗಿತ್ತು. ಇದೀಗ ದೇಹ ತೂಕ ಇಳಿಸಿಕೊಂಡು ಮತ್ತೆ ಹಳೆ ಶೇಪ್ಗೆ ಬರುತ್ತಿದ್ದಾರಂತೆ ದೀಪಿಕಾ ಪಡುಕೋಣೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ