ಕೆಲವು ನಿಮಿಷ ಕುಣಿದಿದ್ದಕ್ಕೆ 10 ಕೋಟಿ ಸಂಭಾವನೆ ಪಡೆದ ಶಾರುಖ್ ಖಾನ್, ಸಂಭಾವನೆ ಕೊಟ್ಟವರು ಯಾರು?

|

Updated on: Apr 09, 2023 | 7:28 PM

ಕೆಲವೇ ನಿಮಿಷಗಳ ಕಾಲ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದಕ್ಕೆ 10 ಕೋಟಿ ಸಂಭಾವನೆ ಪಡೆದ ನಟ ಶಾರುಖ್ ಖಾನ್. ಅಂದಹಾಗೆ ಶಾರುಖ್ ಖಾನ್​ಗೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಕೊಟ್ಟವರು ಯಾರು ಗೊತ್ತೆ?

ಕೆಲವು ನಿಮಿಷ ಕುಣಿದಿದ್ದಕ್ಕೆ 10 ಕೋಟಿ ಸಂಭಾವನೆ ಪಡೆದ ಶಾರುಖ್ ಖಾನ್, ಸಂಭಾವನೆ ಕೊಟ್ಟವರು ಯಾರು?
ಶಾರುಖ್ ಖಾನ್
Follow us on

ಸಿನಿಮಾಗಳಲ್ಲಿ ನಟಿಸಲು ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಶಾರುಖ್ ಖಾನ್ (Shah Rukh Khan) ಸಹ ಒಬ್ಬರು. ಸಿನಿಮಾದ ಒಟ್ಟು ಕಲೆಕ್ಷನ್​ನ ಅರ್ಧದಷ್ಟು ಅಥವಾ ಒಂದು ಸಿನಿಮಾಕ್ಕೆ 50 ರಿಂದ ನೂರು ಕೋಟಿ ವರೆಗೆ ಸಂಭಾವನೆ ಪಡೆಯುತ್ತಾರೆ ಶಾರುಖ್ ಖಾನ್. ಆದರೆ ಪಠಾಣ್ ಸಿನಿಮಾ ಸಾವಿರಾರು ಕೋಟಿ ಕಲೆಕ್ಷನ್ ಮಾಡಿದ ಬಳಿಕ ಶಾರುಖ್ ಖಾನ್​ರ ಮಾರುಕಟ್ಟೆ ಮೌಲ್ಯ ಮತ್ತಷ್ಟು ಹೆಚ್ಚಾಗಿದ್ದು ಕೆಲವೇ ನಿಮಿಷಗಳ ಕಾಲ ವೇದಿಕೆ ಮೇಲೆ ಡ್ಯಾನ್ಸ್ ಮಾಡುವುದಕ್ಕೆ 10 ಕೋಟಿ ಸಂಭಾವನೆ ಪಡೆದಿದ್ದಾರೆ. ಅಂದಹಾಗೆ ಕೆಲವೇ ನಿಮಿಷಗಳ ಪ್ರದರ್ಶನಕ್ಕೆ ಶಾರುಖ್ ಖಾನ್ ಗೆ ಇಷ್ಟು ದೊಡ್ಡ ಸಂಭಾವನೆ ಕೊಟ್ಟ ವ್ಯಕ್ತಿ ಸಾಮಾನ್ಯವಾದವರೇನಲ್ಲ.

ಕೆಲವು ದಿನಗಳ ಹಿಂದೆ ನಡೆದ ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMACC) ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ನೃತ್ಯ ಪ್ರದರ್ಶನ ನೀಡಿದ್ದರು. ಶಾರುಖ್ ಖಾನ್ ಮಾತ್ರವೇ ಅಲ್ಲ ಹಲವು ಬಾಲಿವುಡ್ ಸೆಲೆಬ್ರಿಟಿಗಳು, ಹಾಲಿವುಡ್ ಸೆಲೆಬ್ರಿಟಿಗಳು ಅಂದು ವೇದಿಕೆ ಏರಿ ನೃತ್ಯ ಪ್ರದರ್ಶನ ನೀಡಿದ್ದರು. ಆದರೆ ಅಂದು ಅತಿಯಾಗಿ ಗಮನ ಸೆಳೆದಿದ್ದು ಶಾರುಖ್ ಖಾನ್​ರ ನೃತ್ಯ.

ಪಠಾಣ್ ಸಿನಿಮಾದ ಹಾಡಿಗೆ ಸೋಲೋ ಡ್ಯಾನ್ಸ್ ಮಾಡಿದ್ದ ಶಾರುಖ್ ಖಾನ್ ಅದಾದ ಬಳಿಕ ವರುಣ್ ಧವನ್ ಹಾಗೂ ರಣ್ವೀರ್ ಸಿಂಗ್ ಅವರನ್ನು ಜೊತೆ ಮಾಡಿಕೊಂಡು ಅವರಿಗೂ ಪಠಾಣ್ ಸ್ಟೆಪ್​ಗಳನ್ನು ಕಲಿಸಿದ್ದರು. ಅದರ ಜೊತೆಗೆ ವೇದಿಕೆ ಮೇಲೆ ಪಠಾಣ್ ಸಿನಿಮಾದ ಕೆಲವು ಡೈಲಾಗ್​ಗಳನ್ನು ಹೇಳಿ ಬಂದವರನ್ನು ರಂಜಿಸಿದ್ದರು. ಒಟ್ಟಾರೆಯಾಗಿ ಸುಮಾರು 10 ನಿಮಿಷವಷ್ಟೆ ಶಾರುಖ್ ಖಾನ್ ಎನ್​ಎಂಎಸಿಸಿ ಉದ್ಘಾಟನೆ ವೇದಿಕೆ ಮೇಲೆ ಕಾಣಿಸಿಕೊಂಡರು. ಆದರೆ ಈ 10 ನಿಮಿಷಕ್ಕೆ ಅವರಿಗೆ 10 ಕೋಟಿ ಸಂಭಾವನೆ ದೊರೆತಿದೆಯಂತೆ!

ವಿಶ್ವದ ಟಾಪ್ ಶ್ರೀಮಂತರಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿಗೆ 10 ಕೋಟಿ ಬಹಳ ಸಣ್ಣ ಮೊತ್ತ. ಶಾರುಖ್ ಖಾನ್ ಸಹ ಸಣ್ಣ ಕಲಾವಿದ ಏನಲ್ಲ. ಪಠಾಣ್ ಹಿಟ್ ಆದ ಬಳಿಕವಂತೂ ದೇಶ ವಿದೇಶದಲ್ಲಿ ಅವರ ಖ್ಯಾತಿ ದುಪ್ಪಟ್ಟಾಗಿದೆ. ಹಾಗಾಗಿ ಶಾರುಖ್ ಖಾನ್​ಗೆ ಲೈವ್ ಡ್ಯಾನ್ಸ್ ಮಾಡಲು 10 ಕೋಟಿ ಕೊಟ್ಟಿದ್ದು ಸರಿಯಾಗಿಯೇ ಇದೆ ಎಂಬುದು ಅವರ ಅಭಿಮಾನಿಗಳ ವಾದ.

ಇದನ್ನೂ ಓದಿ: ‘ಪಠಾಣ್​’ ಗೆಲುವಿನ ಬಳಿಕ 10 ಕೋಟಿ ರೂ. ಕಾರು ಖರೀದಿಸಿದ ಶಾರುಖ್ ಖಾನ್; ನಂಬರ್​ ಪ್ಲೇಟ್ ಹೇಗಿದೆ ನೋಡಿ

ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನೆಯಲ್ಲಿ ಬಹುತೇಕ ಬಾಲಿವುಡ್​ನ ದೊಡ್ಡ ಸೆಲೆಬ್ರಿಟಿಗಳೆಲ್ಲ ಭಾಗವಹಿಸಿದ್ದರು. ಮಾತ್ರವಲ್ಲದೆ ಹಾಲಿವುಡ್​ನ ಖ್ಯಾತ ನಟ ಟಾಮ್ ಹಾಲೆಂಡ್ ಹಾಗೂ ನಟಿ ಜೆಂಡೆಯಾ ಸಹ ಭಾಗಿಯಾಗಿದ್ದರು. ಬಾಲಿವುಡ್​ ಸ್ಟಾರ್​ಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್, ಹೃತಿಕ್ ರೋಷನ್, ಐಶ್ವರ್ಯಾ ರೈ, ಸಚಿನ್ ತೆಂಡೂಲ್ಕರ್, ರಜನೀಕಾಂತ್, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್, ಕರಣ್ ಜೋಹರ್, ಇನ್ನೂ ಹಲವಾರು ಮಂದಿ ಭಾಗವಹಿಸಿದ್ದರು.

ಎನ್​ಎಂಎಸಿಸಿ ಯು ಪ್ರದರ್ಶನ ಕಲೆಗಳ ಕೇಂದ್ರವಾಗಿದ್ದು, ನಾಟಕ, ಸಂಗೀತ, ಚಿತ್ರಕತೆ, ಫ್ಯಾಷನ್, ಕತೆ ಹೇಳುವಿಕೆ ಇನ್ನೂ ಹಲವು ಪ್ರದರ್ಶನ ಕಲೆಗಳನ್ನು ಪ್ರದರ್ಶಿಸಲು ವೇದಿಕೆಗಳನ್ನು ಒಳಗೊಂಡಿದೆ. ಒಮ್ಮೆಗೆ ಎರಡು ಸಾವಿರ ಮಂದಿ ಕುಳಿತು ವೀಕ್ಷಿಸಬಹುದಾದ ರಂಗಮಂದಿರ ಎನ್​ಎಂಎಸಿಸಿ ನಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ