ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇಬ್ಬರೂ ಕೋಸ್ಟಾರ್ಗಳಾಗಿ ಗಮನ ಸೆಳೆದಿದ್ದಾರೆ. ಮುಂಬೈನ ಎಚ್ಎನ್ ರಿಲೈನ್ಸ್ ಫೌಂಡೇಷನ್ ಆಸ್ಪತ್ರೆಯಲ್ಲಿ ದೀಪಿಕಾ ಅವರು ಸೆಪ್ಟೆಂಬರ್ 8ರಂದು ಮಗಳಿಗೆ ಜನ್ಮನೀಡಿದರು. ಈಗ ಶಾರುಖ್ ಖಾನ್ ಅವರು ದೀಪಿಕಾನ ಭೇಟಿ ಆಗಿದ್ದಾರೆ. ತಾಯಿ ಹಾಗೂ ಮಗುವಿನ ಆರೋಗ್ಯ ವಿಚಾರಿಸಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.
ಶಾರುಖ್ ಖಾನ್ ಅವರು ತಮ್ಮ ರೋಲ್ಸ್ ರಾಯ್ಸ್ನಲ್ಲಿ ಆಗಮಿಸಿದ್ದಾರೆ. ಆಸ್ಪತ್ರೆಗೆ ತೆರಳಿ ಅವರು ದೀಪಿಕಾ-ರಣವೀರ್ ಅವರನ್ನು ಮಾತನಾಡಿಸಿದ್ದಾರೆ. ಮಗುವನ್ನು ನೋಡಿ ಹರಸಿದ್ದಾರೆ. ಈ ದಂಪತಿಗೆ ಅನೇಕ ಗಣ್ಯರು ಬಂದು ಶುಭಾಶಯ ಕೋರುತ್ತಾ ಇದ್ದಾರೆ. ಇತ್ತೀಚೆಗೆ ಮುಕೇಶ್ ಅಂಬಾನಿ ಅವರು ಆಸ್ಪತ್ರೆಗೆ ತೆರಳಿ ದಂಪತಿಗೆ ಶುಭ ಕೋರಿದ್ದರು.
ದೀಪಿಕಾ ಹಾಗೂ ರಣವೀರ್ ಅವರು ಇನ್ಸ್ಟಾಗ್ರಾಮ್ ಮೂಲಕ ಮಗುವಿನ ಆಗಮನದ ಬಗ್ಗೆ ಮಾಹಿತಿ ನೀಡಿದ್ದರು. ಈ ಪೋಸ್ಟ್ಗೆ ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್. ಸಾರಾ ಅಲಿ ಖಾನ್ ಸೇರಿದಂತೆ ಅನೇಕರು ದಂಪತಿಗೆ ಶುಭಾಶಯ ತಿಳಿಸಿದ್ದಾರೆ.
ಇದನ್ನೂ ಓದಿ: ದೀಪಿಕಾ ಪಡುಕೋಣೆ ಮಗುವಿಗಾಗಿ ದುಬೈನಲ್ಲಿ ಶಾಪಿಂಗ್ ಮಾಡಿ ಟ್ರೋಲ್ ಆದ ರಾಖಿ ಸಾವಂತ್
ದೀಪಿಕಾ ಪಡುಕೋಣೆ ಅವರು ಸದ್ಯಕ್ಕೆ ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದಿದ್ದಾರೆ. ಅವರು ಮಗುವಿನ ಆರೈಕೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಲಿದ್ದಾರೆ. ಈಗ ಅವರ ಕೈಯಲ್ಲಿ ಯಾವುದೇ ಸಿನಿಮಾ ಇಲ್ಲ. ‘ಕಲ್ಕಿ 2898 ಎಡಿ’ ಸಿನಿಮಾದ ಸೀಕ್ವೆಲ್ನಲ್ಲಿ ದೀಪಿಕಾ ಕೂಡ ಇರುವ ಅನಿವಾರ್ಯತೆ ಇರುವುದರಿಂದ ಅವರು ಆ ಸಿನಿಮಾನ ಮಾಡಲೇಬೇಕಿದೆ. 2025ರ ಮಾರ್ಚ್ ವೇಳೆಗೆ ಅವರು ಶೂಟಿಂಗ್ ಆರಂಭಿಸೋ ಸಾಧ್ಯತೆ ಇದೆ. ರಣವೀರ್ ಸಿಂಗ್ ಕೂಡ ಕೆಲಸಕ್ಕೆ ರಜೆ ತೆಗೆದುಕೊಂಡಿದ್ದಾರೆ. ಅವರು ‘ಸಿಂಗಂ ಅಗೇನ್’, ‘ಡಾನ್ 3’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ‘ಡಾನ್ 3’ ಚಿತ್ರಕ್ಕೆ ಕಿಯಾರಾ ಅಡ್ವಾಣಿ ನಾಯಕಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:49 am, Fri, 13 September 24