Salaar Vs Dunki: ಅಡ್ವಾನ್ಸ್​ ಬುಕಿಂಗ್​ನಲ್ಲಿ ‘ಸಲಾರ್​’ ಚಿತ್ರವನ್ನು ಹಿಂದಿಕ್ಕಿದ ‘ಡಂಕಿ’

ಪ್ರಭಾಸ್​ ಅವರು ಸತತ ಸೋಲು ಕಂಡಿದ್ದು, ‘ಸಲಾರ್​’ ಮೂಲಕ ಗೆಲ್ಲುವ ಅನಿವಾರ್ಯತೆ ಇದೆ. ಶಾರುಖ್​ ಖಾನ್​ ಅವರು 2023ರಲ್ಲಿ ಎರಡು ಬ್ಲಾಕ್​ ಬಸ್ಟರ್​ ಹಿಟ್​ ನೀಡಿದ್ದು, ‘ಡಂಕಿ’ ಮೂಲಕ ಮೂರನೇ ಗೆಲುವಿಗಾಗಿ ಕಾದಿದ್ದಾರೆ. ಮೊದಲ ದಿನ ಎಷ್ಟು ಕಲೆಕ್ಷನ್​ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಹೆಚ್ಚಾಗಿದೆ.

Salaar Vs Dunki: ಅಡ್ವಾನ್ಸ್​ ಬುಕಿಂಗ್​ನಲ್ಲಿ ‘ಸಲಾರ್​’ ಚಿತ್ರವನ್ನು ಹಿಂದಿಕ್ಕಿದ ‘ಡಂಕಿ’
ಶಾರುಖ್​ ಖಾನ್​, ತಾಪ್ಸಿ ಪನ್ನು, ಪ್ರಭಾಸ್​

Updated on: Dec 19, 2023 | 5:56 PM

ಒಂದು ದಿನದ ಅಂತರದಲ್ಲಿ ‘ಸಲಾರ್​’ ಮತ್ತು ‘ಡಂಕಿ’ (Dunki) ಸಿನಿಮಾಗಳು ತೆರೆ ಕಾಣಲಿವೆ. ಡಿಸೆಂಬರ್​ 21ರಂದು ‘ಡಂಕಿ’ ಸಿನಿಮಾ ಬಿಡುಗಡೆ ಆಗಲಿದೆ. ಶಾರುಖ್​ ಖಾನ್​ (Shah Rukh Khan) ನಟನೆಯ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ. ಡಿಸೆಂಬರ್​ 22ರಂದು ಪ್ರಭಾಸ್​ ಅಭಿನಯದ ‘ಸಲಾರ್​’ (Salaar Movie) ಚಿತ್ರ ತೆರೆಕಾಣಲಿದೆ. ಇದು ಕೂಡ ಹೈಪ್​ ಕ್ರಿಯೇಟ್​ ಮಾಡಿದೆ. ಕಲೆಕ್ಷನ್​ ವಿಚಾರದಲ್ಲಿ ಈ ಎರಡು ಸಿನಿಮಾಗಳ ನಡುವೆ ಪೈಪೋಟಿ ಏರ್ಪಡಲಿದೆ. ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ನಲ್ಲಿ ‘ಸಲಾರ್​’ ಸಿನಿಮಾವನ್ನು ‘ಡಂಕಿ’ ಚಿತ್ರ ಹಿಂದಿಕ್ಕಿದೆ.

2023ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಡಂಕಿ’ ಮತ್ತು ‘ಸಲಾರ್​’ ಸಿನಿಮಾಗಳು ಸ್ಥಾನ ಪಡೆದುಕೊಂಡಿವೆ. ಇತ್ತೀಚೆಗಷ್ಟೇ ಈ ಚಿತ್ರಗಳಿಗೆ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ ಆರಂಭ ಆಯಿತು. Sacnilk ವರದಿಯ ಪ್ರಕಾರ 5 ಭಾಷೆಗಳಲ್ಲಿ ‘ಸಲಾರ್​’ ಸಿನಿಮಾಗೆ 6.03 ಕೋಟಿ ರೂಪಾಯಿ ಮೊತ್ತದ ಟಿಕೆಟ್​ಗಳು ಬುಕ್​ ಆಗಿವೆ. ಹಿಂದಿಯಲ್ಲಿ ಮಾತ್ರ ರಿಲೀಸ್​ ಆಗಲಿರುವ ‘ಡಂಕಿ’ ಸಿನಿಮಾಗೆ 7.46 ಕೋಟಿ ರೂಪಾಯಿ ಮೊತ್ತದ ಟಿಕೆಟ್​ಗಳು ಬುಕ್​ ಆಗಿವೆ.

ಇದನ್ನೂ ಓದಿ: Dunki: ‘ಯು/ಎ’ ಪ್ರಮಾಣಪತ್ರ ಪಡೆದ ‘ಡಂಕಿ’; ಸಿನಿಮಾದ ಅವಧಿ ಬಗ್ಗೆಯೂ ಸಿಕ್ತು ಮಾಹಿತಿ

‘ಸಲಾರ್​’ ಸಿನಿಮಾದ 2,48,564 ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿವೆ. ‘ಡಂಕಿ’ ಸಿನಿಮಾಗೆ ಅದಕ್ಕಿಂತಲೂ ಹೆಚ್ಚು ಟಿಕೆಟ್​ಗಳು ಮಾರಾಟ ಆಗಿವೆ. ಪ್ರಶಾಂತ್​ ನೀಲ್​ ಅವರು ‘ಸಲಾರ್​’ ಚಿತ್ರವನ್ನು ನಿರ್ದೇಶಿಸಿದ್ದಾರೆ. ರಾಜ್​ಕುಮಾರ್​ ಹಿರಾನಿ ಅವರು ‘ಡಂಕಿ’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಎರಡೂ ಸಿನಿಮಾಗಳು ಬೇರೆ ಬೇರೆ ಪ್ರಕಾರದಲ್ಲಿವೆ. ‘ಡಂಕಿ’ ಕ್ಲಾಸ್​ ಆಗಿದ್ದರೆ, ‘ಸಲಾರ್​’ ಮಾಸ್​ ಆಗಿದೆ.

ಇದನ್ನೂ ಓದಿ: ‘ಜವಾನ್​’, ‘ಪಠಾಣ್​’ ರೀತಿಯೇ ‘ಡಂಕಿ’ ಕೂಡ ಹಿಟ್​ ಆಗುತ್ತೆ ಎಂಬುದಕ್ಕೆ ಇಲ್ಲಿವೆ ಕಾರಣಗಳು..

‘ಬಾಹುಬಲಿ 2’ ಬಳಿಕ ಪ್ರಭಾಸ್​ ಅವರು ಸತತ ಸೋಲು ಕಂಡಿದ್ದು, ‘ಸಲಾರ್​’ ಮೂಲಕ ಗೆಲ್ಲುವ ಅನಿವಾರ್ಯತೆ ಇದೆ. ಶಾರುಖ್​ ಖಾನ್​ ಅವರು 2023ರಲ್ಲಿ ಎರಡು ಬ್ಲಾಕ್​ ಬಸ್ಟರ್​ ಹಿಟ್​ ನೀಡಿದ್ದು, ‘ಡಂಕಿ’ ಮೂಲಕ ಮೂರನೇ ಗೆಲುವಿಗಾಗಿ ಕಾದಿದ್ದಾರೆ. ಕ್ರಿಸ್​ ಮಸ್​ ಸಂದರ್ಭದ ರಜೆಯ ಲಾಭ ಪಡೆಯಲು ಈ ಎರಡೂ ಸಿನಿಮಾಗಳು ಪ್ಲ್ಯಾನ್​ ಮಾಡಿಕೊಂಡಿವೆ. ಮೊದಲ ದಿನ ಯಾವ ಚಿತ್ರಕ್ಕೆ ಎಷ್ಟು ಕಲೆಕ್ಷನ್​ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಹೆಚ್ಚಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us