Dunki: ‘ಯು/ಎ’ ಪ್ರಮಾಣಪತ್ರ ಪಡೆದ ‘ಡಂಕಿ’; ಸಿನಿಮಾದ ಅವಧಿ ಬಗ್ಗೆಯೂ ಸಿಕ್ತು ಮಾಹಿತಿ

‘ಡಂಕಿ’ ಸಿನಿಮಾದಲ್ಲಿನ ಕೆಲವು ದೃಶ್ಯಗಳಿಗೆ ಸೆನ್ಸಾರ್​ ಸದಸ್ಯರು ಬದಲಾವಣೆ ಸೂಚಿಸಿದ್ದಾರೆ. ಆ ಎಲ್ಲ ಸೂಚನೆಗಳನ್ನು ಪಾಲಿಸಿದ ಬಳಿಕ ಚಿತ್ರಕ್ಕೆ ‘ಯು/ಎ’ ಪ್ರಮಾಣಪತ್ರ ನೀಡಲಾಗಿದೆ. ಡಿಸೆಂಬರ್​ 21ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಶಾರುಖ್​ ಖಾನ್​ ಅಭಿಮಾನಿಗಳು ‘ಡಂಕಿ’ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Dunki: ‘ಯು/ಎ’ ಪ್ರಮಾಣಪತ್ರ ಪಡೆದ ‘ಡಂಕಿ’; ಸಿನಿಮಾದ ಅವಧಿ ಬಗ್ಗೆಯೂ ಸಿಕ್ತು ಮಾಹಿತಿ
ಶಾರುಖ್​ ಖಾನ್​
Follow us
ಮದನ್​ ಕುಮಾರ್​
|

Updated on: Dec 17, 2023 | 8:05 AM

ನಟ ಶಾರುಖ್​ ಖಾನ್​ (Shah Rukh Khan) ಹಾಗೂ ತಾಪ್ಸಿ ಪನ್ನು ಅವರು ಜೋಡಿಯಾಗಿ ನಟಿಸಿರುವ ಡಂಕಿ’ (Dunki) ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್​ 21ರಂದು ಈ ಸಿನಿಮಾ ಅದ್ದೂರಿಯಾಗಿ ರಿಲೀಸ್​ ಆಗಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್​ ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದು ರಾಜ್​ಕುಮಾರ್​ ಹಿರಾನಿ ನಿರ್ದೇಶನ ಮಾಡಿರುವ ಸಿನಿಮಾ ಆದ್ದರಿಂದ ನಿರೀಕ್ಷೆ ಡಬಲ್​ ಆಗಿದೆ. ಈಗ ‘ಡಂಕಿ’ ಸಿನಿಮಾದ ಸೆನ್ಸಾರ್​ ಪ್ರಕ್ರಿಯೆ ಮುಗಿದಿದ್ದು, ಯು/ಎ ಪ್ರಮಾಣಪತ್ರ (UA Certificate) ಪಡೆದುಕೊಂಡಿದೆ. ಅಲ್ಲದೇ, ಸಿನಿಮಾದ ಅವಧಿ 2 ಗಂಟೆ 41 ನಿಮಿಷ ಇದೆ ಎಂಬುದು ಕೂಡ ತಿಳಿದುಬಂದಿದೆ.

ಯು/ಎ ಪ್ರಮಾಣ ಪತ್ರ ಸಿಕ್ಕರೆ ಚಿತ್ರಕ್ಕೆ ತುಂಬ ಅನುಕೂಲ ಆಗುತ್ತದೆ. 18 ವರ್ಷಕ್ಕಿಂತ ಕಿರಿಯ ಪ್ರೇಕ್ಷಕರು ಕೂಡ ಪಾಲಕರ ಜೊತೆ ಬಂದು ಈ ಸಿನಿಮಾವನ್ನು ನೋಡಬಹುದು. ಹಾಗಾಗಿ ಮಕ್ಕಳೊಂದಿಗೆ ಬಂದು ‘ಡಂಕಿ’ ಸಿನಿಮಾವನ್ನು ವೀಕ್ಷಿಸಬೇಕು ಎಂದುಕೊಂಡ ಪ್ರೇಕ್ಷಕರಿಗೆ ಯಾವುದೇ ಅಡ್ಡಿ ಇರುವುದಿಲ್ಲ. ಇದರಿಂದ ಫ್ಯಾಮಿಲಿ ಪ್ರೇಕ್ಷಕರನ್ನು ಚಿತ್ರ ಸೆಳೆದುಕೊಳ್ಳುತ್ತದೆ.

ಇದನ್ನೂ ಓದಿ: ‘ಡಂಕಿ’ ಚಿತ್ರದ ರಿಲೀಸ್​ ಟೆನ್ಷನ್​ ಮರೆತು ಮಾಲ್ಡೀವ್ಸ್​ಗೆ ತೆರಳಿದ ತಾಪ್ಸಿ ಪನ್ನು

‘ಡಂಕಿ’ ಸಿನಿಮಾದಲ್ಲಿನ ಕೆಲವು ದೃಶ್ಯಗಳಿಗೆ ಸೆನ್ಸಾರ್​ ಸದಸ್ಯರು ಬದಲಾವಣೆ ಸೂಚಿಸಿದ್ದಾರೆ. ಆತ್ಮಹತ್ಯೆಯ ದೃಶ್ಯ ಇರುವಲ್ಲಿ ‘ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ’ ಎಂಬ ಸೂಚನೆಯನ್ನು ನೀಡಲು ತಿಳಿಸಲಾಗಿದೆ. ಅಲ್ಲದೇ ಸಿನಿಮಾದ ಕೊನೆಯಲ್ಲಿ ತೋರಿಸಿದ ಕೆಲವು ವಿಷಯಗಳಿಗೆ ಪುರಾವೆ ಒದಗಿಸುವಂತೆ ಸೂಚಿಸಲಾಗಿದೆ. ಈ ಎಲ್ಲ ಸೂಚನೆಗಳನ್ನು ಪಾಲಿಸಿದ ಬಳಿಕ ಚಿತ್ರಕ್ಕೆ ‘ಯು/ಎ’ ಪ್ರಮಾಣಪತ್ರ ನೀಡಲಾಗಿದೆ.

ಇದನ್ನೂ ಓದಿ: ‘ಜವಾನ್​’, ‘ಪಠಾಣ್​’ ರೀತಿಯೇ ‘ಡಂಕಿ’ ಕೂಡ ಹಿಟ್​ ಆಗುತ್ತೆ ಎಂಬುದಕ್ಕೆ ಇಲ್ಲಿವೆ ಕಾರಣಗಳು..

ರಾಜ್​ಕುಮಾರ್​ ಹಿರಾನಿ ಅವರ ಸಿನಿಮಾದಲ್ಲಿ ಕಥೆಗೆ ಹೆಚ್ಚು ಮಹತ್ವ ನೀಡಲಾಗಿರುತ್ತದೆ. ಇದೇ ಮೊದಲ ಬಾರಿಗೆ ಅವರು ಶಾರುಖ್​ ಖಾನ್​ ಜೊತೆ ಕೈ ಜೋಡಿಸಿರುವುದರಿಂದ ಕೌತುಕ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಬೋಮನ್ ಇರಾನಿ, ವಿಕ್ಕಿ ಕೌಶಲ್​ ಮುಂತಾದ ಕಲಾವಿದರು ಕೂಡ ನಟಿಸಿದ್ದಾರೆ. ವಲಸೆಯ ಕುರಿತ ಕಥೆ ‘ಡಂಕಿ’ ಚಿತ್ರದಲ್ಲಿ ಇದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ. ಈ ಸಿನಿಮಾ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.