ಶಾರುಖ್ ಖಾನ್ ಅಭಿನಯದ ‘ಡಂಕಿ’ ಸಿನಿಮಾ (Dunki Movie) ಬಿಡುಗಡೆಯಾಗಿ 7 ದಿನ ಕಳೆದಿದೆ. ಡಿಸೆಂಬರ್ 21ರಂದು ಈ ಚಿತ್ರ ಬಿಡುಗಡೆ ಆಗಿತ್ತು. ಕ್ಲಾಸ್ ಸಿನಿಮಾ ಆದ್ದರಿಂದ ಈ ಚಿತ್ರ ನಿಧಾನಗತಿಯಲ್ಲಿ ಕಲೆಕ್ಷನ್ ಮಾಡಿದೆ. ಒಟ್ಟು ಏಳು ದಿನಗಳಲ್ಲಿ ಈ ಸಿನಿಮಾದ ಕಲೆಕ್ಷನ್ (Dunki Box Office Collection) 150 ಕೋಟಿ ರೂಪಾಯಿ ಆಗಿದೆ. ಶಾರುಖ್ ಖಾನ್ (Shah Rukh Khan) ಅವರನ್ನು ಕ್ಲಾಸ್ ಅವತಾರದಲ್ಲಿ ನೋಡಬೇಕು ಎಂಬ ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟ ಆಗಿದೆ. ಮಾಸ್ ಪ್ರಿಯರು ಈ ಚಿತ್ರವನ್ನು ಅಷ್ಟಾಗಿ ಮೆಚ್ಚಿಕೊಂಡಿಲ್ಲ. ರಾಜ್ಕುಮಾರ್ ಹಿರಾನಿ ಅವರ ನಿರ್ದೇಶಕನದಲ್ಲಿ ‘ಡಂಕಿ’ ಸಿನಿಮಾ ಮೂಡಿಬಂದಿದೆ.
ಮೊದಲ ದಿನ ಶಾರುಖ್ ಖಾನ್ ಅವರ ಸಿನಿಮಾಗಳು ಬಹುಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತವೆ. ‘ಡಂಕಿ’ ಕೂಡ ಮೊದಲ ದಿನ ಅಂದಾಜು 28 ಕೋಟಿ ರೂಪಾಯಿ ಗಳಿಸಿತು. ನಂತರ ವೀಕೆಂಡ್ ಜೊತೆಗೆ ಕ್ರಿಸ್ಮಸ್ ರಜೆ ಕೂಡ ಇದ್ದಿದ್ದರಿಂದ ಜನರು ಚಿತ್ರಮಂದಿರದ ಕಡೆಗೆ ಹೆಜ್ಜೆ ಹಾಕಿದರು. ಅದರ ಪರಿಣಾಮವಾಗಿ 7 ದಿನಗಳ ಕಾಲ ಉತ್ತಮವಾಗಿ ಪ್ರದರ್ಶನ ಕಂಡಿರುವ ಈ ಸಿನಿಮಾ 150 ಕೋಟಿ ರೂಪಾಯಿ ಗಳಿಸಿದೆ. ಆದರೆ ಸ್ಟಾರ್ ಸಿನಿಮಾ ಎಂಬ ಕಾರಣಕ್ಕೆ ಈ ಮೊತ್ತ ಕಡಿಮೆ ಎನಿಸುತ್ತಿದೆ.
ಇದನ್ನೂ ಓದಿ: ‘ಸ್ಯಾಮ್ ಬಹದ್ದೂರ್’, ‘ಡಂಕಿ’ ಚಿತ್ರಗಳಿಂದ ಹೆಚ್ಚಾಯಿತು ವಿಕ್ಕಿ ಕೌಶಲ್ ಜನಪ್ರಿಯತೆ
‘ಡಂಕಿ’ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಂ ಕೊಚ್ಚರ್, ಅನಿಲ್ ಗ್ರೋವರ್ ಮುಂತಾದವರು ನಟಿಸಿದ್ದಾರೆ. ರಾಜ್ಕುಮಾರ್ ಹಿರಾನಿ ಅವರು ಪ್ರತಿ ಸಿನಿಮಾದಲ್ಲೂ ಒಂದು ಗಟ್ಟಿಯಾದ ಕಥಾವಸ್ತು ಆಯ್ಕೆ ಮಾಡಿಕೊಳ್ಳುತ್ತಾರೆ. ಅಕ್ರಮವಾಗಿ ದೇಶಗಳ ಗಡಿ ದಾಟುವವರ ಬಗ್ಗೆ ‘ಡಂಕಿ’ ಸಿನಿಮಾದಲ್ಲಿ ತೋರಿಸಲಾಗಿದೆ.
ಇದನ್ನೂ ಓದಿ: ‘ಡಂಕಿ’ ಸಿನಿಮಾದ ಬಜೆಟ್ ಎಷ್ಟು ಅಂತ ಕೇಳಿದವರಿಗೆ ಶಾರುಖ್ ಖಾನ್ ಕೊಟ್ಟ ಉತ್ತರ ಏನು?
ಶಾರುಖ್ ಖಾನ್ ಅವರು ಈ ವರ್ಷ ಭರ್ಜರಿ ಲಾಭ ಕಂಡಿದ್ದಾರೆ. ‘ಜವಾನ್’ ಮತ್ತು ‘ಪಠಾಣ್’ ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದವು. ‘ಡಂಕಿ’ ಸಿನಿಮಾ 150 ಕೋಟಿ ರೂಪಾಯಿ ಗಳಿಸಿದೆ. ಶಾರುಖ್ ಖಾನ್ ಇನ್ನೂ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಸ್ಕ್ರಿಪ್ಟ್ ಆಯ್ಕೆಯಲ್ಲಿ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಅವರ ಮುಂದಿನ ಸಿನಿಮಾ ಯಾವುದು ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.