ನಟ ರಣಬೀರ್ ಕಪೂರ್ (Ranbir Kapoor) ಅವರು ಬಾಲಿವುಡ್ನಲ್ಲಿ ಬಹುಬೇಡಿಕೆಯ ನಟನಾಗಿದ್ದಾರೆ. ಹಲವು ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಈಗ ಅವರು ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ರಣಬೀರ್ ಕಪೂರ್ ನಟಿಸಿರುವ ‘ಶಂಷೇರಾ’ ಸಿನಿಮಾ (Shamshera) ಬಿಡುಗಡೆಗೆ ಸಜ್ಜಾಗಿದೆ. ಬಳಿಕ ‘ಬ್ರಹ್ಮಾಸ್ತ್ರ’ ಸಿನಿಮಾ ರಿಲೀಸ್ ಆಗಲಿದೆ. ಕೆಲವೇ ತಿಂಗಳ ಹಿಂದೆ ಅವರು ಆಲಿಯಾ ಭಟ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸೆಲೆಬ್ರಿಟಿಗಳ ಖಾಸಗಿ ಬದುಕಿನ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳಿಗೆ ಸದಾ ಆಸಕ್ತಿ ಇರುತ್ತದೆ. ತಮ್ಮ ನೆಚ್ಚಿನ ನಟ-ನಟಿ ಓದಿದ್ದು ಯಾವ ಶಾಲೆಯಲ್ಲಿ? ಅವರು ತೆಗೆದುಕೊಂಡ ಮಾರ್ಕ್ಸ್ ಎಷ್ಟು? ಇಂಥ ಪ್ರಶ್ನೆಗೆ ಫ್ಯಾನ್ಸ್ ಉತ್ತರ ಹುಡುಕುತ್ತಲೇ ಇರುತ್ತಾರೆ. ರಣಬೀರ್ ಕಪೂರ್ ಅವರು ತಮ್ಮ 10ನೇ ತರಗತಿಯ ( SSLC) ಅಂಕದ ಬಗ್ಗೆ ಮಾತನಾಡಿದ್ದಾರೆ.
ರಣಬೀರ್ ಕಪೂರ್ ಅವರದ್ದು ಫಿಲ್ಮಿ ಕುಟುಂಬ. ಅವರ ಮುತ್ತಾತ ಪೃಥ್ವಿರಾಜ್ ಕಪೂರ್ ಕಾಲದಿಂದಲೂ ಅವರ ಫ್ಯಾಮಿಲಿಯವರು ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಈ ಕುಟುಂಬದ ಯಾರೊಬ್ಬರೂ ಕೂಡ ಶಿಕ್ಷಣದ ಬಗ್ಗೆ ಅಷ್ಟೇನೂ ಆಸಕ್ತಿ ತೋರಿಸಿರಲಿಲ್ಲ. ಅವರ ಫ್ಯಾಮಿಲಿಯಲ್ಲಿ ಮೊದಲು 10ನೇ ತರಗತಿ ಪಾಸ್ ಮಾಡಿದ್ದೇ ರಣಬೀರ್ ಕಪೂರ್ ಎಂಬುದು ಅಚ್ಚರಿಯ ವಿಚಾರ. ಈ ಬಗ್ಗೆ ಅವರೇ ಸ್ವತಃ ಹೇಳಿದ್ದಾರೆ.
‘ಶಂಷೇರಾ’ ಸಿನಿಮಾದ ಪ್ರಚಾರಕ್ಕಾಗಿ ಅನೇಕ ಕಡೆಗಳಲ್ಲಿ ರಣಬೀರ್ ಕಪೂರ್ ಅವರು ಸಂದರ್ಶನ ನೀಡುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯನ್ಸರ್ ಆದ ಡಾಲಿ ಸಿಂಗ್ ಅವರಿಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಎಜ್ಯುಕೇಷನ್ ಕುರಿತು ಮಾತನಾಡಿದ್ದಾರೆ. ‘ವಿದ್ಯಾಭ್ಯಾಸದಲ್ಲಿ ನಾನು ತುಂಬ ವೀಕ್ ಆಗಿದ್ದೆ. ನನ್ನ ಬಗ್ಗೆ ನಮ್ಮ ಕುಟುಂಬದವರಿಗೆ ಯಾವುದೇ ನಿರೀಕ್ಷೆ ಇರಲಿಲ್ಲ. 10ನೇ ತರಗತಿಯಲ್ಲಿ ನಾನು ಶೇಕಡ 53.4 ಅಂಕ ಪಡೆದುಕೊಂಡೆ. ಅದಕ್ಕಾಗಿ ನಮ್ಮ ಫ್ಯಾಮಿಲಿಯವರಿಗೆ ತುಂಬ ಖುಷಿ ಆಯಿತು. ದೊಡ್ಡ ಪಾರ್ಟಿ ಅರೇಂಜ್ ಮಾಡಿದ್ದರು’ ಎಂದಿದ್ದಾರೆ ರಣಬೀರ್ ಕಪೂರ್.
ಇದನ್ನೂ ಓದಿ: Alia Bhatt Pregnant: ಆಲಿಯಾ ಭಟ್ ಪ್ರೆಗ್ನೆಂಟ್; ರಣಬೀರ್ ಕಪೂರ್ ಜತೆ ಮದುವೆ ಆಗಿ ಎರಡೂವರೆ ತಿಂಗಳಲ್ಲಿ ಗುಡ್ ನ್ಯೂಸ್
‘ಶಂಷೇರಾ’ ಚಿತ್ರದಲ್ಲಿ ರಣಬೀರ್ ಕಪೂರ್ ಅವರಿಗೆ ದ್ವಿಪಾತ್ರ ಇದೆ. ನಾಯಕಿಯಾಗಿ ವಾಣಿ ಕಪೂರ್ ನಟಿಸಿದ್ದಾರೆ. ಮುಖ್ಯ ಪಾತ್ರವೊಂದರಲ್ಲಿ ಸಂಜಯ್ ದತ್ ನಟಿಸಿದ್ದಾರೆ. ಕರಣ್ ಮಲ್ಹೋತ್ರಾ ನಿರ್ದೇಶನ ಮಾಡಿರುವ ಈ ಸಿನಿಮಾ ಜುಲೈ 22ಕ್ಕೆ ಬಿಡುಗಡೆ ಆಗಲಿದೆ.
Published On - 2:47 pm, Sun, 10 July 22