ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರು ಬಾಲಿವುಡ್ನಲ್ಲಿ ಭಿನ್ನವಾಗಿ ಗುರುತಿಸಿಕೊಳ್ಳುತ್ತಾರೆ. ಅವರು ನಟಿ ಎನ್ನುವುದಕ್ಕಿಂತ ಉದ್ಯಮಿ ಎಂದು ಅವರನ್ನು ಕರೆಯೋದು ಉತ್ತಮ. ಬೆಂಗಳೂರು ಸೇರಿ ಅನೇಕ ಕಡೆಗಳಲ್ಲಿ ರೆಸ್ಟೋರೆಂಟ್ಗಳನ್ನು ಅವರು ಹೊಂದಿದ್ದಾರೆ. ಇದರ ಜೊತೆಗೆ ಸಿನಿಮಾ ನಟನೆ ಮತ್ತಿತ್ಯಾದಿ ಕಡೆಗಳಿಂದ ಅವರಿಗೆ ಹಣ ಬರುತ್ತಿದೆ. ಇಂದು (ಜೂನ್ 8) ಅವರಿಗೆ ಜನ್ಮದಿನ. ಎಲ್ಲರೂ ಶಿಲ್ಪಾಗೆ ಶುಭಾಶಯ ಕೋರುತ್ತಿದ್ದಾರೆ. ಶಿಲ್ಪಾ ಶೆಟ್ಟಿಗೆ ಬರೋಬ್ಬರಿ ಏಳು ಮೂಲಗಳಿಂದ ಹಣ ಬರುತ್ತಿದೆ.
ಶಿಲ್ಪಾ ಶೆಟ್ಟಿ ಅವರ ಆಸ್ತಿ 134 ಕೋಟಿ ರೂಪಾಯಿ ಎನ್ನಲಾಗಿದೆ. ಅವರು ಈ ಮೊದಲು ನಟಿ ಆಗಿದ್ದರು. ಆ ಬಳಿಕ ತಮ್ಮ ಸ್ಮಾರ್ಟ್ ನಿರ್ಧಾರಗಳಿಂದ ಉದ್ಯಮಿ ಎನಿಸಿಕೊಂಡರು. ಅವರಿಗೆ ಬರೋಬ್ಬರಿ ಏಳು ಮೂಲಗಳಿಂದ ಹಣ ಹರಿದು ಬರುತ್ತಿದೆ. ಅವರ ಬಳಿ ದುಬಾರಿ ಕಾರುಗಳಿವೆ. ಅವರ ಪತಿ ರಾಜ್ ಕುಂದ್ರಾ ವಿವಾದಗಳ ಮೂಲಕ ಸುದ್ದಿ ಆಗುತ್ತಾರೆ.
2022ರಲ್ಲಿ ಶಿಲ್ಪಾ ಶೆಟ್ಟಿ ಅವರು ವಿಎಫ್ಎಕ್ಸ್ ಬಿಸ್ನೆಸ್ ಆರಂಭಿಸಿದರು. ಅವರು ಎಸ್ವಿಎಸ್ ಸ್ಟುಡಿಯೋ ಜೊತೆ ಕೈ ಜೋಡಿಸಿದರು. ಈ ಉದ್ಯಮದಲ್ಲಿ ಅವರು 10 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಇತ್ತೀಚೆಗೆ ವಿಎಫ್ಎಕ್ಸ್ಗೆ ಸಖತ್ ಬೇಡಿಕೆ ಇದೆ
ಬ್ಯಾಸ್ಟಿಯನ್ ರೆಸ್ಟೋರೆಂಟ್ ಚೈನ್ನ ಶಿಲ್ಪಾ ಹೊಂದಿದ್ದಾರೆ. 2019ರಲ್ಲಿ ಈ ಕಂಪನಿಯ ಶೇ.50 ಷೇರನ್ನು ಖರೀದಿ ಮಾಡಿದರು. ರಾಜ್ನೀತ್ ಬಿಂದ್ರಾ ಅವರು ಇದನ್ನು ಆರಂಭಿಸಿದ್ದರು. ಮುಂಬೈ, ಬೆಂಗಳೂರು ಮೊದಲಾದ ಕಡೆಗಳಲ್ಲಿ ಇದರ ಬ್ರ್ಯಾಂಚ್ ಇದೆ.
ಶಿಲ್ಪಾ ಶೆಟ್ಟಿ ಅವರು ಬಟ್ಟೆ ಬ್ರ್ಯಾಂಡ್ ಕಡೆ ಹೆಚ್ಚು ಒಲವು ತೋರಿದರು. 2020ರಲ್ಲಿ ಅವರು ‘ಡ್ರೀಮ್ ಎಸ್ಎಸ್’ ಬಟ್ಟೆ ಬ್ರ್ಯಾಂಡ್ ಆರಂಭಿಸಿದರು. ಫ್ಯಾಷನ್ ಡಿಸೈನರ್ ಚಾರು ಹಾಗೂ ಸಂದೀಪ್ ಅರೋರಾ ಜೊತೆ ಅವರು ಕೈ ಜೋಡಿಸಿದ್ದಾರೆ.
ಶಿಲ್ಪಾ ಶೆಟ್ಟಿ ಅವರು ಫಿಟ್ನೆಸ್ಗೆ ಸಖತ್ ಪ್ರಾಮುಖ್ಯತೆ ನೀಡುತ್ತಾರೆ. ಅವರು ಯೋಗ ಮಾಡುತ್ತಾರೆ. ಅವರು ಸಿಂಪಲ್ ಸೋಲ್: ಶಿಲ್ಪಾ ಶೆಟ್ಟಿ ಹೆಸರಿನ ಫಿಟ್ನೆಸ್ ಆ್ಯಪ್ ಆರಂಭಿಸಿದರು. ಹಣ ಪಾವತಿಸಿ ಯೋಗ ವೀಕ್ಷಿಸಬಹುದು.
ಹಲವು ಬ್ರ್ಯಾಂಡ್ಗಳಿಗೆ ಶಿಲ್ಪಾ ಶೆಟ್ಟಿ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ. ಹಲವು ಬ್ರ್ಯಾಂಡ್ಗಳನ್ನು ಶಿಲ್ಪಾ ಪ್ರಚಾರ ಮಾಡುತ್ತಾರೆ. ಇದರಿಂದ ಅವರಿಗೆ ದೊಡ್ಡ ಮಟ್ಟದಲ್ಲಿ ಹಣ ಸಿಗುತ್ತಿದೆ.
ಇದನ್ನೂ ಓದಿ: ಮನೆ ಮುಟ್ಟುಗೋಲು ಬೆನ್ನಲ್ಲೇ ಕುಟುಂಬ ಸಮೇತ ದೈವದ ಮೊರೆ ಹೋದ ನಟಿ ಶಿಲ್ಪಾ ಶೆಟ್ಟಿ
ಹಲವು ಉದ್ಯಮಗಳಲ್ಲಿ ಶಿಲ್ಪಾ ಹೂಡಿಕೆ ಮಾಡಿದ್ದಾರೆ. ಈ ಮೂಲಕ ಅವರು ಪ್ರತಿ ವರ್ಷ ಲಾಭ ಕಾಣುತ್ತಿದ್ದಾರೆ.
ಬಣ್ಣದ ಲೋಕದ ಜೊತೆ ಶಿಲ್ಪಾ ಈಗಲೂ ಸಂಪರ್ಕ ಉಳಿಸಿಕೊಂಡಿದ್ದಾರೆ. ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ರಿಯಾಲಿಟಿ ಶೋಗಳಲ್ಲಿಯೂ ಅವರು ಜಡ್ಜ್ ಆಗಿ ಭಾಗಿ ಆಗುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.