ಸೋಮವಾರಕ್ಕೆ ಶಿಲ್ಪಾ ಶೆಟ್ಟಿ ಮೋಟಿವೇಷನ್; ಗಾಯದಿಂದ ಗುಣಮುಖರಾದ ನಟಿಯಿಂದ ಜಿಮ್, ಯೋಗಾಸನ

|

Updated on: Jan 30, 2023 | 1:42 PM

ಶಿಲ್ಪಾ ಶೆಟ್ಟಿ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಅವರು ಫಿಟ್​ನೆಸ್ ಕಾಯ್ದುಕೊಂಡು ಬಂದಿದ್ದಾರೆ. ಇದಕ್ಕೆ ಸಹಾಯ ಆಗಿರೋದು ಯೋಗ ಎಂದು ಅವರು ಅನೇಕ ಕಡೆಗಳಲ್ಲಿ ಹೇಳಿಕೊಂಡಿದ್ದಿದೆ.

ಸೋಮವಾರಕ್ಕೆ ಶಿಲ್ಪಾ ಶೆಟ್ಟಿ ಮೋಟಿವೇಷನ್; ಗಾಯದಿಂದ ಗುಣಮುಖರಾದ ನಟಿಯಿಂದ ಜಿಮ್, ಯೋಗಾಸನ
ಶಿಲ್ಪಾ ಶೆಟ್ಟಿ
Follow us on

ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರು ಕುಟುಂಬದ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡುತ್ತಿದ್ದಾರೆ. ಇವುಗಳ ಮಧ್ಯೆ ಶಿಲ್ಪಾ ಶೆಟ್ಟಿ ಅವರು ಎಂದಿಗೂ ತಮ್ಮ ವರ್ಕೌಟ್ ತಪ್ಪಿಸಿದವರಲ್ಲ. ಯೋಗ ಹಾಗೂ ಜಿಮ್​ ಎರಡನ್ನೂ ಮಾಡುತ್ತಾರೆ. ಆಗಾಗ ಈ ವಿಡಿಯೋ ಹಾಗೂ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಈಗ ಶಿಲ್ಪಾ ಶೆಟ್ಟಿ ಅವರು ಇಂದು (ಜನವರಿ 30) ಹೊಸ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಸೋಮವಾರದ ಮೋಟಿವೇಷನ್ ನೀಡಿದ್ದಾರೆ.

ಶಿಲ್ಪಾ ಶೆಟ್ಟಿ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಅವರು ಫಿಟ್​ನೆಸ್ ಕಾಯ್ದುಕೊಂಡು ಬಂದಿದ್ದಾರೆ. ಇದಕ್ಕೆ ಸಹಾಯ ಆಗಿರೋದು ಯೋಗ ಎಂದು ಅವರು ಅನೇಕ ಕಡೆಗಳಲ್ಲಿ ಹೇಳಿಕೊಂಡಿದ್ದಿದೆ. ಅವರು ಅನೇಕರಿಗೆ ಸ್ಫೂರ್ತಿ. ಇಂದು (ಜನವರಿ 30) ಅವರು ಹೊಸ ವಿಡಿಯೋ ಹಂಚಿಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು ಹಲವು ರೀತಿಯ ಎಕ್ಸಸೈಸ್​ ಮಾಡುತ್ತಿದ್ದಾರೆ. ಜತೆಗೆ ಜಿಮ್​ನಲ್ಲಿ ವರ್ಕೌಟ್ ಮಾಡುತ್ತಿರುವುದೂ ಇದೆ. ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬೇಕು ಎಂದರೆ ಏನು ಮಾಡಬೇಕು ಎಂಬುದನ್ನು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.

ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರು ಅಶ್ಲೀಲ ಸಿನಿಮಾ ನಿರ್ಮಾಣ​ ಕೇಸ್​ನಲ್ಲಿ ಅರೆಸ್ಟ್ ಆದರು. ಈ ವೇಳೆ ಶಿಲ್ಪಾ ಸಾಕಷ್ಟು ವಿಚಲಿತಗೊಂಡರು. ಆದರೆ, ಅವರು ಎಂದಿಗೂ ಹಿಂಜರಿದಿಲ್ಲ. ಈ ಸಂದರ್ಭದಲ್ಲಿಯೂ ಅವರು ಯೋಗ ಮಾಡುತ್ತಿದ್ದರು. ಪರಿಸ್ಥಿತಿಯನ್ನು ಅವರು ನಿಭಾಯಿಸುವುದನ್ನು ಯೋಗ ಮೂಲಕ ಕಲಿತುಕೊಂಡರು.

ಇದನ್ನೂ ಓದಿ: KD ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ನಟಿಸುವುದು ಬಹುತೇಕ ಖಚಿತ​: ಸುಳಿವು ನೀಡಿದ ಧ್ರುವ ಸರ್ಜಾ

ಶಿಲ್ಪಾ ಶೆಟ್ಟಿ ಅವರು ಈಗ ವೆಬ್​ ಸೀರಿಸ್​ ಮಾಡುತ್ತಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ‘ಇಂಡಿಯನ್ ಪೊಲೀಸ್ ಫೋರ್ಸ್​’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಇದರ ಶೂಟಿಂಗ್ ವೇಳೆ ಅವರ ಕಾಲಿಗೆ ಪೆಟ್ಟಾಗಿತ್ತು. ಇದರಿಂದ ಅವರು ಈಗ ಚೇತರಿಕೆ ಕಂಡಿದ್ದಾರೆ. ಮತ್ತೆ ಅವರು ಶೂಟಿಂಗ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:41 pm, Mon, 30 January 23