Alka Yagnik: ಗಾಯಕಿ ಅಲ್ಕಾ ಯಾಗ್ನಿಕ್ ವಿಶ್ವ ದಾಖಲೆ​; ಯೂಟ್ಯೂಬ್​ ಪ್ರಸಾರದಲ್ಲಿ ಸತತ 3ನೇ ಬಾರಿ ನಂ.1 ಪಟ್ಟ

Alka Yagnik | Alka Yagnik Songs: 2022ರಲ್ಲಿ ಅಲ್ಕಾ ಯಾಗ್ನಿಕ್​ ಅವರ ಹಾಡುಗಳು 15.3 ಬಿಲಿಯನ್​ ಬಾರಿ ಪ್ರಸಾರ ಆಗಿವೆ. ಆ ಮೂಲಕ ಅವರು ವಿಶ್ವದಲ್ಲೇ ನಂಬರ್​ 1 ಸ್ಥಾನ ಪಡೆದುಕೊಂಡಿದ್ದಾರೆ.

Alka Yagnik: ಗಾಯಕಿ ಅಲ್ಕಾ ಯಾಗ್ನಿಕ್ ವಿಶ್ವ ದಾಖಲೆ​; ಯೂಟ್ಯೂಬ್​ ಪ್ರಸಾರದಲ್ಲಿ ಸತತ 3ನೇ ಬಾರಿ ನಂ.1 ಪಟ್ಟ
ಅಲ್ಕಾ ಯಾಗ್ನಿಕ್
Follow us
ಮದನ್​ ಕುಮಾರ್​
|

Updated on: Jan 30, 2023 | 3:10 PM

ಗಾಯಕಿ ಅಲ್ಕಾ ಯಾಗ್ನಿಕ್​ (Alka Yagnik) ಅವರಿಗೆ ಸಿನಿಮಾ ಸಂಗೀತ ಲೋಕದಲ್ಲಿ ಇರುವ ಅನುಭವ ಅಪಾರ. 7 ಸಾವಿರಕ್ಕೂ ಅಧಿಕ ಗೀತೆಗಳಿಗೆ ಅವರು ಧ್ವನಿ ನೀಡಿದ್ದಾರೆ. 1980ರ ಕಾಲದಿಂದ ಇಂದಿನವರೆಗೂ ಅವರು ಬಹುಬೇಡಿಕೆಯ ಗಾಯಕಿ ಆಗಿಯೇ ಮಿಂಚುತ್ತಿದ್ದಾರೆ. 2022ರಲ್ಲಿ ಯೂಟ್ಯೂಬ್​ನಲ್ಲಿ (YouTube) ಅತಿ ಹೆಚ್ಚು ಪ್ರಸಾರ ಕಂಡ ಹಾಡುಗಳು ಈ ಗಾಯಕಿಯದ್ದು ಎಂಬುದು ಹೆಮ್ಮೆಯ ಸಂಗತಿ. ಈ ವಿಚಾರದಲ್ಲಿ ಅವರು ಜಾಗತಿಕ ಮಟ್ಟದ ಅನೇಕ ಜನಪ್ರಿಯ ಗಾಯಕರನ್ನು ಹಿಂದಿಕ್ಕಿದ್ದಾರೆ. ಆ ಮೂಲಕ ಸತತ 3ನೇ ವರ್ಷ ಅವರು ನಂಬರ್ ಒನ್​ ಪಟ್ಟ ಗಿಟ್ಟಿಸಿದ್ದಾರೆ. ಈ ಸಾಧನೆಗಾಗಿ ಅಲ್ಕಾ ಯಾಗ್ನಿಕ್​ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರಿಗೆ ಶುಭಾಶಯಗಳ ಸಂದೇಶ ಹರಿದುಬರುತ್ತಿದೆ. ಅಲ್ಕಾ ಯಾಗ್ನಿಕ್​ ಕಂಠದಲ್ಲಿ ಮೂಡಿಬಂದ ಹಾಡುಗಳನ್ನು (Alka Yagnik Songs) ಮತ್ತೆ ಮತ್ತೆ ಕೇಳುವ ಮೂಲಕ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

2022ರಲ್ಲಿ ಅಲ್ಕಾ ಯಾಗ್ನಿಕ್​ ಅವರ ಹಾಡುಗಳು 15.3 ಬಿಲಿಯನ್​ ಬಾರಿ ವೀಕ್ಷಣೆ ಕಂಡಿವೆ. ಆ ಮೂಲಕ ಅವರು ನಂಬರ್​ 1 ಸ್ಥಾನ ಪಡೆದುಕೊಂಡಿದ್ದಾರೆ. ಪ್ರತಿ ದಿನ ಸರಾಸರಿ 4.2 ಕೋಟಿ ಬಾರಿ ಅವರ ಹಾಡುಗಳು ಪ್ರಸಾರ ಆಗಿವೆ! ಅಲ್ಕಾ ಯಾಗ್ನಿಕ್​ ಅವರ ಹಾಡುಗಳು 2021ರಲ್ಲಿ 17 ಬಿಲಿಯನ್​ ಹಾಗೂ 2020ರಲ್ಲಿ 16.6 ಬಿಲಿಯನ್​ ಬಾರಿ ಪ್ರಸಾರ ಕಂಡಿದ್ದವು.

2022ರ ವರ್ಷದಲ್ಲಿ 14.7 ಬಿಲಿಯನ್​ ಸ್ಟ್ರೀಮಿಂಗ್​ ಹೊಂದಿರುವ ಸಿಂಗರ್​ ಬ್ಯಾಡ್​ ಬನ್ನಿ ಅವರು 2ನೇ ಸ್ಥಾನದಲ್ಲಿ ಇದ್ದಾರೆ. ಮೂರನೇ ಸ್ಥಾನದಲ್ಲಿ ಉದಿತ್​ ನಾರಾಯಣ್​ (10.8 ಬಿಲಿಯನ್​), ನಾಲ್ಕನೇ ಸ್ಥಾನದಲ್ಲಿ ಅರಿಜಿತ್​ ಸಿಂಗ್​ (10.7 ಬಿಲಿಯನ್​) ಹಾಗೂ ಐದನೇ ಸ್ಥಾನದಲ್ಲಿ ಕುಮಾರ್​ ಸಾನು (9.09 ಬಿಲಿಯನ್​) ಇದ್ದಾರೆ. ಆ ಮೂಲಕ ಭಾರತೀಯ ಗಾಯಕರಿಗೆ ಮತ್ತು ಬಾಲಿವುಡ್​ ಗೀತೆಗಳಿಗೆ ಜಾಗತಿಕ ಮಟ್ಟದಲ್ಲಿ ಎಷ್ಟು ಜನಪ್ರಿಯತೆ ಇದೆ ಎಂಬುದು ಸಾಬೀತಾಗಿದೆ.

ಇದನ್ನೂ ಓದಿ
Image
ಮುಂಬೈನಲ್ಲಿ ಒಟ್ಟಾಗಿ ಪಾರ್ಟಿ ಮಾಡಿದ ರಶ್ಮಿಕಾ ಮಂದಣ್ಣ-ಸಿದ್ದಾರ್ಥ್ ಮಲ್ಹೋತ್ರ​; ಫೋಟೋ ವೈರಲ್
Image
Swetha Changappa: ಕಿರುತೆರೆಯಲ್ಲಿ 20 ವರ್ಷ ಪೂರೈಸಿದ ಶ್ವೇತಾ ಚಂಗಪ್ಪ; ಸಿನಿಮಾದಲ್ಲೂ ನಟಿಯ ಯಶಸ್ವಿ ಪಯಣ
Image
Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್​’; ಶಾರುಖ್​ ಫ್ಯಾನ್ಸ್​ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
Image
Rajamouli: ಹಾಲಿವುಡ್​ನಲ್ಲಿ ಸಿನಿಮಾ ಮಾಡಲು ರಾಜಮೌಳಿಗೆ ‘ಅವತಾರ್​’ ನಿರ್ದೇಶಕನಿಂದ ಆಹ್ವಾನ

ಇದನ್ನೂ ಓದಿ: ‘ನಾಟು ನಾಟು..’ ಜತೆ ಸ್ಪರ್ಧೆಯಲ್ಲಿರುವ ನಾಲ್ಕು ಹಾಡುಗಳು ಇವೇ ನೋಡಿ; ಯಾವುದಕ್ಕೆ ಚಾನ್ಸ್​?

ಜಗತ್ತಿನಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಬಿಟಿಎಸ್​, ಬ್ಯಾಕ್​ ಪಿಂಕ್​ ಮುಂತಾದ ತಂಡಗಳ ಕಲಾವಿದರನ್ನೂ ಕೂಡ ಭಾರತೀಯ ಗಾಯಕರು ಹಿಂದಿಕ್ಕಿದ್ದಾರೆ. ಅಲ್ಕಾ ಯಾಗ್ನಿಕ್, ಉದಿತ್​ ನಾರಾಯಣ್, ಕುಮಾರ್​ ಸಾನು, ಅರಿಜಿತ್​​ ಸಿಂಗ್​​ ಅವರ ಎವರ್​ಗ್ರೀನ್​ ಗೀತೆಗಳು ಯೂಟ್ಯೂಬ್​ನಲ್ಲಿ ರಾರಾಜಿಸುತ್ತಿವೆ.

ಇದನ್ನೂ ಓದಿ: Golden Globes 2023: ಅತ್ಯುತ್ತಮ ಒರಿಜಿನಲ್ ಸಾಂಗ್ ಪ್ರಶಸ್ತಿ ಬಾಚಿಕೊಂಡ ಆರ್​ಆರ್​ಆರ್​ನ ನಾಟು ನಾಟು ಹಾಡು

ಅಲ್ಕಾ ಯಾಗ್ನಿಕ್​ ಅವರು ನೀಡಿದ ಸೂಪರ್​ ಹಿಟ್​ ಗೀತೆಗಳಿಗೆ ಲೆಕ್ಕವೇ ಇಲ್ಲ. 90ರ ದಶಕದಲ್ಲಿ ಮಾಧುರಿ ದೀಕ್ಷಿತ್​, ಶ್ರೀದೇವಿ, ಜೂಹೀ ಚಾವ್ಲಾ ಮುಂತಾದ ನಟಿಯರ ಸೂಪರ್​ ಹಿಟ್​ ಹಾಡುಗಳು ಮೂಡಿಬಂದಿದ್ದು ಅಲ್ಕಾ ಯಾಗ್ನಿಕ್​ ಅವರ ಕಂಠದಲ್ಲಿ. ಇಂದಿಗೂ ಆ ಗೀತೆಗಳನ್ನು ಅಭಿಮಾನಿಗಳು ಮುಗಿಬಿದ್ದು ಕೇಳುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ