‘ಗಂಡ ಸತ್ತ ನಂತರದಲ್ಲಿ ಮಹಿಳೆ ಹೋರಾಡಲೇಬೇಕು’; ಆವೇಶದ ಮಾತುಗಳನ್ನಾಡಿದ ಶಿಲ್ಪಾ ಶೆಟ್ಟಿ

| Updated By: ರಾಜೇಶ್ ದುಗ್ಗುಮನೆ

Updated on: Aug 20, 2021 | 5:46 PM

Shilpa on Super Dancer: ರಿಯಾಲಿಟಿ ಶೋನಲ್ಲಿ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಅವರ ಕಥೆ ಆಧರಿಸಿ ಬಾಲಕಿಯೊಬ್ಬಳು ನೃತ್ಯ ಪ್ರದರ್ಶನ ಮಾಡಿದ್ದರು. ಇದನ್ನು ನೋಡಿದ ನಂತರದಲ್ಲಿ ಶಿಲ್ಪಾ ಶೆಟ್ಟಿ ಆವೇಶಕ್ಕೆ ಒಳಗಾಗಿದ್ದಾರೆ.

‘ಗಂಡ ಸತ್ತ ನಂತರದಲ್ಲಿ ಮಹಿಳೆ ಹೋರಾಡಲೇಬೇಕು’; ಆವೇಶದ ಮಾತುಗಳನ್ನಾಡಿದ ಶಿಲ್ಪಾ ಶೆಟ್ಟಿ
ಗಂಡ ಸತ್ತ ನಂತರದಲ್ಲಿ ಮಹಿಳೆ ಹೋರಾಡಲೇಬೇಕು; ಆವೇಶದ ಮಾತುಗಳನ್ನಾಡಿದ ಶಿಲ್ಪಾ ಶೆಟ್ಟಿ
Follow us on

ಅಶ್ಲೀಲ​ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್​ ಕುಂದ್ರಾ ಅವರು ಸಿಕ್ಕಿ ಬಿದ್ದ ನಂತರದಲ್ಲಿ ಶಿಲ್ಪಾ ಶೆಟ್ಟಿ ವಿಚಲಿತಗೊಂಡಿದ್ದರು. ಆದರೆ, ಈಗ ಅವರು ಈ ಶಾಕ್​ನಿಂದ ನಿಧಾನವಾಗಿ ಹೊರ ಬರುತ್ತಿದ್ದಾರೆ. ಒಂದು ಕಡೆ ರಾಜ್​ ಕುಂದ್ರಾ ಜಾಮೀನು ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ. ಮತ್ತೊಂದೆಡೆ ಶಿಲ್ಪಾ ಶೆಟ್ಟಿ ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದಾರೆ. ‘ಸೂಪರ್​ ಡ್ಯಾನ್ಸರ್​ 4’ ರಿಯಾಲಿಟಿ ಶೋ ಸೆಟ್​ನಲ್ಲಿ ಕಾಣಿಸಿಕೊಂಡಿದ್ದಾರೆ.  ಈ ಶೋನ ಪ್ರೋಮೋವನ್ನು ಸೋನಿ ವಾಹಿನಿ ಹಂಚಿಕೊಂಡಿದ್ದು, ಅದರಲ್ಲಿ ಶಿಲ್ಪಾ ಸ್ಫೂರ್ತಿದಾಯಕ ಮಾತುಗಳನ್ನು ಆಡಿದ್ದಾರೆ.

ರಿಯಾಲಿಟಿ ಶೋನಲ್ಲಿ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಅವರ ಕಥೆ ಆಧರಿಸಿ ಬಾಲಕಿಯೊಬ್ಬಳು ನೃತ್ಯ ಪ್ರದರ್ಶನ ಮಾಡಿದ್ದರು. ಇದನ್ನು ನೋಡಿದ ನಂತರದಲ್ಲಿ ಶಿಲ್ಪಾ ಶೆಟ್ಟಿ ಆವೇಶಕ್ಕೆ ಒಳಗಾಗಿದ್ದಾರೆ. ಅಲ್ಲದೆ, ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ನಾನು ಪ್ರತಿ ಬಾರಿ ಝಾನ್ಸಿ ರಾಣಿಯ ಬಗ್ಗೆ ಕೇಳಿದಾಗ ಸಾಕಷ್ಟು ವಿಚಾರಗಳು ತಲೆಯಲ್ಲಿ ಬರುತ್ತವೆ. ಇಂದಿಗೂ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕಿದೆ. ಗಂಡ ಸತ್ತ ನಂತರದಲ್ಲಿ, ತಮ್ಮ ಅಸ್ತಿತ್ವಕ್ಕಾಗಿ ಮಹಿಳೆಯರು ಹೋರಾಡಬೇಕಾದ ಪರಿಸ್ಥಿತಿ ಇದೆ. ಎಲ್ಲವನ್ನೂ ಧೈರ್ಯದಿಂದ ಎದುರಿಸಿದ ಸಾಕಷ್ಟು ಮಹಿಳೆಯರು ಭಾರತದ ಇತಿಹಾಸದಲ್ಲಿ ಸಿಗುತ್ತಾರೆ. ಅಂಥ ರಾಷ್ಟ್ರದಿಂದ ನಾವು ಬಂದಿದ್ದೇವೆ ಎನ್ನುವ ಹೆಮ್ಮೆ ನನಗಿದೆ. ಯಾವುದೇ ಸನ್ನಿವೇಶವಿದ್ದರೂ, ನಾವು ಮಹಿಳೆಯರು ಹೋರಾಡಬಲ್ಲ ಶಕ್ತಿಯನ್ನು ಹೊಂದಿದ್ದೇವೆ’ ಎಂದಿದ್ದಾರೆ.

ಮಂಗಳವಾರ (ಆಗಸ್ಟ್​ 17) ನಡೆದ ಶೂಟಿಂಗ್​ನಲ್ಲಿ ಶಿಲ್ಪಾ ಶೆಟ್ಟಿ ಪಾಲ್ಗೊಂಡಿದ್ದರು. ಈ ವೀಕೆಂಡ್​ನಲ್ಲಿ ಈ ಶೋ ಪ್ರಸಾರವಾಗಲಿದೆ. ಶಿಲ್ಪಾ ಶೆಟ್ಟಿ ಕಮ್​ಬ್ಯಾಕ್​ ಮಾಡಿದ್ದು ಇಡೀ ತಂಡಕ್ಕೆ ಸಾಕಷ್ಟು ಖುಷಿ ನೀಡಿದೆ. ಅಲ್ಲದೆ, ಇಡೀ ತಂಡ ಶಿಲ್ಪಾಗೆ ಅದ್ದೂರಿ ಸ್ವಾಗತ ನೀಡಿದೆ.

ರಾಜ್​ ಕುಂದ್ರಾ ಕೇಸ್​ ದಿನದಿಂದ ದಿನಕ್ಕೆ ಜಟಿಲ ಆಗುತ್ತಿದೆ. ಶಿಲ್ಪಾ ಶೆಟ್ಟಿ ಕೂಡ ಹಲವು ಬಾರಿ ಪೊಲೀಸರ ತನಿಖೆಗೆ ಒಳಪಡಬೇಕಾಗುತ್ತಿದೆ. ಅವರ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ಎಲ್ಲ ಘಟನೆಗಳಿಂದಾಗಿ ಶಿಲ್ಪಾ ಶೆಟ್ಟಿ ಮನೆ ಬಿಟ್ಟು ಹೊರಬರುತ್ತಿಲ್ಲ. ‘ಸೂಪರ್​ ಡ್ಯಾನ್ಸರ್​ 4’ ಕಾರ್ಯಕ್ರಮದ ಆಯೋಜಕರು ಹಲವು ಬಾರಿ ಸಂಪರ್ಕಿಸುವ ಪ್ರಯತ್ನ ಮಾಡಿದರೂ ಕೂಡ ಶಿಲ್ಪಾ ಶೆಟ್ಟಿ ಕಡೆಯಿಂದ ಪ್ರತಿಕ್ರಿಯೆ ಸಿಕ್ಕಿಲ್ಲ ಎನ್ನುವ ವರದಿ ಈ ಮೊದಲು ಬಿತ್ತರವಾಗಿತ್ತು.

ಇದನ್ನೂ ಓದಿ: Shilpa Shetty: ರಾಜ್​ ಕುಂದ್ರಾ ಜೈಲಿನಲ್ಲಿರುವಾಗಲೇ ಗುಡ್​ ನ್ಯೂಸ್​ ನೀಡಿದ ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿಯಿಂದಾಗಿ ತಾವು ಅನುಭವಿಸಿದ ಹಿಂಸೆ ಬಗ್ಗೆ ವಿವರಿಸಿ ಗಳಗಳನೆ ಅತ್ತ ತಂಗಿ ಶಮಿತಾ ಶೆಟ್ಟಿ

Published On - 5:34 pm, Fri, 20 August 21