‘ತಪ್ಪು ಮಾಡಿದ್ದೇನೆ ಆದರೂ ಪರವಾಗಿಲ್ಲ’ ಎಂದ ಶಿಲ್ಪಾ ಶೆಟ್ಟಿ; ಶಿಲ್ಪಾ ಮಾಡಿದ ತಪ್ಪೇನು ಎಂದು ತಲೆಕೆಡಿಸಿಕೊಂಡ ಅಭಿಮಾನಿಗಳು

| Updated By: shivaprasad.hs

Updated on: Aug 27, 2021 | 6:08 PM

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇನ್ಸ್ಟಾಗ್ರಾಂನಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ತಪ್ಪೊಂದು ಮಾಡಿದ್ದೇನೆ ಆದರೂ ಪರವಾಗಿಲ್ಲ ಎಂದು ಬರೆದುಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಏನು ತಪ್ಪು ಮಾಡಿದ್ದಾರೆ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.

‘ತಪ್ಪು ಮಾಡಿದ್ದೇನೆ ಆದರೂ ಪರವಾಗಿಲ್ಲ’ ಎಂದ ಶಿಲ್ಪಾ ಶೆಟ್ಟಿ; ಶಿಲ್ಪಾ ಮಾಡಿದ ತಪ್ಪೇನು ಎಂದು ತಲೆಕೆಡಿಸಿಕೊಂಡ ಅಭಿಮಾನಿಗಳು
ಶಿಲ್ಪಾ ಶೆಟ್ಟಿ
Follow us on

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಮರಳಿ ತಮ್ಮ ಕೆಲಸಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ‘ಸೂಪರ್ ಡಾನ್ಸರ್ 4’ ರಿಯಾಲಿಟಿ ಶೋಗೆ ನಿರ್ಣಾಯಕರಾಗಿ ಮರಳಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗುತ್ತಿದ್ದಾರೆ. ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಅಶ್ಲೀಲ ಚಿತ್ರ ತಯಾರಿಕೆ ಹಾಗೂ ಹಂಚಿಕೆಯ ಪ್ರಕರಣದಲ್ಲಿ ಬಂಧಿಸಿದ ನಂತರ ಶಿಲ್ಪಾ ಶೆಟ್ಟಿ ಮೌನ ತಾಳಿದ್ದರು. ಪ್ರಸ್ತುತ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಅವರು, ಇತ್ತೀಚೆಗೆ ಓದಿದ ಪುಸ್ತಕವೊಂದರ ಪುಟವನ್ನು ಹಂಚಿಕೊಂಡು ಅದಕ್ಕೆ ಕ್ಯಾಪ್ಶನ್ ನೀಡಿದ್ದಾರೆ. ಶಿಲ್ಪಾ ನೀಡಿದ ಈ ಕ್ಯಾಪ್ಶನ್ ಈಗ ಕುತೂಹಲಕ್ಕೆ ಕಾರಣವಾಗಿದೆ.

ಶಿಲ್ಪಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯ ಮುಖಾಂತರ ಒಂದು ಚಿತ್ರವನ್ನು ಹಂಚಿಕೊಂಡಿದ್ದು, ಅದರಲ್ಲಿ ಸೋಫಿಯಾ ಲಾರೆನ್ಸ್ ಅವರ ಬರಹವೊಂದರ ಭಾಗವನ್ನು ಹಂಚಿಕೊಂಡಿದ್ದಾರೆ. ತಪ್ಪುಗಳು ಜೀವನದ ಭಾಗ ಎಂಬರ್ಥದಲ್ಲಿ ಪೋಸ್ಟ್ ಹಂಚಿಕೊಂಡಿರುವ ಶಿಲ್ಪಾ ಶೆಟ್ಟಿ ಅದಕ್ಕೆ, ತಪ್ಪು ಮಾಡಿದ್ದೇನೆ, ಆದರೂ ಪರವಾಗಿಲ್ಲ ಎಂದು ಬರೆದುಕೊಂಡಿದ್ದಾರೆ. ಅವರ ಯಾವ ಉದ್ದೇಶಕ್ಕೆ ಹೀಗೆ ಬರೆದುಕೊಂಡಿದ್ದಾರೆ ಎಂದು ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

ಶಿಲ್ಪಾ ಶೆಟ್ಟಿ ಹಂಚಿಕೊಂಡ ಸ್ಟೋರಿ:

ಶಿಲ್ಪಾ ಶೆಟ್ಟಿ ಹಂಚಿಕೊಂಡ ಸ್ಟೋರಿ

ಈ ಹಿಂದೆ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದ ಮೂಲಕ ಮನವಿಯೊಂದನ್ನು ಮಾಡಿಕೊಂಡಿದ್ದರು. ಅದರಲ್ಲಿ, ಪತಿಯ ಪ್ರಕರಣದ ಕುರಿತು ಅವರು ಮೊದಲ ಹೇಳಿಕೆ ನೀಡಿದ್ದರು. ‘ಈ ಪ್ರಕರಣವು ತನಿಖೆಯ ಹಂತದಲ್ಲಿ ಇರುವುದರಿಂದ ನಾನು ಅದರ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ. ಮುಂಬೈ ಪೊಲೀಸರು ಮತ್ತು ಭಾರತದ ಕಾನೂನಿನ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಒಂದು ಕುಟುಂಬವಾಗಿ ನಾನು ಕಾನೂನಿನ ಮೂಲಕ ಹೋರಾಡುತ್ತೇವೆ. ಆದರೆ ಅಲ್ಲಿನವರೆಗೂ ತಾಯಿಯಾಗಿ ನನ್ನ ಮಕ್ಕಳ ಖಾಸಗಿತನವನ್ನು ರಕ್ಷಿಸುವ ಸಲುವಾಗಿ ಒಂದು ಮನವಿ ಮಾಡುತ್ತೇನೆ’ ಎಂದು ಶಿಲ್ಪಾ ಬರೆದುಕೊಂಡಿದ್ದರು.

ಪ್ರಕರಣದ ತನಿಖೆಯ ಕುರಿತು ಬರೆದಿದ್ದ ಶಿಲ್ಪಾ, ‘ಅರೆಬೆಂದ ವಿಷಯಗಳ ಬಗ್ಗೆ ಸರಿಯಾಗಿ ಗೊತ್ತಿಲ್ಲದೇ ಕಮೆಂಟ್​ ಮಾಡಬೇಡಿ. ಕಾನೂನಿಗೆ ತಲೆ ಬಾಗುವಂತಹ ಪ್ರಜೆ ನಾನು. ಕಳೆದ 29 ವರ್ಷದಿಂದ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ. ಜನರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಅದನ್ನು ಹುಸಿ ಆಗಿಸಲು ನಾನು ಬಿಡುವುದಿಲ್ಲ. ಈ ಸಮಯದಲ್ಲಿ ನಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸಿ. ಕಾನೂನಿನ ಪ್ರಕಾರ ಎಲ್ಲವೂ ನಡೆಯಲಿ. ಸತ್ಯಮೇವ ಜಯತೆ’ ಎಂದು ತಿಳಿಸಿದ್ದರು.

ಇದನ್ನೂ ಓದಿ:

ಗಂಡು ಸೊಳ್ಳೆಗಿಂತ ಹೆಚ್ಚು ಹೆಣ್ಣು ಸೊಳ್ಳೆಗಳೇ ಮನುಷ್ಯರ ರಕ್ತ ಹೀರೋದು ಆಂತ ನಿಮಗೆ ಗೊತ್ತಾ?

‘ಇಷ್ಟಪಟ್ಟು ಆಗುವ ಮಿಲನ ಬೇರೆ, ಆದರೆ ಇದು ರೇಪ್​; ದಯವಿಟ್ಟು ಖಂಡಿಸಿ’: ಗ್ಯಾಂಗ್​ ರೇಪ್​ ಬಗ್ಗೆ ಹರ್ಷಿಕಾ ಮಾತು

(Shilpa Shetty writes on Instagram that she made a mistake but its okay)