ಶ್ರದ್ಧಾ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿರುವ ಈ ರಾಹುಲ್ ಮೋದಿ ಯಾರು?

|

Updated on: Mar 04, 2024 | 10:51 AM

ರಾಹುಲ್ ಹಾಗೂ ಶ್ರದ್ಧಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಕಳೆದ ಕೆಲವು ಸಮಯದಿಂದ ಹರಿದಾಡುತ್ತಲೇ ಇತ್ತು. ಆದರೆ, ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು ಕಡಿಮೆ. ಈಗ ಅನಂತ್ ಅಂಬಾನಿ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಭಾಗಿ ಆಗುವ ಮೂಲಕ ಡೇಟಿಂಗ್ ವಿಚಾರವನ್ನು ಅವರು ಖಚಿತಪಡಿಸಿದಂತೆ ಆಗಿದೆ.

ಶ್ರದ್ಧಾ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿರುವ ಈ ರಾಹುಲ್ ಮೋದಿ ಯಾರು?
ಶ್ರದ್ಧಾ-ರಾಹುಲ್
Follow us on

ನಟಿ ಶ್ರದ್ಧಾ ಕಪೂರ್ (Shraddha Kapoor) ಅವರು ಇತ್ತೀಚೆಗೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ಹಾಜರಿ ಹಾಕಿದ್ದಾರೆ. ಈ ವೇಳೆ ಅವರು ಸಾಕಷ್ಟು ಸುದ್ದಿ ಆದರು. ಇದಕ್ಕೆ ಕಾರಣ ಆಗಿದ್ದು ಅವರು ಬಾಯ್​ಫ್ರೆಂಡ್ ರಾಹುಲ್ ಮೋದಿ ಜೊತೆ ಕಾಣಿಸಿಕೊಂಡಿದ್ದು. ಜಾಮ್​ನಗರ ವಿಮಾನ ನಿಲ್ದಾಣದಲ್ಲಿ ರಾಹುಲ್ ಜೊತೆ ನಡೆದುಕೊಂಡು ಹೋಗಿದ್ದಾರೆ ಶ್ರದ್ಧಾ. ಈ ವಿಡಿಯೋ ವೈರಲ್ ಆಗುತ್ತಿದೆ. ಈ ರಾಹುಲ್ ಯಾರು ಎನ್ನುವ ಹುಡುಕಾಟದಲ್ಲಿ ಅನೇಕರು ತೊಡಗಿದ್ದಾರೆ.

ರಾಹುಲ್ ಹಾಗೂ ಶ್ರದ್ಧಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಕಳೆದ ಕೆಲವು ತಿಂಗಳಿಂದ ಹರಿದಾಡುತ್ತಲೇ ಇತ್ತು. ಆದರೆ, ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು ಕಡಿಮೆ. ಈಗ ಅನಂತ್ ಅಂಬಾನಿ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಭಾಗಿ ಆಗುವ ಮೂಲಕ ಡೇಟಿಂಗ್ ವಿಚಾರವನ್ನು ಖಚಿತಪಡಿಸಿದಂತೆ ಆಗಿದೆ.

2023ರಲ್ಲಿ ಶ್ರದ್ಧಾ ಕಪೂರ್ ಹಾಗೂ ರಾಹುಲ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ರಾತ್ರಿ ವೇಳೆ ಊಟಕ್ಕೆ ತೆರಳಿದ್ದ ಫೋಟೋಗಳನ್ನು ವೈರಲ್ ಮಾಡಲಾಗಿತ್ತು. ಇದರಿಂದ ಶ್ರದ್ಧಾ ಸಾಕಷ್ಟು ಶಾಕ್​ಗೆ ಒಳಗಾಗಿದ್ದರು. ಖಾಸಗಿತನಕ್ಕೆ ದಕ್ಕೆ ತಂದಿದ್ದಕ್ಕೆ ಅವರು ಅಸಮಾಧಾನಗೊಂಡಿದ್ದರು. ಆದರೆ, ಈಗ ಅವರು ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ.

ರಾಹುಲ್ ಅವರು ಸಿನಿಮಾ ಕಥೆ ಬರಹಗಾರರು. ಅವರು ಲವ್ ರಂಜನ್ ಅವರ ‘ಪ್ಯಾರ್​ ಕಾ ಪಂಚನಾಮ್ 2’, ‘ಸೋನು ಕೆ ಟಿಟ್ಟು ಕಿ ಸ್ವೀಟಿ’ ಮೊದಲಾದ ಸಿನಿಮಾಗಳಲ್ಲಿ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ರಣಬೀರ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ನಟನೆಯ ‘ತು ಜೂಟಿ ಮೇ ಮಕ್ಕರ್’ ಸಿನಿಮಾಗೂ ಅವರು ಕೆಲಸ ಮಾಡಿದ್ದಾರೆ.  ಈ ಚಿತ್ರದ ಸೆಟ್​ನಲ್ಲಿ ಶ್ರದ್ಧಾ ಹಾಗೂ ರಾಹುಲ್ ಮೊದಲ ಬಾರಿಗೆ ಭೇಟಿ ಆದರು. ನಂತರ ಈ ಗೆಳೆತನ ಪ್ರೀತಿಯಾಗಿ ಬದಲಾಯಿತು ಎನ್ನಲಾಗಿದೆ. ರಾಹುಲ್ ತಂದೆ ಅವರ ಉದ್ಯಮ ಇದೆ.

ಇದನ್ನೂ ಓದಿ: ಶ್ರದ್ಧಾ ಕಪೂರ್ ಬಳಿ ಇದೆ ಬರೋಬ್ಬರಿ 10 ಕೋಟಿ ರೂ ಮೌಲ್ಯದ ಶೂ ಕಲೆಕ್ಷನ್: ಒಟ್ಟು ಆಸ್ತಿ ಎಷ್ಟು?

ಶ್ರದ್ಧಾ ಕಪೂರ್ ಅವರು ಈ ಮೊದಲು ಛಾಯಾಗ್ರಾಹಕ ರೋಹನ್ ಶ್ರೇಷ್ಠ ಜೊತೆ ರಿಲೇಶನ್​ಶಿಪ್​ನಲ್ಲಿ ಇದ್ದರು. 2022ರಲ್ಲಿ ಇವರು ಬೇರೆ ಆದರು. ಈಗ ರಾಹುಲ್ ಜೊತೆ ಅವರಿಗೆ ಪ್ರೀತಿ ಮೂಡಿದೆ. ರಾಹುಲ್ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ