ಶ್ರದ್ಧಾ ಕಪೂರ್ ಕತ್ತನ್ನು ಹಿಡಿದು ಕಾರಿನೊಳಗೆ ನೂಕಿದ ಬಾಯ್​ಫ್ರೆಂಡ್; ಫ್ಯಾನ್ಸ್ ಆಕ್ರೋಶ

Shraddha Kapoor: ಶ್ರದ್ಧಾ ಕಪೂರ್ ಮತ್ತು ಅವರ ಗೆಳೆಯ ರಾಹುಲ್ ಮೋದಿ ಅವರ ವೈರಲ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಾರಿನಲ್ಲಿ ಹೋಗುವಾಗ ರಾಹುಲ್ ಶ್ರದ್ಧಾ ಅವರ ಕುತ್ತಿಗೆ ಹಿಡಿದು ತಳ್ಳಿದ ರೀತಿ ಅನೇಕರಿಗೆ ಇಷ್ಟವಾಗಿಲ್ಲ. ಕೆಲವರು ಇದನ್ನು ಪ್ರೀತಿ ಎಂದರೆ ಮತ್ತೆ ಕೆಲವರು ಅಸಭ್ಯ ವರ್ತನೆ ಎಂದು ಟೀಕಿಸಿದ್ದಾರೆ. ವಿಡಿಯೋ ನೋಡಿ...

ಶ್ರದ್ಧಾ ಕಪೂರ್ ಕತ್ತನ್ನು ಹಿಡಿದು ಕಾರಿನೊಳಗೆ ನೂಕಿದ ಬಾಯ್​ಫ್ರೆಂಡ್; ಫ್ಯಾನ್ಸ್ ಆಕ್ರೋಶ
Shrdha Kapoor
Edited By:

Updated on: Sep 24, 2025 | 5:34 PM

ಬಾಲಿವುಡ್ ನಟಿ ಶ್ರದ್ಧಾ ಕಪೂರ್ (Shradha Kapoor) ತಮ್ಮ ಸಿನಿಮಾಗಳ ಮೂಲಕ ಅಭಿಮಾನಿಗಳ ಹೃದಯ ಗೆದಿದ್ದಾರೆ. ತಮ್ಮ ವೃತ್ತಿಪರ ಜೀವನದ ಜೊತೆಗೆ ಶ್ರದ್ಧಾ ತಮ್ಮ ವೈಯಕ್ತಿಕ ಜೀವನದ ವಿಷಯದಲ್ಲೂ ಆಗಾಗ ಸುದ್ದಿಯಲ್ಲಿರುತ್ತಾರೆ. ಪ್ರಸ್ತುತ, ಶ್ರದ್ಧಾ ತಮ್ಮ ಗೆಳೆಯ ರಾಹುಲ್ ಮೋದಿ ಜೊತೆಗಿನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಾಹುಲ್ ನಡೆದುಕೊಂಡಿದ್ದನ್ನು ನೋಡಿದ ನೆಟ್ಟಿಗರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರದ್ಧಾ ಕಪೂರ್ ಮತ್ತು ರಾಹುಲ್ ಮೋದಿ ಒಟ್ಟಿಗೆ ಸಿನಿಮಾ ಡೇಟ್‌ಗೆ ಹೋಗಿದ್ದರು. ಅಲ್ಲಿಂದ ಹೊರಬರುವಾಗ, ಶ್ರದ್ಧಾ ಮೊದಲು ರಾಹುಲ್‌ನ ಕೆನ್ನೆಯನ್ನು ಪ್ರೀತಿಯಿಂದ ಹಿಡಿದುಕೊಂಡಿದ್ದಾರೆ. ನಂತರ ಇಬ್ಬರೂ ಕಾರಿನ ಬಳಿ ಬರುತ್ತಾರೆ. ಶ್ರದ್ಧಾ ಅವರ ಕತ್ತನ್ನು ಹಿಡಿದು ರಾಹುಲ್ ಕಾರಿನ ಒಳಗೆ ತಳ್ಳುವಂತೆ ವಿಡಿಯೋ ಕಾಣಿಸಿದೆ. ಈ ವಿಡಿಯೋನ ಜನರು ವಿಭಿನ್ನವಾಗಿ ಅರ್ಥೈಸಿಕೊಂಡಿದ್ದಾರೆ.

ರಾಹುಲ್ ಮತ್ತು ಶ್ರದ್ಧಾ ಅವರ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ. ಕೆಲವು ಬಳಕೆದಾರರು ರಾಹುಲ್ ಅವರನ್ನು ಟೀಕಿಸಿದ್ದಾರೆ. ಅವರು ಶ್ರದ್ಧಾ ಅವರನ್ನು ಕಾರಿನಲ್ಲಿ ಕೂರಿಸಿದ ರೀತಿ ಸರಿಯಿಲ್ಲ ಎಂದು ಹಲವರು ಹೇಳಿದ್ದಾರೆ. ‘ಈ ರೀತಿಯ ವ್ಯಕ್ತಿ ಇರಲು ಸಾಧ್ಯವೇ? ಅವರು ಯಾಕೆ ಹೀಗೆ ಕುತ್ತಿಗೆ ಹಿಡಿದಿದ್ದಾರೆ’ ಎಂದು ಕೆಲವರು ಕೇಳಿದ್ದಾರೆ. ಕೆಲವರು ರಾಹುಲ್ ಅವರನ್ನು ಬೆಂಬಲಿಸಿದರು ಮತ್ತು ಜನರು ಅವನನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಅವರು ಇದನ್ನು ಪ್ರೀತಿಯಿಂದ ಮಾಡುತ್ತಿದ್ದಾರೆ ಎಂದಿದ್ದಾರೆ.

2024ರ ಆರಂಭದಲ್ಲಿ ಮುಂಬೈನಲ್ಲಿ ರಾಹುಲ್ ಮತ್ತು ಶ್ರದ್ಧಾ ರೆಸ್ಟೋರೆಂಟ್‌ನಿಂದ ಹೊರಬರುತ್ತಿರುವುದನ್ನು ನೋಡಿದಾಗ ಅವರ ಸಂಬಂಧದ ಬಗ್ಗೆ ವದಂತಿಗಳು ಪ್ರಾರಂಭವಾದವು. ಅಂದಿನಿಂದ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಆಚರಣೆಗಳಿಂದ ಹಿಡಿದು ಸಿನಿಮಾ ವಿಶೇಷ ಶೋಗಳಲ್ಲಿ ಶ್ರದ್ಧಾ ಮತ್ತು ರಾಹುಲ್ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಕೆಲಸದ ಬಗ್ಗೆ ಹೇಳುವುದಾದರೆ, ಶ್ರದ್ಧಾ ಕಪೂರ್ ಕೊನೆಯ ಬಾರಿಗೆ ‘ಸ್ತ್ರೀ 2′ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವು ವಿಶ್ವಾದ್ಯಂತ 857 ಕೋಟಿ ರೂ. ಗಳಿಸಿ ಬ್ಲಾಕ್‌ಬಸ್ಟರ್ ಆಯಿತು. ಇದರ ನಂತರ, ಅವರು ನಿಖಿಲ್ ದ್ವಿವೇದಿ ಅವರ ‘ನಾಗಿನ್’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ