AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ಶಿಲ್ಪಾ ಶೆಟ್ಟಿಗೆ ಪೊಲೀಸರ ನೊಟೀಸ್, ವಿಚಾರಣೆಗೆ ಹಾಜರಾಗಲು ಸೂಚನೆ

Raj Kundra and Shilpa Shetty: ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಪದೇ ಪದೇ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ 60 ಕೋಟಿ ವಂಚನೆ ಪ್ರಕರಣದ ಬಗ್ಗೆ ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದು, 60 ಕೋಟಿ ಹಣದಲ್ಲಿ 15 ಕೋಟಿಯನ್ನು ಶಿಲ್ಪಾ ಶೆಟ್ಟಿ ಮಾಲೀಕತ್ವದ ಕಂಪೆನಿಗೆ ರಾಜ್ ಕುಂದ್ರಾ ವರ್ಗಾಯಿಸಿದ್ದಾರೆ ಎನ್ನಲಾಗಿದ್ದು, ನಟಿಗೂ ನೊಟೀಸ್ ನೀಡಲಾಗಿದೆ.

ನಟಿ ಶಿಲ್ಪಾ ಶೆಟ್ಟಿಗೆ ಪೊಲೀಸರ ನೊಟೀಸ್, ವಿಚಾರಣೆಗೆ ಹಾಜರಾಗಲು ಸೂಚನೆ
Raj Kundra Shilpa Shetty
ಮಂಜುನಾಥ ಸಿ.
|

Updated on: Sep 25, 2025 | 12:20 PM

Share

ಉದ್ಯಮಿ ರಾಜ್ ಕುಂದ್ರಾ (Raj Kundra) ಒಂದರ ಹಿಂದೊಂದರಂತೆ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಲೇ ಇದ್ದಾರೆ. ಬೆಟ್ಟಿಂಗ್ ಪ್ರಕರಣ, ಅದಾದ ಬಳಿಕ ವಂಚನೆ ಪ್ರಕರಣ, ಅದರ ಬಳಿಕ ನೀಲಿ ಚಿತ್ರ ನಿರ್ಮಾಣ ಮತ್ತು ಹಂಚಿಕೆ ಪ್ರಕರಣ ಈಗ 60 ಕೋಟಿ ರೂಪಾಯಿ ವಂಚನೆ ಪ್ರಕರಣ ರಾಜ್ ಕುಂದ್ರಾ ಮೇಲಿದೆ. ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ ಹೆಸರೂ ಸಹ ಕೇಳಿ ಬಂದಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್​​ನ ಆರ್ಥಿಕ ವಿಭಾಗದ ಪೊಲೀಸರು ಶಿಲ್ಪಾ ಶೆಟ್ಟಿಗೆ ನೋಟೀಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ರಾಜ್ ಕುಂದ್ರಾ ಆರೋಪಿಯಾಗಿರುವ 60 ಕೋಟಿ ರೂಪಾಯಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಆ ಹಣದಲ್ಲಿ 15 ಕೋಟಿ ಹಣವನ್ನು ರಾಜ್ ಕುಂದ್ರಾ, ನಟಿ ಶಿಲ್ಪಾ ಶೆಟ್ಟಿಯ ಮಾಲೀಕತ್ವದ ಕಂಪೆನಿಗೆ ವರ್ಗಾವಣೆ ಮಾಡಿರುವುದು ಪತ್ತೆ ಮಾಡಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಆ ಹಣವನ್ನು ಕಂಪೆನಿಯ ಬೇರೆ ಬೇರೆ ಉದ್ದೇಶಗಳಿಗೆ ಖರ್ಚು ಮಾಡಿದ್ದಾರೆ. ಇದೀಗ ಪೊಲೀಸರು ಶಿಲ್ಪಾ ಶೆಟ್ಟಿಗೆ ನೊಟೀಸ್ ನೀಡಿದ್ದು, ಅವರ ಕಂಪೆನಿಯ ಖರ್ಚು ವೆಚ್ಚ, ಜಾಹೀರಾತು ಖರ್ಚು ಇತ್ಯಾದಿಗಳ ಬಗ್ಗೆ ಪ್ರಶ್ನೆಗಳನ್ನು ಮಾಡಿ ಉತ್ತರಗಳನ್ನು ಪಡೆದುಕೊಳ್ಳಲಿದ್ದಾರೆ.

ಇದನ್ನೂ ಓದಿ:ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಿಪಾಶಾ, ನೇಹಾ ಹೆಸರು ಸೇರಿಸಿದ ರಾಜ್ ಕುಂದ್ರಾ

60 ಕೋಟಿ ವಂಚನೆ ಪ್ರಕರಣದ ತನಿಖೆ ಕಳೆದ ಕೆಲ ವಾರಗಳಿಂದಲೂ ನಡೆಯುತ್ತಿದ್ದು, ರಾಜ್ ಕುಂದ್ರಾ ಅವರನ್ನು ಈಗಾಗಲೇ ಒಮ್ಮೆ ವಿಚಾರಣೆ ಮಾಡಲಾಗಿದೆ. ವಿಚಾರಣೆ ವೇಳೆ ರಾಜ್ ಕುಂದ್ರಾ ನಟಿಯರಾದ ನೇಹಾ ದೂಪಿಯಾ, ಬಿಪಾಷಾ ಬಸು ಹೆಸರನ್ನು ಹೇಳಿದ್ದಾರೆ. ಅವರಿಗೂ ಸಹ ರಾಜ್ ಕುಂದ್ರಾ ಖಾತೆಯಿಂದ ಹಣ ಹೋಗಿದೆ ಎನ್ನಲಾಗಿದೆ.

ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ದಂಪತಿಗೆ ಪೊಲೀಸರ ನೊಟೀಸ್​​ಗಳ ಹೊಸ ವಿಷಯವಲ್ಲ. ರಾಜಸ್ಥಾನ ರಾಯಲ್ಸ್​​ನ ಸಹ ಮಾಲೀಕತ್ವ ಹೊಂದಿದಾಗಿನಿಂದಲೂ ಈ ದಂಪತಿ ಬ್ಯುಸಿನೆಸ್ ಕಾರಣಕ್ಕೆ ವಿವಾದಗಳಲ್ಲಿ ತೊಡಗಿಕೊಳ್ಳುತ್ತಲೇ ಇದ್ದಾರೆ. ರಾಜಸ್ಥಾನ ರಾಯಲ್ಸ್ ತಂಡ ಇದ್ದಾಗ ಬೆಟ್ಟಿಂಗ್ ಪ್ರಕರಣದಲ್ಲಿ ರಾಜ್ ಕುಂದ್ರಾ ಹೆಸರು ಕೇಳಿ ಬಂತು. ಅದಾದ ಬಳಿಕ ಚಿನ್ನದ ಮಳಿಗೆ ಹೆಸರಲ್ಲಿ ವಂಚನೆ ಪ್ರಕರಣ, ಸಾಲ ಪಡೆದು ವಂಚನೆ ಪ್ರಕರಣ ಅದಾದ ಬಳಿಕ ರಾಜ್ ಕುಂದ್ರಾ, ನೀಲಿ ಚಿತ್ರಗಳನ್ನು ನಿರ್ಮಿಸಿದ ಪ್ರಕರಣದಲ್ಲಿ ಜೈಲು ಸಹ ಸೇರಿದರು. ಈಗ ಎಲ್ಲವೂ ಸರಿ ಹೋಯ್ತು ಎಂದುಕೊಳ್ಳುತ್ತಿರುವಾಗ 60 ಕೋಟಿ ರೂಪಾಯಿ ವಂಚನೆ ಪ್ರಕರಣ ಈ ದಂಪತಿಯ ಬೆನ್ನೇರಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ