ಖ್ಯಾತ ನಟಿ ಅದಿತಿ ರಾವ್ ಹೈದರಿ (Aditi Rao Hydari) ಅವರು ಹಲವು ತಿಂಗಳಿಂದ ನಟ ಸಿದ್ಧಾರ್ಥ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ತಾವಿಬ್ಬರೂ ಪ್ರೇಮಿಗಳು ಎಂದು ಈ ಜೋಡಿ ಎಂದಿಗೂ ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ. ಆದರೆ ಈಗ ಅದಿತಿ ರಾವ್ ಹೈದರಿಯನ್ನು ‘ಪಾರ್ಟ್ನರ್’ ಎಂದು ಕರೆಯುವ ಮೂಲಕ ಸಿದ್ದಾರ್ಥ್ (Siddharth) ಅವರು ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಆದಷ್ಟು ಬೇಗ ಈ ಪ್ರೇಮಿಗಳು ಮದುವೆ ಆಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ. ಈ ಜೋಡಿ ಸೂಪರ್ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಇಬ್ಬರ ಫೋಟೋ ವೈರಲ್ ಆಗುತ್ತಿದೆ.
ಬಾಲಿವುಡ್ನಲ್ಲಿ ಮತ್ತು ದಕ್ಷಿಣ ಭಾರತದಲ್ಲಿ ಅದಿತಿ ರಾವ್ ಹೈದರಿ ಅವರು ಗುರುತಿಸಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ಅವರಿಗೆ ಸಖತ್ ಡಿಮ್ಯಾಂಡ್ ಇದೆ. ಅನೇಕ ಹಿಟ್ ಸಿನಿಮಾಗಳನ್ನು ಅವರು ನೀಡಿದ್ದಾರೆ. ಶನಿವಾರ (ಅಕ್ಟೋಬರ್ 28) ಅವರಿಗೆ ಜನ್ಮದಿನದ ಸಂಭ್ರಮ. ಈ ಖುಷಿಯಲ್ಲಿ ಸಿದ್ದಾರ್ಥ್ ಅವರು ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ತಿಳಿಸಿದ್ದಾರೆ. ತಮ್ಮಿಬ್ಬರ ಫೋಟೋವನ್ನು ಹಂಚಿಕೊಂಡು, ಅದಕ್ಕೆ ಕವನದ ರೀತಿಯಲ್ಲಿ ಕ್ಯಾಪ್ಷನ್ ಬರೆದಿದ್ದಾರೆ. ಇದರಲ್ಲಿ ‘ಪಾರ್ಟ್ನರ್’ ಎಂಬ ಪದವನ್ನು ಅವರು ಬಳಕೆ ಮಾಡಿದ್ದಾರೆ. ಆ ಮೂಲಕ ತಮ್ಮ ಪ್ರೀತಿಯನ್ನು ಅವರು ಒಪ್ಪಿಕೊಂಡಿದ್ದಾರೆ.
ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಈ ಫೋಟೋಗೆ ಕಮೆಂಟ್ ಮಾಡಿದ್ದಾರೆ. ದಿಯಾ ಮಿರ್ಜಾ, ಪತ್ರಲೇಖಾ ಅವರು ಅದಿತಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಅದಿತಿ ಅವರಿಗೆ ಈಗ 37 ವರ್ಷ ವಯಸ್ಸು. ಹಿಂದಿ ಮಾತ್ರವಲ್ಲದೇ ಇಂಗ್ಲಿಷ್ ಸಿನಿಮಾಗಳಿಂದಲೂ ಅವರಿಗೆ ಆಫರ್ ಬರುತ್ತಿದೆ. ಜೊತೆಗೆ, ವೆಬ್ ಸೀರಿಸ್ಗಳಲ್ಲೂ ಅವರು ನಟಿಸುತ್ತಿದ್ದಾರೆ. ಸಿದ್ದಾರ್ಥ್ ಜೊತೆಗಿನ ಲವ್ ಕಾರಣದಿಂದಲೂ ಅವರ ಆಗಾಗ ಸುದ್ದಿ ಆಗುತ್ತಾರೆ.
ಇದನ್ನೂ ಓದಿ: ಅದಿತಿ ರಾವ್ ಹೈದರಿಗೆ ಬರ್ತ್ಡೇ ಸಂಭ್ರಮ
ಈ ಮೊದಲು ಅದಿತಿ ರಾವ್ ಹೈದರಿ ಅವರು ನಟ ಸತ್ಯದೀಪ್ ಮಿಶ್ರಾ ಜೊತೆ ಮದುವೆ ಆಗಿದ್ದರು. ಆದರೆ 2013ರಲ್ಲಿ ಅವರು ವಿಚ್ಛೇದನ ಪಡೆದರು. ಅದೇ ರೀತಿ, ಸಿದ್ದಾರ್ಥ್ ಕೂಡ ಮೇಘನಾ ನಾರಾಯಣ್ ಜೊತೆ 2003ರಲ್ಲಿ ಮದುವೆಯಾಗಿ 2007ರಲ್ಲಿ ಡಿವೋರ್ಸ್ ಪಡೆದರು. ಈಗ ಅದಿತಿ ರಾವ್ ಹೈದರಿ ಜೊತೆ ಸಿದ್ದಾರ್ಥ್ ಅವರ ಓಡಾಟ ಜೋರಾಗಿದೆ. ಶೀಘ್ರದಲ್ಲೇ ಈ ಜೋಡಿಯಿಂದ ಮದುವೆ ಬಗ್ಗೆ ಬ್ರೇಕಿಂಗ್ ನ್ಯೂಸ್ ಹೊರಬರಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರರಂಗದಲ್ಲಿ ಇಬ್ಬರೂ ಬ್ಯುಸಿ ಆಗಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.