
ಗಾಯಕ ಬಾದ್ಷಾ (Singer Badshah) ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಆ ಬೇಡಿಕೆಗೆ ತಕ್ಕಂತೆ ಅವರಿಗೆ ಸಂಭಾವನೆ ಸಿಗುತ್ತದೆ. ಪ್ರತಿ ಹಾಡಿಗೆ ಅಂದಾಜು 20 ಲಕ್ಷ ರೂಪಾಯಿ ಸಂಭಾವನೆ ಪಡೆಯುವ ಅವರ ಲೈಫ್ ಸ್ಟೈಲ್ ಕೂಡ ಐಷಾರಾಮಿ ಆಗಿದೆ. ದುಬಾರಿ ವಸ್ತುಗಳ ಬಗ್ಗೆ ಅವರು ಸಖತ್ ಕ್ರೇಜ್ ಇದೆ. ಜಗತ್ತಿನ ಅತಿ ದುಬಾರಿ ಜಾಕೆಟ್, ಶೂ, ಕಾರುಗಳು ಬಾದ್ಚಾ ಅವರ ಬಳಿ ಇವೆ. ಅಚ್ಚರಿ ಏನೆಂದರೆ, 12 ಕೋಟಿ ರೂಪಾಯಿ ಬೆಲೆ ಬಾಳುವ ರೋಲ್ಸ್ ರಾಯ್ಸ್ (Rolls Royce Cullinan Series II) ಕಾರನ್ನು ಖರೀದಿಸಿದ ನಂತರ 10 ನಿಮಿಷದಲ್ಲೇ ಬೋರ್ ಆಯ್ತು ಎಂದು ಅವರು ಹೇಳಿದ್ದಾರೆ!
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಾದ್ಷಾ ಅವರು ಈ ಬಗ್ಗೆ ಮಾತನಾಡಿದ್ದಾರೆ. ಜಗತ್ತಿನ ಅತಿ ದುಬಾರಿ ಕಾರುಗಳ ಪೈಕಿ ರೋಲ್ಸ್ ರಾಯ್ಸ್ ಮುಂಚೂಣಿಯಲ್ಲಿದೆ. ಆಯ್ದ ಕೆಲವು ಮಂದಿ ಮಾತ್ರ ಇದನ್ನು ಖರೀದಿಸುತ್ತಾರೆ. 2024ರಲ್ಲಿ ಇದರ ಹೊಸ ಆವೃತ್ತಿ ‘ರೋಲ್ಸ್ ರಾಯ್ಸ್ ಕಲಿನನ್ ಸೀರಿಸ್ 2’ ಲಾಂಚ್ ಆಯಿತು. ಅದನ್ನು ಬಾದ್ಚಾ ಅವರು ಖರೀದಿಸಿದರು.
ಅಚ್ಚರಿ ಎಂದರೆ, ಬಾದ್ಷಾ ಅವರು ‘ರೋಲ್ಸ್ ರಾಯ್ಸ್ ಕಲಿನನ್ ಸೀರಿಸ್ 2’ ಕಾರನ್ನು ಖರೀದಿಸುವಾಗಿ ಹೆಚ್ಚೇನೂ ಯೋಚಿಸಲಿಲ್ಲ. ‘ಖರೀದಿಸಬೇಕು ಎನಿಸಿತು ಅಷ್ಟೇ. ಇವತ್ತು ಆ ಕಾರು ಬೇಕು ಅಂತ ತಕ್ಷಣಕ್ಕೆ ನಿರ್ಧಾರ ಮಾಡಿದೆ. ಇದು ನನ್ನ ರೀತಿಯ ಫೀಲಿಂಗ್ಸ್. ಅದು ಒಳ್ಳೆಯ ಕಾರ್ ಹೌದು. ಆದರೆ, 10-15 ನಿಮಿಷ ಮಾತ್ರ ಅದರ ಮಜಾ ಇತ್ತು. ನಂತರ ಮತ್ತೆ ಹೊಸದು ಏನು ಖರೀದಿಸೋದು ಎನಿಸಿತು’ ಎಂದು ಬಾದ್ಷಾ ಅವರು ಹೇಳಿದ್ದಾರೆ.
ಬಾದ್ಷಾ ಖರೀದಿಸಿದ ‘ರೋಲ್ಸ್ ರಾಯ್ಸ್ ಕಲಿನನ್ ಸೀರಿಸ್ 2’ ಕಾರಿನ ಬೆಲೆ ಬರೋಬ್ಬರಿ 12 ಕೋಟಿ ರೂಪಾಯಿ. ಭಾರತದಲ್ಲಿ ಶಾರುಖ್ ಖಾನ್, ಮುಕೇಶ್ ಅಂಬಾನಿ ಮುಂತಾದವರ ಬಳಿ ಮಾತ್ರ ಈ ಕಾರು ಇದೆ. ಬಾದ್ಷಾ ಅವರಿಗೆ ಈ ರೀತಿಯ ಐಷಾರಾಮಿ ವಸ್ತುಗಳ ಬಗ್ಗೆ ಕ್ರೇಜ್ ಇದೆ. ಆ ಕಾರಣದಿಂದಲೇ ಅವರು ಇದನ್ನೆಲ್ಲ ಖರೀದಿ ಮಾಡುತ್ತಾರೆ.
ಇದನ್ನೂ ಓದಿ: ಯುವ ದಸರಾದಲ್ಲಿ ಕನ್ನಡ ಮಾತಾಡಿ ಜನರ ಮನಗೆದ್ದ ಬಾಲಿವುಡ್ ಗಾಯಕ ಬಾದ್ಷಾ
ಈಗ ಬಾದ್ಷಾ ಅವರಿಗೆ 41 ವರ್ಷ ವಯಸ್ಸು. ಬಾಲಿವುಡ್ನಲ್ಲಿ ಅವರು ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಅವರ ಒಟ್ಟು ಆಸ್ತಿ 124 ಕೋಟಿ ರೂಪಾಯಿ ಎನ್ನಲಾಗಿದೆ. ಒಂದು ಲೈವ್ ಸಂಗೀತ ಕಾರ್ಯಕ್ರಮ ನೀಡಲು ಬಾದ್ಷಾ ಅವರು ಅಂದಾಜು 1 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಅಷ್ಟರಮಟ್ಟಿಗೆ ಅವರಿಗೆ ಬೇಡಿಕೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.