AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

38ನೇ ವಯಸ್ಸಿಗೆ ನಿವೃತ್ತಿ ಘೋಷಿಸಿದ ಗಾಯಕ ಅರಿಜಿತ್ ಸಿಂಗ್​ರ ಮುಂದಿನ ಯೋಜನೆ ಏನು?

ಖ್ಯಾತ ಗಾಯಕ ಅರಿಜಿತ್ ಸಿಂಗ್ ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಈ ನಿರ್ಧಾರ ತಿಳಿಸಿದ್ದು, ಇನ್ನು ಮುಂದೆ ಚಲನಚಿತ್ರಗಳಿಗೆ ಹಾಡುವುದಿಲ್ಲ ಎಂದಿದ್ದಾರೆ. ಆದರೆ, ಅವರು ಸಂಗೀತ ಕ್ಷೇತ್ರದಲ್ಲೇ ಮುಂದುವರಿಯಲಿದ್ದು, ಸಂಗೀತ ಅಧ್ಯಯನ ಮತ್ತು ಸಂಗೀತ ಕಚೇರಿಗಳ ಮೇಲೆ ಗಮನಹರಿಸಲಿದ್ದಾರೆ.

38ನೇ ವಯಸ್ಸಿಗೆ ನಿವೃತ್ತಿ ಘೋಷಿಸಿದ ಗಾಯಕ ಅರಿಜಿತ್ ಸಿಂಗ್​ರ ಮುಂದಿನ ಯೋಜನೆ ಏನು?
ಅರಿಜಿತ್ ಸಿಂಗ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Jan 28, 2026 | 7:54 AM

Share

ಬಾಲಿವುಡ್‌ನ ಪ್ರಸಿದ್ಧ ಗಾಯಕ ಅರಿಜಿತ್ ಸಿಂಗ್ (Arijith Singh) ತಮ್ಮ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದ್ದಾರೆ. ಅವರು ಹಿನ್ನೆಲೆ ಗಾಯನದಿಂದ ನಿವೃತ್ತರಾಗಿದ್ದಾರೆ. ಈ ಹಠಾತ್ ಘೋಷಣೆ ಅವರ ಲಕ್ಷಾಂತರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅರಿಜಿತ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಹಿನ್ನೆಲೆ ಗಾಯನದಿಂದ ನಿವೃತ್ತಿ ತೆಗೆದುಕೊಳ್ಳುತ್ತಿರುವುದರ ಬಗ್ಗೆ ಘೋಷಿಸಿದ್ದಾರೆ. ಇದರರ್ಥ ಅರಿಜಿತ್ ಇನ್ನು ಮುಂದೆ ಚಲನಚಿತ್ರಗಳಿಗೆ ಹಾಡುಗಳನ್ನು ಹಾಡುವುದಿಲ್ಲ. ಹಾಗಾದರೆ ಅವರು ಭವಿಷ್ಯದಲ್ಲಿ ಮಾಡೋದು ಏನು? ಆ ಬಗ್ಗೆ ಇಲ್ಲಿದೆ ವಿವರ.

ನಿವೃತ್ತಿ ಘೋಷಿಸುವುದರ ಜೊತೆಗೆ, ಅರಿಜಿತ್ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆಯೂ ಮಾಹಿತಿಯನ್ನು ನೀಡಿದ್ದಾರೆ. ಅರಿಜಿತ್​​ಗೆ ಇನ್ನೂ 38 ವರ್ಷ. ಅವರು ಹಿನ್ನೆಲೆ ಗಾಯಕರಾಗಿ ನಿವೃತ್ತರಾಗಿದ್ದಾರೆ. ಅಂದರೆ ಅವರು ಇನ್ನು ಮುಂದೆ ಚಲನಚಿತ್ರಗಳಿಗೆ ಹಾಡುಗಳನ್ನು ಹಾಡುವುದಿಲ್ಲ. ಆದಾಗ್ಯೂ, ಅವರು ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತಾರಂತೆ. ಅದು ಹೇಗೆ ಅಂತೀರಾ? ಅದಕ್ಕೂ ಉತ್ತರ ಇದೆ ನೋಡಿ.

View this post on Instagram

A post shared by Arijit Singh (@arijitsingh)

ಅರಿಜಿತ್ ಅವರು ಇನ್ನುಮುಂದೆ ಹೊಸ ಹಾಡುಗಳನ್ನು ಹಾಡೋದಿಲ್ಲ. ಅರಿಜಿತ್ ಸಿಂಗ್ ತಮ್ಮ ನಿವೃತ್ತಿಯನ್ನು ಘೋಷಿಸುತ್ತಾ, ಭವಿಷ್ಯದಲ್ಲಿ ಸಂಗೀತವನ್ನು ಹೆಚ್ಚು ನಿಕಟವಾಗಿ ಅಧ್ಯಯನ ಮಾಡಲು ಬಯಸುವುದಾಗಿ ತಿಳಿಸಿದ್ದಾರೆ. ಅರಿಜಿತ್ ಸಿನಿಮಾಗಳ ಹಾಡುಗಳನ್ನು ಹಾಡುವುದಿಲ್ಲ. ಆದರೆ ಅವರು ಕಾನ್ಸರ್ಟ್​​ಗಳನ್ನು ನೀಡೋದನ್ನು ಮುಂದುವರಿಸುತ್ತಾರೆ. ಅರಿಜಿತ್ ಅವರು ಈ ಹಿಂದೆ ಕೆಲಸ ಮಾಡಿದ ಹಾಡುಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಎಂದು ತಿಳಿಸಿದ್ದಾರೆ. ಅದರ ನಂತರ, ಅರಿಜಿತ್ ಸಿನಿಮಾ ಹಾಡುಗಳನ್ನು ಹಾಡುವುದು ಕಂಡುಬರುವುದಿಲ್ಲ.

ಇದನ್ನೂ ಓದಿ: ನಿವೃತ್ತಿ ಘೋಷಿಸಿದ ಗಾಯಕ ಅರಿಜಿತ್ ಸಿಂಗ್: ಕೋಟ್ಯಂತರ ಅಭಿಮಾನಿಗಳಿಗೆ ಶಾಕ್ ಅರಿಜಿತ್ ಬಾಲಿವುಡ್ ಗಾಯನ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರು ಬಾಲಿವುಡ್‌ಗೆ ಅನೇಕ ಉತ್ತಮ ಹಾಡುಗಳನ್ನು ನೀಡಿದ್ದಾರೆ. ‘ಅಗರ್ ತುಮ್ ಸಾಥ್ ಹೋ’, ‘ಲೆಹರಾ ದೋ’, ‘ಹಮಾರಿ ಅಧುರಿ ಕಹಾ’ ಸೇರಿದಂತೆ ಅನೇಕ ಹಾಡುಗಳು ಸೇರಿವೆ. ಅವರು ರಾತ್ರೋರಾತ್ರಿ ಸೂಪರ್ ಹಿಟ್ ಆದವರಲ್ಲ. ಕನ್ನಡದಲ್ಲಿ ‘ನಿನ್ನಿಂದಲೇ’ ಸಿನಿಮಾದ ‘ಮೌನ ತಾಳಿತೆ..’ ಹಾಡು ಅರಿಜಿತ್ ಸಿಂಗ್ ಅವರ ಕಂಠದಲ್ಲಿ ಮೂಡಿಬಂದಿತ್ತು. ಹಿಂದಿ ಮಾತ್ರವಲ್ಲದೇ ಬೆಂಗಾಲಿ, ತಮಿಳು, ತೆಲುಗು ಹಾಡುಗಳನ್ನು ಅವರು ಹಾಡಿದ್ದಾರೆ. ನಿವೃತ್ತಿ ಘೋಷಿಸಿರುವುದಕ್ಕೆ ಕಾರಣ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:53 am, Wed, 28 January 26