AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

12 ಕೋಟಿ ರೂ. ಕಾರು ಖರೀದಿಸಿ, 10 ನಿಮಿಷದಲ್ಲಿ ಬೋರ್ ಆಯ್ತು ಎಂದ ಗಾಯಕ ಬಾದ್​ಷಾ

124 ಕೋಟಿ ರೂಪಾಯಿ ಒಡೆಯ ಬಾದ್​ಷಾ ಅವರು ಆಗಾಗ ಐಷಾರಾಮಿ ವಸ್ತುಗಳನ್ನು ಖರೀದಿ ಮಾಡುತ್ತಾರೆ. 12 ಕೋಟಿ ರೂಪಾಯಿ ಬೆಲೆ ಬಾಳುವ ‘ರೋಲ್ಸ್ ರಾಯ್ಸ್ ಕಲಿನನ್ ಸೀರಿಸ್ 2’ ಕಾರು ಕೂಡ ಅವರ ಬಳಿ ಇದೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಾದ್​ಷಾ ಅವರು ಈ ಕಾರಿನ ಬಗ್ಗೆ ಮಾತನಾಡಿದ್ದಾರೆ.

12 ಕೋಟಿ ರೂ. ಕಾರು ಖರೀದಿಸಿ, 10 ನಿಮಿಷದಲ್ಲಿ ಬೋರ್ ಆಯ್ತು ಎಂದ ಗಾಯಕ ಬಾದ್​ಷಾ
Singer Badshah
ಮದನ್​ ಕುಮಾರ್​
|

Updated on: Jan 27, 2026 | 7:48 PM

Share

ಗಾಯಕ ಬಾದ್​ಷಾ (Singer Badshah) ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಆ ಬೇಡಿಕೆಗೆ ತಕ್ಕಂತೆ ಅವರಿಗೆ ಸಂಭಾವನೆ ಸಿಗುತ್ತದೆ. ಪ್ರತಿ ಹಾಡಿಗೆ ಅಂದಾಜು 20 ಲಕ್ಷ ರೂಪಾಯಿ ಸಂಭಾವನೆ ಪಡೆಯುವ ಅವರ ಲೈಫ್ ಸ್ಟೈಲ್ ಕೂಡ ಐಷಾರಾಮಿ ಆಗಿದೆ. ದುಬಾರಿ ವಸ್ತುಗಳ ಬಗ್ಗೆ ಅವರು ಸಖತ್ ಕ್ರೇಜ್ ಇದೆ. ಜಗತ್ತಿನ ಅತಿ ದುಬಾರಿ ಜಾಕೆಟ್, ಶೂ, ಕಾರುಗಳು ಬಾದ್​ಚಾ ಅವರ ಬಳಿ ಇವೆ. ಅಚ್ಚರಿ ಏನೆಂದರೆ, 12 ಕೋಟಿ ರೂಪಾಯಿ ಬೆಲೆ ಬಾಳುವ ರೋಲ್ಸ್ ರಾಯ್ಸ್ (Rolls Royce Cullinan Series II) ಕಾರನ್ನು ಖರೀದಿಸಿದ ನಂತರ 10 ನಿಮಿಷದಲ್ಲೇ ಬೋರ್ ಆಯ್ತು ಎಂದು ಅವರು ಹೇಳಿದ್ದಾರೆ!

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಾದ್​ಷಾ ಅವರು ಈ ಬಗ್ಗೆ ಮಾತನಾಡಿದ್ದಾರೆ. ಜಗತ್ತಿನ ಅತಿ ದುಬಾರಿ ಕಾರುಗಳ ಪೈಕಿ ರೋಲ್ಸ್ ರಾಯ್ಸ್ ಮುಂಚೂಣಿಯಲ್ಲಿದೆ. ಆಯ್ದ ಕೆಲವು ಮಂದಿ ಮಾತ್ರ ಇದನ್ನು ಖರೀದಿಸುತ್ತಾರೆ. 2024ರಲ್ಲಿ ಇದರ ಹೊಸ ಆವೃತ್ತಿ ‘ರೋಲ್ಸ್ ರಾಯ್ಸ್ ಕಲಿನನ್ ಸೀರಿಸ್ 2’ ಲಾಂಚ್ ಆಯಿತು. ಅದನ್ನು ಬಾದ್​ಚಾ ಅವರು ಖರೀದಿಸಿದರು.

ಅಚ್ಚರಿ ಎಂದರೆ, ಬಾದ್​ಷಾ ಅವರು ‘ರೋಲ್ಸ್ ರಾಯ್ಸ್ ಕಲಿನನ್ ಸೀರಿಸ್ 2’ ಕಾರನ್ನು ಖರೀದಿಸುವಾಗಿ ಹೆಚ್ಚೇನೂ ಯೋಚಿಸಲಿಲ್ಲ. ‘ಖರೀದಿಸಬೇಕು ಎನಿಸಿತು ಅಷ್ಟೇ. ಇವತ್ತು ಆ ಕಾರು ಬೇಕು ಅಂತ ತಕ್ಷಣಕ್ಕೆ ನಿರ್ಧಾರ ಮಾಡಿದೆ. ಇದು ನನ್ನ ರೀತಿಯ ಫೀಲಿಂಗ್ಸ್. ಅದು ಒಳ್ಳೆಯ ಕಾರ್ ಹೌದು. ಆದರೆ, 10-15 ನಿಮಿಷ ಮಾತ್ರ ಅದರ ಮಜಾ ಇತ್ತು. ನಂತರ ಮತ್ತೆ ಹೊಸದು ಏನು ಖರೀದಿಸೋದು ಎನಿಸಿತು’ ಎಂದು ಬಾದ್​ಷಾ ಅವರು ಹೇಳಿದ್ದಾರೆ.

ಬಾದ್​ಷಾ ಖರೀದಿಸಿದ ‘ರೋಲ್ಸ್ ರಾಯ್ಸ್ ಕಲಿನನ್ ಸೀರಿಸ್ 2’ ಕಾರಿನ ಬೆಲೆ ಬರೋಬ್ಬರಿ 12 ಕೋಟಿ ರೂಪಾಯಿ. ಭಾರತದಲ್ಲಿ ಶಾರುಖ್ ಖಾನ್, ಮುಕೇಶ್ ಅಂಬಾನಿ ಮುಂತಾದವರ ಬಳಿ ಮಾತ್ರ ಈ ಕಾರು ಇದೆ. ಬಾದ್​ಷಾ ಅವರಿಗೆ ಈ ರೀತಿಯ ಐಷಾರಾಮಿ ವಸ್ತುಗಳ ಬಗ್ಗೆ ಕ್ರೇಜ್ ಇದೆ. ಆ ಕಾರಣದಿಂದಲೇ ಅವರು ಇದನ್ನೆಲ್ಲ ಖರೀದಿ ಮಾಡುತ್ತಾರೆ.

ಇದನ್ನೂ ಓದಿ: ಯುವ ದಸರಾದಲ್ಲಿ ಕನ್ನಡ ಮಾತಾಡಿ ಜನರ ಮನಗೆದ್ದ ಬಾಲಿವುಡ್ ಗಾಯಕ ಬಾದ್​ಷಾ

ಈಗ ಬಾದ್​ಷಾ ಅವರಿಗೆ 41 ವರ್ಷ ವಯಸ್ಸು. ಬಾಲಿವುಡ್​​ನಲ್ಲಿ ಅವರು ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಅವರ ಒಟ್ಟು ಆಸ್ತಿ 124 ಕೋಟಿ ರೂಪಾಯಿ ಎನ್ನಲಾಗಿದೆ. ಒಂದು ಲೈವ್ ಸಂಗೀತ ಕಾರ್ಯಕ್ರಮ ನೀಡಲು ಬಾದ್​ಷಾ ಅವರು ಅಂದಾಜು 1 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಅಷ್ಟರಮಟ್ಟಿಗೆ ಅವರಿಗೆ ಬೇಡಿಕೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.