Sherlyn Chopra: ‘ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ’: ಮುಚ್ಚುಮರೆ ಇಲ್ಲದೇ ಮಾತನಾಡಿದ್ದ ನಟಿ ಶೆರ್ಲಿನ್​ ಚೋಪ್ರಾ

|

Updated on: Jul 24, 2023 | 6:57 PM

ಮಾಧ್ಯಮವೊಂದಕ್ಕೆ ಸಂದರ್ಶನ ನೀಡುತ್ತಿದ್ದಾಗ ಇಂಥ ವಿಚಾರ ಪ್ರಸ್ತಾಪ ಆಗಿತ್ತು. ಆ ಹೇಳಿಕೆಯ ಬಗ್ಗೆ ಶೆರ್ಲಿನ್​ ಚೋಪ್ರಾ ಅವರು ಇತ್ತೀಚೆಗೆ ಸ್ಪಷ್ಟನೆ ನೀಡಿದ್ದಾರೆ.

Sherlyn Chopra: ‘ಹಣಕ್ಕಾಗಿ ಹಲವರ ಜೊತೆ ಮಲಗಿದ್ದೆ’: ಮುಚ್ಚುಮರೆ ಇಲ್ಲದೇ ಮಾತನಾಡಿದ್ದ ನಟಿ ಶೆರ್ಲಿನ್​ ಚೋಪ್ರಾ
ಶೆರ್ಲಿನ್​ ಚೋಪ್ರಾ
Follow us on

ನಟಿ ಶೆರ್ಲಿನ್​ ಚೋಪ್ರಾ (Sherlyn Chopra) ಅವರದ್ದು ವಿವಾದಾತ್ಮಕ ವ್ಯಕ್ತಿತ್ವ. ಅನೇಕ ಸಂದರ್ಭಗಳಲ್ಲಿ ಅವರು ನೆಗೆಟಿವ್​ ಕಾರಣದಿಂದಲೇ ಸುದ್ದಿ ಆಗಿದ್ದಾರೆ. ಅಶ್ಲೀಲ ಸಿನಿಮಾ ನಿರ್ಮಾಣದಲ್ಲಿ ಅವರು ತೊಡಗಿಕೊಂಡಿದ್ದರು ಎಂಬ ಆರೋಪ ಇದೆ. ರಾಜ್​ ಕುಂದ್ರಾ ಜೊತೆ ಅವರು ಕಿರಿಕ್​ ಮಾಡಿಕೊಂಡಿದ್ದರು. ರಾಜ್​ ಕುಂದ್ರಾ (Raj Kundra) ಅರೆಸ್ಟ್​ ಆದಾಗ ಅವರ ಬಗ್ಗೆ ಶೆರ್ಲಿನ್​ ಚೋಪ್ರಾ ಮಾತನಾಡಿದ್ದರು. ಈಗಲೂ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಸಖತ್​ ಬೋಲ್ಡ್​ ಆಗಿ ಪೋಸ್​ ನೀಡುತ್ತಾರೆ. ತಮ್ಮ ಹಳೆಯ ರಿಲೇಷನ್​ಶಿಪ್​ ಬಗ್ಗೆ ಅವರು ಮುಚ್ಚುಮರೆ ಇಲ್ಲದೇ ಸಂದರ್ಶನಗಳಲ್ಲಿ ಮಾತನಾಡಿದ್ದುಂಟು. ಹಣಕ್ಕಾಗಿ ಹಲವರ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದೆ ಎಂದು ಅವರು ಈ ಮೊದಲು ಹೇಳಿದ್ದರು.

ಮಾಧ್ಯಮವೊಂದಕ್ಕೆ ಸಂದರ್ಶನ ನೀಡುತ್ತಿದ್ದಾಗ ಇಂಥ ವಿಚಾರ ಪ್ರಸ್ತಾಪ ಆಗಿತ್ತು. ‘ಈ ಮೊದಲು ಹಣಕ್ಕಾಗಿ ನಾನು ಹಲವು ಜನರ ಜೊತೆ ಮಲಗಿದ್ದೆ. ಈಗ ನಿಮ್ಮನ್ನು ನಿರಾಸೆಗೊಳಿಸಿದ್ದಕ್ಕೆ ಕ್ಷಮೆ ಇರಲಿ. ಆದರೆ ಈಗ ಹಣಕ್ಕಾಗಿ ನಾನು ಅಂಥ ಕೆಲಸ ಮಾಡುತ್ತಿಲ್ಲ’ ಎಂದು ಶೆರ್ಲಿನ್​ ಚೋಪ್ರಾ ಹೇಳಿದ್ದರು. ಆ ಹೇಳಿಕೆಯ ಬಗ್ಗೆ ಅವರು ಇತ್ತೀಚೆಗೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Sherlyn Chopra: ಹಾಟ್​ ನಟಿಯನ್ನು ಹೊತ್ತುಕೊಂಡು ಹೋದ ಯುವಕ; ವೈರಲ್​ ಆಗಿದೆ ಶೆರ್ಲಿನ್​ ಚೋಪ್ರಾ ವಿಡಿಯೋ

‘ಪ್ಲೇಬಾಯ್​’ ಮ್ಯಾಗಜಿನ್​ಗೆ ಬೆತ್ತಲೆಯಾಗಿ ಪೋಸ್​ ನೀಡಿದ ಭಾರತದ ಮೊದಲ ಸೆಲೆಬ್ರಿಟಿ ಶೆರ್ಲಿನ್​ ಚೋಪ್ರಾ. ಅವರ ಹೆಸರಿನ ಜೊತೆ ಅನೇಕ ವಿವಾದಗಳು ಅಂಟಿಕೊಂಡಿವೆ. ಈ ಹಿಂದೆ ಅವರು ರಾಜಕಾರಣಿಯ ಮಗನೊಬ್ಬನ ಜೊತೆ ರಿಲೇಷನ್​ಶಿಪ್​ನಲ್ಲಿ ಇದ್ದರು. ಆತನ ಜೊತೆ ತಮಗೆ ಇದ್ದ ಸಂಬಂಧದ ಬಗ್ಗೆ ಹೇಳಿಕೆ ನೀಡುವಾಗ ಶೆರ್ಲಿನ್​ ಚೋಪ್ರಾ ಅವರು ಮುಚ್ಚುಮರೆ ಇಲ್ಲದೇ ಮಾತನಾಡಿದ್ದರು. ಆದರೆ ತಮ್ಮ ಹೇಳಿಕೆ ಬೇರೆ ರೀತಿಯಲ್ಲಿ ಬಿಂಬಿತವಾಗಿದೆ ಎಂಬುದು ಶೆರ್ಲಿನ್​ ಚೋಪ್ರಾ ಅವರ ವಾದ.

ಇದನ್ನೂ ಓದಿ: ‘ಶಾರುಖ್​ ನೀಡ್ತಿದ್ದ ಪಾರ್ಟಿಯಲ್ಲಿ ಸ್ಟಾರ್​ ನಟರ ಪತ್ನಿಯರು ಶೌಚಾಲಯಕ್ಕೆ ತೆರಳಿ ಡ್ರಗ್ಸ್​ ಸೇವಿಸಿದ್ರು’; ಶೆರ್ಲಿನ್​ ಚೋಪ್ರಾ

‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಯಿತು. ನನ್ನ ಹಳೆಯ ರಿಲೇಷನ್​ಶಿಪ್​ ಬಗ್ಗೆ ನಾನು ಮಾತನಾಡುತ್ತಿದ್ದೆ. ರಾಜಕಾರಣಿಯ ಮಗನ ಜೊತೆ ನಾನು ರಿಲೇಷನ್​ಶಿಪ್​ನಲ್ಲಿ ಇದ್ದೆ. ಆತ ನನಗೆ ಏನೇ ಮಾಡಿದರು ಅದು ಲೈಂಗಿಕ ಕ್ರಿಯೆಗೋಸ್ಕರವೇ ಆಗಿರುತ್ತಿತ್ತು’ ಅಂತ ತಾವು ಹೇಳಿದ್ದು ಎಂದು ಶೆರ್ಲಿನ್​ ಚೋಪ್ರಾ ಅವರು ಸ್ಪಷ್ಟನೆ ನೀಡಿದ್ದಾರೆ. ಸಿನಿಮಾ ಸಲುವಾಗಿ ಆಡಿಷನ್​ಗೆ ಹೋದಾಗ ಅನೇಕ ನಿರ್ದೇಶಕರು ಕೆಟ್ಟದಾಗಿ ನಡೆದುಕೊಂಡಿದ್ದರು ಎಂಬುದನ್ನು ಕೂಡ ಶೆರ್ಲಿನ್​ ಚೋಪ್ರಾ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.