ಬಾಲಿವುಡ್‌ನ ಸ್ಟಾರ್ ನಟ ಸಲ್ಮಾನ್ ಖಾನ್ (Salman Khan) ಇಂಡಸ್ಟ್ರಿಯ ಹಲವರಿಗೆ ಗಾಡ್ ಫಾದರ್. ಸಲ್ಮಾನ್ ಬಾಲಿವುಡ್‌ನಲ್ಲಿ ಅನೇಕ ನಟ-ನಟಿಯರನ್ನು ಲಾಂಚ್ ಮಾಡಿದ್ದಾರೆ. ಇದರಲ್ಲಿ ಕೆಲವರು ಯಶಸ್ಸು ಕಂಡಿದ್ದಾರೆ. ಈಗ ಸಲ್ಮಾನ್ ಖಾನ್ ಅವರ ಹಳೆಯ ಫೋಟೋ ಒಂದು ವೈರಲ್ ಆಗಿದೆ. ಇದರಲ್ಲಿ ಸಲ್ಮಾನ್ ಖಾನ್ ಜೊತೆ ಇರೋ ಬಾಲಕ ಮೊದಲಿನಿಂದಲೂ ಸಲ್ಮಾನ್ ಅವರನ್ನು ಬಲ್ಲರು. ಅವರು ತಮ್ಮ ಭುಜದ ಮೇಲೆ ಆಡಿದರು. ಈ ಫೋಟೋದಲ್ಲಿ, ಸಲ್ಮಾನ್ ಪಕ್ಕದಲ್ಲಿರುವ ಈ ಪುಟ್ಟ ಹುಡುಗನನ್ನು ಗುರುತಿಸುವುದು ಕಷ್ಟ. ಈ ಫೋಟೋವನ್ನು ಸ್ವತಃ ಸಲ್ಮಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಕೆಲವು ವರ್ಷಗಳ ಹಿಂದೆ ಪೋಸ್ಟ್ ಮಾಡಿದ್ದರು. ಸಲ್ಲು ಜೊತೆ ಇರೋ ಈ ವ್ಯಕ್ತಿ ಜಹೀರ್ ಇಕ್ಬಾಲ್.
ಸೆಲೆಬ್ರಿಟಿಗಳ ಬಾಲ್ಯದ ಫೋಟೋ ಆಗಾಗ ಸಖತ್ ವೈರಲ್ ಆಗುತ್ತಾ ಇರುತ್ತದೆ. ಕೆಲವು ಫೋಟೋಗಳನ್ನು ಸೆಲೆಬ್ರಿಟಿಗಳೇ ಪೋಸ್ಟ್ ಮಾಡುತ್ತಾರೆ. ಈಗ ವೈರಲ್ ಆಗಿರುವ ಈ ಫೋಟೋವನ್ನು 2018ರಲ್ಲಿ ಸಲ್ಮಾನ್ ಖಾನ್ ಪೋಸ್ಟ್ ಮಾಡಿದ್ದರು. ಫೋಟೋದಲ್ಲಿ, ಸಲ್ಮಾನ್ ಪಕ್ಕದಲ್ಲಿರುವ ಈ ಹುಡುಗ ಈಗ ಬೆಳೆದು ಹೀರೋ ಆಗಿದ್ದಾರೆ. ಅಷ್ಟೇ ಅಲ್ಲ ‘ದಬಾಂಗ್’ ನಟಿ ಸೋನಾಕ್ಷಿ ಸಿನ್ಹಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಅವರು ಜಹೀರ್ ಇಕ್ಬಾಲ್. ‘ನೋಟ್‌ಬುಕ್’ ಸಿನಿಮಾದಲ್ಲಿ ಅವರು ನಟಿಸಿದ್ದರು.
ನಟ ಜಹೀರ್ ಇಕ್ಬಾಲ್ ರಿಲೇಶನ್ಶಿಪ್ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಅವರು ನಟಿ ಸೋನಾಕ್ಷಿ ಸಿನ್ಹಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಅವರು 2022ರಲ್ಲಿ ಸೋನಾಕ್ಷಿ ಜನ್ಮದಿನದಂದು ಪೋಸ್ಟ್ ಹಾಕುವ ಮೂಲಕ ವದಂತಿ ಹುಟ್ಟಲು ಕಾರಣ ಆಗಿದ್ದರು. ಜಹೀರ್ ಅವರಿಗೆ 35 ವರ್ಷ ವಯಸ್ಸಾಗಿದ್ದು, ಅವರ ಕುಟುಂಬವು ಚಿನ್ನದ ವ್ಯಾಪಾರವನ್ನು ಹೊಂದಿದೆ. ಅವರು ಇಕ್ಬಾಲ್ ರತನ್ಸಿಯವರ ಮಗ. ಇಕ್ಬಾಲ್ ನಟ ಸಲ್ಮಾನ್ ಖಾನ್ ಅವರ ಆಪ್ತ ಸ್ನೇಹಿತ. ಇಕ್ಬಾಲ್ ಅವರ ಸಹೋದರ ಸನಮ್ ರತಾನ್ಸಿ ಬಾಲಿವುಡ್‌ನ ಪ್ರಸಿದ್ಧ ಸ್ಟೈಲಿಸ್ಟ್. ಜಹೀರ್ ಬಾಲ್ಯದಿಂದಲೂ ಸಲ್ಮಾನ್ ಅವರ ಅಭಿಮಾನಿಯಾಗಿದ್ದು, ಅವರನ್ನು ತಮ್ಮ ಗುರು ಎಂದು ಕರೆಯುತ್ತಾರೆ. ಅವರು ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಅವರೊಂದಿಗೆ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು.
ಇದನ್ನೂ ಓದಿ: ಇನ್ಮುಂದೆ YRF ಸಿನಿಮಾಗಳಲ್ಲಿ ಇರಲ್ಲ ಸಲ್ಮಾನ್ ಖಾನ್ ಅತಿಥಿ ಪಾತ್ರ; ನಿರ್ಧಾರಕ್ಕೆ ಕಾರಣ ಏನು?
ಬಾಲಿವುಡ್‌ನಲ್ಲಿ ಜಹೀರ್‌ನನ್ನು ಲಾಂಚ್ ಮಾಡಿದವರು ಸಲ್ಮಾನ್. 2019ರಲ್ಲಿ ‘ನೋಟ್‌ಬುಕ್’ ಚಿತ್ರದ ಮೂಲಕ ಜಹೀರ್ ದೊಡ್ಡ ಪರದೆಯ ಮೇಲೆ ಪಾದಾರ್ಪಣೆ ಮಾಡಿದರು. ನಟ ಮೊಹನೀಶ್ ಬಹ್ಲ್ ಅವರ ಪುತ್ರಿ ಪ್ರನುತನ್ ಬಹ್ಲ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ‘ನೋಟ್‌ಬುಕ್’ ಚಿತ್ರವನ್ನು ಸಲ್ಮಾನ್ ಖಾನ್ ನಿರ್ಮಿಸಿದ್ದಾರೆ. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಅವರಿಗೆ ಹೆಚ್ಚಿನ ಯಶಸ್ಸು ಸಿಗಲಿಲ್ಲ. ಸೋನಾಕ್ಷಿ ಹಾಗೂ ಜಹೀರ್ ಅವರು ಈ ಮೊದಲು ‘ಡಬಲ್ XL’ ಸಿನಿಮಾದಲ್ಲಿ ಒಟ್ಟಾಗಿ ಬಣ್ಣ ಹಚ್ಚಿದ್ದರು. ಈ ವೇಳೆ ಇವರ ಮಧ್ಯೆ ಇರುವ ಗೆಳೆತನ ಮತ್ತಷ್ಟು ಬಿಗಿ ಆಯಿತು. ಸೋನಾಕ್ಷಿ ಸಿನ್ಹಾ ಅವರಿಗೆ ಹೇಳಿಕೊಳ್ಳುವಂಥ ಆಫರ್ಗಳು ಬರುತ್ತಿಲ್ಲ. ಅವರಿಗೆ ದೊಡ್ಡ ಗೆಲುವಿನ ಅವಶ್ಯಕತೆ ಇದೆ. ಸಲ್ಮಾನ್ ಖಾನ್ ಅವರು ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ‘ಟೈಗರ್ 3’ ಸಿನಿಮಾ ಸಾಧಾರಣ ಗೆಲುವು ಕಂಡಿದೆ. ಅವರು ಕೂಡ ದೊಡ್ಡ ಬ್ರೇಕ್ಗಾಗಿ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ