ಮದುವೆ ಮುಗಿದ ಬೆನ್ನಲ್ಲೇ ಚೆಕಪ್​ಗೆ ಆಸ್ಪತ್ರೆಗೆ ತೆರಳಿದ ಸೋನಾಕ್ಷಿ; ಹುಟ್ಟಿದೆ ಪ್ರೆಗ್ನೆನ್ಸಿ ಸುದ್ದಿ

ಝಹೀರ್ ಹಾಗೂ ಸೋನಾಕ್ಷಿ ಸಿನ್ಹಾ ತರಾತುರಿಯಲ್ಲಿ ಮದುವೆ ಆದರು. ಇವರ ಮದುವೆ ಕೂಡ ಗುಟ್ಟಾಗಿ ನಡೆಯಿತು. ಪ್ರೆಗ್ನೆಂಟ್ ಆದ ಕಾರಣದಿಂದಲೇ ಸೋನಾಕ್ಷಿ ಇಷ್ಟೊಂದು ಆತುರ ಮಾಡಿ ಮದುವೆ ಆದರೇ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ.

ಮದುವೆ ಮುಗಿದ ಬೆನ್ನಲ್ಲೇ ಚೆಕಪ್​ಗೆ ಆಸ್ಪತ್ರೆಗೆ ತೆರಳಿದ ಸೋನಾಕ್ಷಿ; ಹುಟ್ಟಿದೆ ಪ್ರೆಗ್ನೆನ್ಸಿ ಸುದ್ದಿ
ಸೋನಾಕ್ಷಿ-ಝಹೀರ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jun 29, 2024 | 7:27 AM

ಸೋನಾಕ್ಷಿ ಸಿನ್ಹಾ ಹಾಗೂ ಝಹೀರ್ ಇಖ್ಬಾಲ್ ಅವರು ಇತ್ತೀಚೆಗಷ್ಟೇ ವಿವಾಹ ಆಗಿದ್ದಾರೆ. ಜೂನ್ 23ರಂದು ನೋಂದಣಿ ಮಾಡಿಕೊಳ್ಳುವ ಮೂಲಕ ವಿವಾಹ ಕಾರ್ಯ ನೆರವೇರಿಸಿದ್ದಾರೆ. ಅಚ್ಚರಿ ಎಂದರೆ ಈಗ ಸೋನಾಕ್ಷಿ ಸಿನ್ಹಾ ಅವರು ಮುಂಬೈನ ಆಸ್ಪತ್ರೆಗೆ ತೆರಳಿದ್ದಾರೆ. ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಸೋನಾಕ್ಷಿ ಹಾಗೂ ಝಹೀರ್ ಮಗುವಿನ ನಿರೀಕ್ಷೆಯಲ್ಲಿ ಇರಬಹುದೇ ಎನ್ನುವ ಪ್ರಶ್ನೆ ಕಾಡಿದೆ.

ಪ್ರೆಗ್ನೆಂಟ್ ಆದ ಬಳಿಕ ಮದುವೆ ಆಗೋದು ಇತ್ತೀಚೆಗೆ ಟ್ರೆಂಡ್ ಆಗಿದೆ. ಸೆಲೆಬ್ರಿಟಿಗಳ ವಲಯದಲ್ಲಂತೂ ಇದು ಹೊಸದಲ್ಲ. ರಣಬೀರ್ ಕಪೂರ್-ಆಲಿಯಾ ಭಟ್, ಹಾರ್ದಿಕ್ ಪಾಂಡ್ಯ-ನತಾಶಾ ಸೇರಿ ಅನೇಕ ಸೆಲೆಬ್ರಿಟಿಗಳು ಈ ಟ್ರೆಂಡ್​ನ ಫಾಲೋ ಮಾಡಿದ್ದಾರೆ. ಈಗ ಸೋನಾಕ್ಷಿ ಕೂಡ ಹಾಗೆಯೇ ಮಾಡಿದರೇ ಎನ್ನುವ ಪ್ರಶ್ನೆ ಮೂಡಿದೆ.

ಸೋನಾಕ್ಷಿ ಸಿನ್ಹಾ ಹಾಗೂ ಝಹೀರ್ ತರಾತುರಿಯಲ್ಲಿ ಮದುವೆ ಆದರು. ಇವರ ಮದುವೆ ಕೂಡ ಗುಟ್ಟಾಗಿ ನಡೆಯಿತು. ಪ್ರೆಗ್ನೆಂಟ್ ಆದ ಕಾರಣದಿಂದಲೇ ಸೋನಾಕ್ಷಿ ಇಷ್ಟೊಂದು ಆತುರ ಮಾಡಿ ಮದುವೆ ಆದರೇ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಆದರೆ, ಇದಕ್ಕೆ ಸೋನಾಕ್ಷಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಸೋನಾಕ್ಷಿ ಅನ್ಯ ಧರ್ಮದವರನ್ನು ಮದುವೆ ಆಗಿದ್ದಾರೆ. ಈ ಕಾರಣಕ್ಕೆ ಅವರು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಸೋನಾಕ್ಷಿ ಧರ್ಮ ಬದಲಿಸಿದರು ಎಂದು ಕೂಡ ಕೆಲವರು ಹೇಳಿಕೊಂಡಿದ್ದಾರೆ. ಈ ಕಾರಣದಿಂದಲೇ ಅವರಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ.

ಇನ್​ಸ್ಟಂಟ್ ಬಾಲಿವುಡ್ ಸೋಶಿಯಲ್ ಮೀಡಿಯಾ ಪೇಜ್​ನಲ್ಲಿ ಈ ಬಗ್ಗೆ ವಿಡಿಯೋ ಹಂಚಿಕೊಳ್ಳಲಾಗಿದೆ. ಸೋನಾಕ್ಷಿ ಹಾಗೂ ಇತರರು ಆಸ್ಪತ್ರೆಯಿಂದ ಹೊರ ಹೋಗುತ್ತಿರುವ ವಿಡಿಯೋ ಇದೆ. ಪಾಪರಾಜಿಗಳಿಂದ ಅವರು ದೂರವೇ ಇರುವ ಪ್ರಯತ್ನ ಮಾಡಿದ್ದಾರೆ.

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮದುವೆ ಆದ ತಿಂಗಳ ಬಳಿಕ ಮಗು ಪಡೆಯೋ ಘೋಷಣೆ ಮಾಡಿದರು. ಆ ಬಳಿಕ ಏಳೇ ತಿಂಗಳಲ್ಲಿ ಮಗಳು ಜನಿಸಿದಳು. ಅವಳಿಗೆ ರಹಾ ಎಂದು ಹೆಸರು ಇಡಲಾಗಿದೆ. ಈಗ ಸೋನಾಕ್ಷಿ ಕೂಡ ಹೀಗೆಯೇ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ತಂದೆ-ತಾಯಿಯಿಂದಲೇ ಹಣ ಪಡೆದಿದ್ದಾರೆ ಸೋನಾಕ್ಷಿ ಸಿನ್ಹಾ; ಒಟ್ಟೂ ಸಾಲ ಎಷ್ಟು?

ಸೋನಾಕ್ಷಿ ಸಿನ್ಹಾ ಹಾಗೂ ಝಹೀರ್ ಭೇಟಿ ಆಗಿದ್ದು ಸಲ್ಮಾನ್ ಖಾನ್ ಮೂಲಕ. ಇಬ್ಬರ ಪರಿಚಯ ಗೆಳೆತನಕ್ಕೆ ತಿರುಗಿತು. ಆ ಬಳಿಕ ಪ್ರೀತಿ ಮೂಡಿತು. ಈಗ ಹಿರಿಯರ ಸಮ್ಮುಖದಲ್ಲೇ ಇವರ ಮದುವೆ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ