ಟಾಲಿವುಡ್​ಗೆ 50 ಕೆಜಿ ಚಿನ್ನ ಧರಿಸಿ ಬಂದ ನಟಿ ಸೋನಾಕ್ಷಿ ಸಿನ್ಹಾ

ಸೋನಾಕ್ಷಿ ಸಿನ್ಹಾ ಟಾಲಿವುಡ್‌ಗೆ 'ಜಟಾಧರ' ಚಿತ್ರದ ಮೂಲಕ ಪ್ರವೇಶಿಸುತ್ತಿದ್ದಾರೆ. ಈ ಪ್ಯಾನ್ ಇಂಡಿಯಾ ಥ್ರಿಲ್ಲರ್‌ನಲ್ಲಿ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರಕ್ಕಾಗಿ 50 ಕೆಜಿ ಚಿನ್ನಾಭರಣ ಧರಿಸಿದ್ದು, ಇದು ದೈಹಿಕವಾಗಿ ಸವಾಲಾಗಿತ್ತೆಂದು ಸೋನಾಕ್ಷಿ ಹೇಳಿದ್ದಾರೆ. ನವೆಂಬರ್ 7 ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಸುಧೀರ್ ಬಾಬು ಕೂಡ ಇದ್ದಾರೆ.

ಟಾಲಿವುಡ್​ಗೆ 50 ಕೆಜಿ ಚಿನ್ನ ಧರಿಸಿ ಬಂದ ನಟಿ ಸೋನಾಕ್ಷಿ ಸಿನ್ಹಾ
ಸೋನಾಕ್ಷಿ ಸಿನ್ಹಾ

Updated on: Nov 01, 2025 | 3:33 PM

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ (Sonakshi Sinha) ಅವರು ಮದುವೆ ಆದ ಬಳಿಕ ಚಿತ್ರರಂಗದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿಲ್ಲ. ಅವರು ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾಗಳು ಯಶಸ್ಸು ಕಾಣದೆ ಇರುವ ಬಗ್ಗೆ ಅವರಿಗೆ ಬೇಸರ ಇದೆ. ಈಗ ಅವರು ಟಾಲಿವುಡ್​ಗೆ ಎಂಟ್ರಿ ಪಡೆಯಲು ರೆಡಿ ಆಗಿದ್ದಾರೆ. ಇದಕ್ಕಾಗಿ ಅವರು ಬರೋಬ್ಬರಿ 50 ಕೆಜಿ ಚಿನ್ನ ಧರಿಸಿದ್ದಾರೆ.

ಸೋನಾಕ್ಷಿ ತೆಲುಗಿನಲ್ಲಿ ನಟಿಸುತ್ತಿರುವ ಸಿನಿಮಾದ ಹೆಸರು ‘ಜಟಾಧರ’ ಎಂದು. ಸುಧೀರ್ ಬಾಬು ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ನವೆಂಬರ್ 7ರಂದು ವಿಶ್ವಾದ್ಯಂತ ಬಿಡುಗಡೆ ಕಾಣುತ್ತಿದೆ. ಈ ಸಿನಿಮಾದಲ್ಲಿ ಸೋನಾಕ್ಷಿ ವಿಲನ್ ಪಾತ್ರ ಮಾಡುತ್ತಿದ್ದಾರೆ. ಅವರು ಸಿನಿಮಾ ಶೂಟಿಂಗ್ ಮಾಡುವಾಗ 50 ಕೆಜಿ ಚಿನ್ನ ಧರಿಸಿದ್ದಾಗಿ ಮಾಹಿತಿ ನೀಡಿದ್ದಾರೆ.

ಸಂದರ್ಶನ ಒಂದರಲ್ಲಿ ಸೋನಾಕ್ಷಿ ಈ ಬಗ್ಗೆ ಮಾತನಾಡಿದ್ದಾರೆ. ‘ನನ್ನ ವೃತ್ತಿ ಜೀವನದಲ್ಲಿ ದೈಹಿಕವಾಗಿ ಚಾಲೆಂಜಿಂಗ್ ಎನಿಸಿದ ಪಾತ್ರ. ಸೆಟ್​ಗೆ ಬರೋದಕ್ಕೂ ಮೊದಲು ಮೂರು ಗಂಟೆ ತಯಾರಾಗೋಕೆ ಬೇಕಾಯ್ತು. ನಾನು 50 ಕೆಜಿ ಜ್ಯುವೆಲರಿ ಧರಿಸಬೇಕಿತ್ತು. ಇದರಿಂದ ಆ್ಯಕ್ಷನ್ ದೃಶ್ಯಗಳನ್ನು ಮಾಡುವುದು ಕಷ್ಟವಾಗುತ್ತಿತ್ತು’ ಎಂದಿದ್ದಾರೆ ಸೋನಾಕ್ಷಿ ಸಿನ್ಹಾ.

ಇದನ್ನೂ ಓದಿ
‘ಸಾವಿರ ಭಾಷೆ ನಾಲಿಗೆಯಲ್ಲಿರಲಿ, ಕನ್ನಡ ಭಾಷೆ ಹೃದಯದಲ್ಲಿರಲಿ’: ಯಶ್  
‘ಗಿಲ್ಲಿಗೆ ಕಳಪೆ ಕೊಡಬೇಕು’; ಮೊದಲೇ ಪ್ಲ್ಯಾನ್ ಮಾಡಿದ ಅಶ್ವಿನಿ, ರಿಷಾ
ಗಿಲ್ಲಿಗೂ ಚಿಕ್ಕಪ್ಪನಿದ್ದಾನೆ, ಅವರದ್ದೂ ಒಂದು ಕತೆ ಇದೆ ಕೇಳಿ
ಸುದೀಪ್ ಹೇಳಿದ ‘ಗೌರವ’ದ ಪಾಠ ಮರೆತು ಮತ್ತೆ ಕಿತ್ತಾಟಕ್ಕೆ ಇಳಿದ ಅಶ್ವಿನಿ

‘ಈ ಆಭರಣಗಳನ್ನು ಧರಿಸಿ, ಅರ್ಧ ದಿನ ಇರೋದು ನೋವಿನ ಅನುಭವ. ದೈಹಿಕವಾಗಿ ಇದು ಚಾಲೆಂಜಿಂಗ್ ಎನಿಸಿದ್ದರೂ ಸೆಟ್​ನಲ್ಲಿರುವವರು ತೋರಿಸಿದ ಪ್ರೀತಿಯಿಂದ ನಟನೆ ಸುಲಭ ಆಯಿತು’ ಎಂದು ಅವರು ಹೇಳಿಕೊಂಡಿದ್ದಾರೆ. ಅವರ ಪಾತ್ರ ಸಾಕಷ್ಟು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಪತಿ ವಿರುದ್ಧ ಸೇಡು ತೀರಿಸಿಕೊಂಡ ಸೋನಾಕ್ಷಿ ಸಿನ್ಹಾ

‘ಜಟಾಧರ’ ಸಿನಿಮಾ ಥ್ರಿಲ್ಲರ್ ಅಂಶಗಳನ್ನು ಹೊಂದಿದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾನ ವೆಂಕಟ್ ಕಲ್ಯಾಣ್ ಹಾಗೂ ಅಭಿಷೇಕ್ ಜೈಸ್ವಾಲ್ ಅವರು ಒಟ್ಟಾಗಿ ನಿರ್ದೇಶನ ಮಾಡಿದ್ದಾರೆ.  ಸೋನಾಕ್ಷಿ ಸಿನ್ಹಾ ಅವರು ಜಹೀರ್ ಇಕ್ಬಾಲ್ ಅವರನ್ನು ವಿವಾಹ ಆಗಿದ್ದಾರೆ. ಇದು ಅಂತರ್​ ಧರ್ಮೀಯ ಮದುವೆ ಎಂಬ ಕಾರಣಕ್ಕೆ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.