ಕೊರೊನಾ ಸಮಯದಲ್ಲಿ ಆರಂಭವಾದ ನಟ ಸೋನು ಸೂದ್ (Sonu Sood) ಅವರ ಒಳ್ಳೆಯ ಕೆಲಸಗಳು ಈಗಲೂ ಮುಂದುವರಿದುಕೊಂಡು ಬಂದಿವೆ. ಬಡವರಿಗೆ, ಕಷ್ಟದಲ್ಲಿರುವವರಿಗೆ ಸೋನು ಸೂದ್ ಸಹಾಯ ಮಾಡುತ್ತಾ ಇದ್ದಾರೆ. ಇದರಿಂದ ಅನೇಕರು ಸೋನು ಸೂದ್ ಅವರನ್ನು ದೇವರು ಎಂದೇ ಪರಿಗಣಿಸಿದ್ದಾರೆ. ಆದರೆ, ಸೋನು ಸೂದ್ ಇದನ್ನು ಒಪ್ಪುತ್ತಿಲ್ಲ. ಜನರು ಎಷ್ಟೇ ಹೊಗಳಿದರೂ ಅವರಿಗೆ ಅದು ಇಷ್ಟ ಆಗುವುದಿಲ್ಲ. ಈಗ ಸೋನು ಸೂದ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ನನ್ನನ್ನು ದೇವರು ಎನ್ನಬೇಡಿ ಎಂದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಅನೇಕ ಸೆಲೆಬ್ರಿಟಿಗಳು ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅಭಿಮಾನಿಗಳಿಂದ ಪ್ರಶ್ನೆ ಸ್ವೀಕರಿಸಲು ಬಯಸುತ್ತಾರೆ. ಅದೇ ರೀತಿ ಸೋನು ಸೂದ್ ಅವರು ಟ್ವಿಟರ್ನಲ್ಲಿ #AskSonu ಸೆಷನ್ ನಡೆಸಿದ್ದರು. ಈ ವೇಳೆ ಸೋನುಗೆ ಹಲವು ಪ್ರಶ್ನೆಗಳು ಎದುರಾಗಿವೆ. ಆಗ ಅಭಿಮಾನಿಯೋರ್ವ ಅಚ್ಚರಿಯ ಪ್ರಶ್ನೆ ಕೇಳಿದ್ದಾನೆ.
‘ಸೋನು ಅವರೇ ಜನರು ನಿಮ್ಮನ್ನು ದೇವರು ಎನ್ನುತ್ತಾರಲ್ಲ. ಆ ಬಗ್ಗೆ ಎರಡು ಮಾತು’ ಎಂದು ಅಭಿಮಾನಿ ಕೇಳಿದ್ದಾನೆ. ಇದಕ್ಕೆ ಸೋನು ಉತ್ತರಿಸಿದ್ದಾರೆ. ‘ನಾನು ಸಾಮಾನ್ಯ ಮನುಷ್ಯ. ಉಳಿದ ಸಾಮಾನ್ಯ ಜನರೊಂದಿಗೆ ಸಂಪರ್ಕ ಹೊಂದಲು ಬಯಸುತ್ತೇನೆ’ ಎಂದಿದ್ದಾರೆ ಸೋನು ಸೂದ್.
ಇದನ್ನೂ ಓದಿ: ಸೆಟ್ನಲ್ಲಿ ದಕ್ಷಿಣ ಭಾರತದವರ ಈ ನಡೆಯಿಂದ ಸೋನು ಸೂದ್ಗೆ ಆಗಿತ್ತು ಶಾಕ್
ಸೋನು ಅವರು ಸದ್ಯ ಹಿಮಾಚಲ ಪ್ರದೇಶದಲ್ಲಿ ಇದ್ದಾರೆ. ಅಲ್ಲಿಂದ ಅವರು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಫಿಟ್ನೆಸ್ ಕಾಯ್ದುಕೊಳ್ಳಲು ಏನು ಮಾಡುತ್ತಿದ್ದೇನೆ ಎಂಬುದನ್ನು ಅವರು ವಿಡಿಯೋ ಮೂಲಕ ತಿಳಿಸುತ್ತಿದ್ದಾರೆ.
I am just a common man trying to connect rest of the common men of our country ?? https://t.co/UFSW2OGP0s
— sonu sood (@SonuSood) June 26, 2023
ಇದನ್ನೂ ಓದಿ: ಸೆಟ್ನಲ್ಲಿ ದಕ್ಷಿಣ ಭಾರತದವರ ಈ ನಡೆಯಿಂದ ಸೋನು ಸೂದ್ಗೆ ಆಗಿತ್ತು ಶಾಕ್
ಸೋನು ಸೂದ್ ಅವರು ‘ರೋಡೀಸ್ 19’ ಶೋನ ನಡೆಸಿಕೊಟ್ಟಿದ್ದರು. 2022ರ ಏಪ್ರಿಲ್ 8ಕ್ಕೆ ಈ ಶೋ ಆರಂಭ ಆಗಿತ್ತು. ಜುಲೈನಲ್ಲಿ ಇದು ಪೂರ್ಣಗೊಂಡಿತ್ತು. ಈ ಶೋ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು ಅನ್ನೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ