ಗೋವಾ ಸಿನಿಮಾ ಉತ್ಸವ ಎಂದೇ ಕರೆಯಲಾಗುವ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ (Film Festival) ಘೋಷಣೆಯಾಗಿದ್ದು, ಸಿನಿಮಾ ಪ್ರವೇಶಕ್ಕೆ ಆಹ್ವಾನ ನೀಡಲಾಗಿದೆ. ಬಾಕ್ಸ್ ಆಫೀಸ್ನಲ್ಲಿ ಈಗಾಗಲೇ ಕಮಾಲ್ ತೋರಿಸುತ್ತಿರುವ ದಕ್ಷಿಣ ಭಾರತದ ಸಿನಿಮಾಗಳು, ಗೋವಾ ಸಿನಿಮೋತ್ಸವದಲ್ಲಿಯೂ ಕಮಾಲ್ ಮಾಡುವುದು ಪಕ್ಕಾ ಆಗಿದ್ದು, ಕೇವಲ ಕಲಾತ್ಮಕ ಅಥವಾ ಬ್ರಿಜ್ ಸಿನಿಮಾಗಳು ಮಾತ್ರವೇ ಅಲ್ಲದೆ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಯಶಸ್ಸು ಕಂಡ ದಕ್ಷಿಣದ ಸಿನಿಮಾಗಳು ಸಹ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲಿವೆ.
ಕನ್ನಡದ ‘ಕಾಂತಾರ’ ಸಿನಿಮಾ ಈ ವರ್ಷ ಗೋವಾ ಸಿನಿಮೋತ್ಸವದ ಪ್ರಮುಖ ಸಿನಿಮಾಗಳಲ್ಲಿ ಒಂದಾಗಿದೆ. ಅದರ ಜೊತೆಗೆ ಕನ್ನಡದ ‘ಪಿಂಕಿ ಎಲ್ಲಿ?’, ಇನ್ನೂ ಕೆಲವು ಕನ್ನಡ ಸಿನಿಮಾಗಳು ಸಹ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ. ‘ಕೆಜಿಎಫ್ 2’ ಸಿನಿಮಾ ಸಹ ಪಾಪ್ಯುಲರ್ ಸಿನಿಮಾ ವಿಭಾಗದಲ್ಲಿ ಪ್ರದರ್ಶನಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ:‘ಟಗರು ಪಲ್ಯ’ ಚಿತ್ರ ನೋಡಿದ ಶ್ರುತಿಗೆ ನೆನಪಾಯ್ತು ‘ಕಾಂತಾರ’, ‘ಕೆಜಿಎಫ್ 2’; ಕಾರಣ ಏನು?
ಇನ್ನು ತಮಿಳಿನ ‘ಪೊನ್ನಿಯಿನ್ ಸೆಲ್ವನ್ 2’ ಹಾಗೂ ವೆಟ್ರಿಮಾರನ್ ನಿರ್ದೇಶನದ ‘ವಿಡುದಲೈ 1’ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಇನ್ನೂ ಕೆಲವು ತಮಿಳು ಸಿನಿಮಾಗಳು ಪ್ರದರ್ಶನಗೊಳ್ಳಲಿದ್ದು, ‘ಪೊನ್ನಿಯಿನ್ ಸೆಲ್ವನ್ 2’, ‘ವಿಡುದಲೈ 1’ ಹೆಚ್ಚು ಗಮನ ಸೆಳೆದಿರುವ ಸಿನಿಮಾಗಳು. ಇನ್ನು ಮಲಯಾಳಂನ ‘2018’, ‘ನಾನ್ದಾನ್ ಕೇಸ್ ಕುಡು’ ಸಿನಿಮಾಗಳು ಪ್ರದರ್ಶನ ಗೊಳ್ಳಲಿವೆ. ತೆಲುಗಿನ ‘ಆರ್ಆರ್ಆರ್’ ಸಿನಿಮಾ ಪ್ರದರ್ಶನ ಗೊಳ್ಳಲಿದೆ.
‘ಕಾಂತಾರ’, ‘ಪೊನ್ನಿಯಿನ್ ಸೆಲ್ವನ್ 2’ ಹಾಗೂ ವೆಟ್ರಿಮಾರನ್ ನಿರ್ದೇಶನದ ‘ವಿಡುದಲೈ 1’, ‘2018’, ‘ನಾನ್ದಾನ್ ಕೇಸ್ ಕುಡು’ ಇನ್ನೂ ಕೆಲವು ಸಿನಿಮಾಗಳು ಪನೋರಮಾ ವಿಭಾಗದಲ್ಲಿ ಈಗಾಗಲೇ ಪ್ರವೇಶ ಪಡೆದಿವೆ. ಇದರ ಜೊತೆಗೆ ಹಿಂದಿಯ ‘ದಿ ಕಾಶ್ಮೀರ್ ಫೈಲ್ಸ್’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳು ಸಹ ಪ್ರದರ್ಶನ ಗೊಳ್ಳಲಿವೆ.
ನವೆಂಬರ್ 20ಕ್ಕೆ ಗೋವಾ ಸಿನಿಮೋತ್ಸವವು ಆರಂಭಗೊಳ್ಳಲಿದ್ದು, ನವೆಂಬರ್ 28ಕ್ಕೆ ಸಿನಿಮೋತ್ಸವ ಅಂತ್ಯವಾಗಲಿದೆ. ಹಾಲಿವುಡ್ನ ಜನಪ್ರಿಯ ನಟ, ನಿರ್ಮಾಪಕ ಮೈಖಲ್ ಡಗ್ಲಸ್ ಅವರಿಗೆ ಸಿನಿಮೋತ್ಸವದಲ್ಲಿ ಸತ್ಯಜಿತ್ ರೇ ಜೀವನಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಈಗಾಗಲೇ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರು ಘೋಷಣೆ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ