‘ಲಾಲ್ ಸಿಂಗ್ ಚಡ್ಡಾ’ ನೋಡಿ ಓವರ್ ಆಕ್ಟಿಂಗ್ ಎಂದಿದ್ದ ರಾಜಮೌಳಿ, ಆಮಿರ್ ಖಾನ್ ಪ್ರತಿಕ್ರಿಯೆ ಏನಿತ್ತು?

|

Updated on: Aug 18, 2023 | 6:08 PM

Aamir Khan: ಆಮಿರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡಾ' ಸಿನಿಮಾ ನೋಡಿದ್ದ ನಿರ್ದೇಶಕ ರಾಜಮೌಳಿ, ಸಿನಿಮಾದಲ್ಲಿ ನಿಮ್ಮ ನಟನೆ ಓವರ್ ಆಕ್ಟಿಂಗ್ ಎನಿಸುತ್ತದೆ ಎಂದಿದ್ದರಂತೆ, ಅದಕ್ಕೆ ಆಮಿರ್ ಪ್ರತಿಕ್ರಿಯೆ ಏನಾಗಿತ್ತು?

ಲಾಲ್ ಸಿಂಗ್ ಚಡ್ಡಾ ನೋಡಿ ಓವರ್ ಆಕ್ಟಿಂಗ್ ಎಂದಿದ್ದ ರಾಜಮೌಳಿ, ಆಮಿರ್ ಖಾನ್ ಪ್ರತಿಕ್ರಿಯೆ ಏನಿತ್ತು?
ಲಾಲ್ ಸಿಂಗ್ ಚಡ್ಡಾ
Follow us on

ಆಮಿರ್ ಖಾನ್ (Aamir Khan) ನಟನೆಯ ಬಹುನಿರೀಕ್ಷಿತ ‘ಲಾಲ್ ಸಿಂಗ್ ಚಡ್ಡಾ‘ (Laal Singh Chaddha) ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಧಾರುಣ ಸೋಲು ಕಂಡಿತು. 180 ಕೋಟಿ ಬಜೆಟ್​ನ ಈ ಸಿನಿಮಾ ತೆವಳುತ್ತಾ ತೆವಳುತ್ತಾ 100 ಕೋಟಿ ದಾಟಿದ್ದಷ್ಟೆ ಸಾಧನೆಯಾಯ್ತು. ಹಾಲಿವುಡ್​ನ ‘ಫಾರೆಸ್ಟ್ ಗಂಫ್’ ಸಿನಿಮಾದ ರೀಮೇಕ್ ಆಗಿದ್ದ ಈ ಸಿನಿಮಾದಲ್ಲಿ ಆಮಿರ್ ಖಾನ್ ಮಂದಬುದ್ಧಿಯವನ ಆದರೆ ಮೃದು ಹೃದಯದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದರು. ಆಮಿರ್ ಖಾನ್ ನಟನೆ ಬಗ್ಗೆಯೂ ತೀವ್ರ ಟೀಕೆಗಳು ಕೇಳಿ ಬಂದಿದ್ದವು.

ಆದರೆ ಆಮಿರ್ ಖಾನ್​ರ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಬಿಡುಗಡೆ ಆಗುವ ಮುನ್ನವೇ ಸಿನಿಮಾದಲ್ಲಿ ಆಮಿರ್ ಖಾನ್ ನಟನೆಯನ್ನು ರಾಜಮೌಳಿ ಟೀಕಿಸಿದ್ದರಂತೆ. ನಟನೆ ನಕಲಿ ಎನ್ನಿಸುತ್ತದೆ ಎಂಬುದನ್ನು ನೇರವಾಗಿ ಆಮಿರ್ ಖಾನ್​ಗೆ ಹೇಳಿದ್ದರಂತೆ. ಈ ವಿಷಯವನ್ನು ಆಮಿರ್ ಖಾನ್​ರ ಹತ್ತಿರದ ಸಂಬಂಧಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆಮಿರ್ ಖಾನ್​ರ ಹತ್ತಿರದ ಸಂಬಂಧಿ, ನಿರ್ದೇಶಕ ಮನ್ಸೂರ್ ಖಾನ್, ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಬಿಡುಗಡೆ ಆಗುವ ಮುಂಚೆಯೇ ನೋಡಿದ್ದರಂತೆ. ಅವರಿಗೆ ಆಮಿರ್ ಖಾನ್ ನಟನೆಯ ತುಸು ಹೆಚ್ಚಾಯಿತು ಎನಿಸಿತ್ತಂತೆ, ಅದನ್ನು ನೇರವಾಗಿ ಆಮಿರ್ ಬಳಿ ಹೇಳಿದ್ದಾರೆ. ಆದರೆ ಆಮಿರ್, ಮನ್ಸೂರ್ ಮಾತನ್ನು ಒಪ್ಪಿಲ್ಲ, ಈತ ತುಸು ಸಟಲ್ ಆದ ಅಥವಾ ನೈಜ ರೀತಿಯ ಸಿನಿಮಾಗಳನ್ನು ಮಾಡುವವ ಈತನಿಗೆ ಕಮರ್ಷಿಯಲ್ ಸಿನಿಮಾಗಳ ವ್ಯಾಕರಣದ ಬಗ್ಗೆ ಅರಿವಿಲ್ಲ ಎಂದಿದ್ದರಂತೆ.

ಇದನ್ನೂ ಓದಿ:‘ಗಜನಿ’ ಚಿತ್ರಕ್ಕೆ ಬರ್ತಿದೆ ಸೀಕ್ವೆಲ್? ಆಮಿರ್ ಖಾನ್ ಚಿತ್ರ ನಿರ್ಮಾಣ ಮಾಡಲಿದೆ ದಕ್ಷಿಣ ಭಾರತದ ಸಂಸ್ಥೆ

ಆದರೆ ಆ ಬಳಿಕ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾವನ್ನು ಬಿಡುಗಡೆಗೆ ಮುನ್ನವೇ ಆಮಿರ್ ಖಾನ್, ಹೈದರಾಬಾದ್​ನ ಚಿರಂಜೀವಿ ಮನೆಯಲ್ಲಿ ಚರಂಜೀವಿ, ಅಕ್ಕಿನೇನಿ ನಾಗಾರ್ಜುನ, ರಾಜಮೌಳಿ, ಸುಕುಮಾರ್ ಅವರುಗಳಿಗೆ ತೋರಿಸಿದ್ದರು. ಅಂದು ಚಿರಂಜೀವಿ, ಸಿನಿಮಾವನ್ನು ಬಹುವಾಗಿ ಕೊಂಡಾಡಿದ್ದರು, ಆದರೆ ರಾಜಮೌಳಿ ಅಂದೇ ಹೇಳಿದ್ದರಂತೆ, ನಿಮ್ಮ ನಟನೆ ಓವರ್ ಆಕ್ಟಿಂಗ್ ಎನಿಸುತ್ತಿದೆ ಎಂದು. ಆಗ ಆಮಿರ್ ಖಾನ್​ಗೆ ತುಸು ಬೇಸರವಾಗಿತ್ತಂತೆ. ಕೊನೆಗೆ ಸಿನಿಮಾ ಬಿಡುಗಡೆ ಆದಾಗಲೂ ಜನರಿಂದ ಅದೇ ಪ್ರತಿಕ್ರಿಯೆ ವ್ಯಕ್ತವಾಯಿತು.

ಮೂಲ ಸಿನಿಮಾ ‘ಫಾರೆಸ್ಟ್ ಗಂಪ್’ನಲ್ಲಿ ನಾಯಕನಾಗಿ ನಟಿಸಿದ್ದ ಟಾಮ್ ಹ್ಯಾಂಕ್ಸ್ ಬುದ್ಧಿಮಾಂದ್ಯನ ರೀತಿ ನಟಿಸಿರಲಿಲ್ಲ, ಬದಲಿಗೆ ಅಮಾಯಕನ ರೀತಿಯಲ್ಲಿ ನಟಿಸಿದ್ದರು. ಆದರೆ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ಆಮಿರ್ ಖಾನ್ ಬುದ್ಧಿಮಾಂದ್ಯನ ರೀತಿ ಹಾವಭಾವನಗಳನ್ನು ಪ್ರದರ್ಶಿಸುತ್ತಾ ನಟಿಸಿದ್ದಾರೆ. ಅಲ್ಲದೆ ಅವರದ್ದೇ ನಟನೆಯ ‘ಧೂಮ್ 3’ ಸಿನಿಮಾದ ಬುದ್ಧಿಮಾಂದ್ಯನ ಪಾತ್ರದಲ್ಲಿ ನೀಡಿದ್ದ ಯಥಾವತ್ತು ನಟನೆಯನ್ನೇ ಈ ಸಿನಿಮಾದಲ್ಲಿಯೂ ಆಮಿರ್ ಪ್ರದರ್ಶಿಸಿದ್ದರು, ಹಾಗಾಗಿ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಆಮಿರ್ ಖಾನ್ ನಟನೆಯ ಏಕತಾನತೆ ಎನಿಸಿತ್ತು. ಒಟ್ಟಾರೆ ಸಿನಿಮಾ ಫ್ಲಾಪ್ ಆಯಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ