‘ಗಜನಿ’ ಚಿತ್ರಕ್ಕೆ ಬರ್ತಿದೆ ಸೀಕ್ವೆಲ್? ಆಮಿರ್ ಖಾನ್ ಚಿತ್ರ ನಿರ್ಮಾಣ ಮಾಡಲಿದೆ ದಕ್ಷಿಣ ಭಾರತದ ಸಂಸ್ಥೆ

ತಮಿಳಿನ ‘ಗಜನಿ’ ಚಿತ್ರವನ್ನು ನಿರ್ಮಾಣ ಮಾಡಿದ್ದು ಸೇಲಮ್ ಚಂದ್ರಶೇಖರನ್. ಅವರು ಈಗ ನಮ್ಮೊಂದಿಗೆ ಇಲ್ಲ. 2021ರಲ್ಲಿ ಅವರು ತೀರಿಕೊಂಡರು. ಈ ಚಿತ್ರಕ್ಕೆ ಸೀಕ್ವೆಲ್ ಮಾಡಲು ಅಲ್ಲು ಅರವಿಂದ್ ಆಸಕ್ತಿ ತೋರಿಸಿದ್ದಾರೆ.

‘ಗಜನಿ’ ಚಿತ್ರಕ್ಕೆ ಬರ್ತಿದೆ ಸೀಕ್ವೆಲ್? ಆಮಿರ್ ಖಾನ್ ಚಿತ್ರ ನಿರ್ಮಾಣ ಮಾಡಲಿದೆ ದಕ್ಷಿಣ ಭಾರತದ ಸಂಸ್ಥೆ
ಆಮಿರ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on:May 05, 2023 | 8:51 AM

ಆಮಿರ್ ಖಾನ್ (Aamir Khan) ನಟನೆಯ ‘ಗಜನಿ’ ಸಿನಿಮಾ ಸೂಪರ್ ಹಿಟ್ ಆಯಿತು. 2005ರಲ್ಲಿ ಬಂದ ತಮಿಳಿನ ‘ಗಜನಿ’ (Ghajini Movie) ಚಿತ್ರವನ್ನು ಅದೇ ಹೆಸರಲ್ಲಿ ಹಿಂದಿಗೆ ರಿಮೇಕ್ ಮಾಡಲಾಯಿತು. ತಮಿಳಿನಲ್ಲಿ ಸೂರ್ಯ ಮಾಡಿದ್ದ ಪಾತ್ರವನ್ನು ಹಿಂದಿಯಲ್ಲಿ ಆಮಿರ್ ಖಾನ್ ಮಾಡಿದರು. ಈ ಚಿತ್ರಕ್ಕೆ ಈಗ ಸೀಕ್ವೆಲ್ ತರಲು ಸಿದ್ಧತೆ ನಡೆದಿದೆ. ಆಮಿರ್ ಖಾನ್​ ಅವರು ಸೀಕ್ವೆಲ್​ನಲ್ಲಿ ನಟಿಸುತ್ತಿದ್ದು, ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಅಭಿಮಾನಿಗಳಿಗೆ ಖುಷಿ ಆಗಿದೆ.

ತಮಿಳಿನ ‘ಗಜನಿ’ ಚಿತ್ರವನ್ನು ನಿರ್ಮಾಣ ಮಾಡಿದ್ದು ಸೇಲಮ್ ಚಂದ್ರಶೇಖರನ್. ಅವರು ಈಗ ನಮ್ಮೊಂದಿಗೆ ಇಲ್ಲ. 2021ರಲ್ಲಿ ಅವರು ತೀರಿಕೊಂಡರು. ಈ ಚಿತ್ರಕ್ಕೆ ಸೀಕ್ವೆಲ್ ಮಾಡಲು ಅಲ್ಲು ಅರವಿಂದ್ ಆಸಕ್ತಿ ತೋರಿಸಿದ್ದಾರೆ. ಈ ಕಾರಣಕ್ಕೆ ಆಮಿರ್ ಖಾನ್ ಅವರು ಪದೇಪದೇ ಹೈದರಾಬಾದ್​ಗೆ ಆಗಮಿಸುತ್ತಿದ್ದಾರೆ. ಕಥೆಯ ಬಗ್ಗೆ ಅಲ್ಲು ಅರವಿಂದ್ ಹಾಗೂ ಆಮಿರ್ ಖಾನ್ ಅವರು ಚರ್ಚೆ ಮಾಡುತ್ತಿದ್ದಾರೆ.

ಹಿಂದಿಯ ‘ಗಜನಿ’ ಸಿನಿಮಾದಲ್ಲಿ ಆಮಿರ್ ಖಾನ್ ಅವರು ಸಂಜಯ್ ಸಿಂಘಾನಿಯಾ ಆಗಿ ಕಾಣಿಸಿಕೊಂಡಿದ್ದರು. ಈಗ ಚಿತ್ರದ ಕಥೆ ಮುಂದುವರಿಯಲಿದೆ. ಈ ರೀತಿಯಲ್ಲಿ ಕಥೆ ಸಿದ್ಧಪಡಿಸಲಾಗಿದೆ ಎನ್ನಲಾಗುತ್ತಿದೆ. ಇದು ಸದ್ಯದಮಟ್ಟಿಗೆ ಅಂತ-ಕಂತೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಅಲ್ಲು ಅರವಿಂದ್ ಅವರು ಟಾಲಿವುಡ್​ನ ಖ್ಯಾತ ನಿರ್ಮಾಪಕರಲ್ಲಿ ಒಬ್ಬರು. ಗೀತಾ ಆರ್ಟ್ಸ್​ ಮೂಲಕ ಹಲವು ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ಈಗ ಅವರು ‘ಗಜನಿ 2’ ಚಿತ್ರವನ್ನು ನಿರ್ಮಿಸಲು ಹೊರಟಿದ್ದಾರೆ ಎನ್ನಲಾಗುತ್ತಿದೆ. ಆಮಿರ್ ಅವರಿಗೆ ಕಥೆ ಸಾಕಷ್ಟು ಇಷ್ಟ ಆಗಿದೆಯಂತೆ. ಹೀಗಾಗಿ ಅವರು ನಟಿಸಲು ಒಪ್ಪಿದ್ದಾರೆ.

ಇದನ್ನೂ ಓದಿ: ಈದ್​ಗೆ ಸಲ್ಮಾನ್ ಖಾನ್​-ಆಮಿರ್ ಖಾನ್ ಭೇಟಿ; ಈ ಫೋಟೋದಲ್ಲಿ ಮಿಸ್ಸಿಂಗ್ ಆಗಿದ್ದು ಯಾರು?

ಆಮಿರ್ ಖಾನ್​ಗೆ ಸಾಲು ಸಾಲು ಸೋಲುಗಳು ಉಂಟಾಗಿವೆ. ‘ಲಾಲ್ ಸಿಂಗ್ ಚಡ್ಡಾ’ ಚಿತ್ರವೂ ಹೀನಾಯವಾಗಿ ಸೋತಿತು. ಇದು ಆಮಿರ್ ಖಾನ್ ಚಿಂತೆಗೆ ಕಾರಣವಾಗಿತ್ತು. ತರಾತುರಿಯಲ್ಲಿ ಮತ್ತೊಂದು ಸಿನಿಮಾ ಒಪ್ಪಿಕೊಳ್ಳುವ ಬದಲು ಬ್ರೇಕ್ ತೆಗೆದುಕೊಳ್ಳುವುದು ಉತ್ತಮ ಅನ್ನೋದು ಆಮಿರ್ ಖಾನ್ ನಿರ್ಧಾರ ಆಗಿತ್ತು. ಹೀಗಾಗಿ ಅವರು ಬ್ರೇಕ್ ಪಡೆದಿದ್ದರು. ಈಗ ಒಂದೊಳ್ಳೆಯ ಕಥೆ ಸಿಕ್ಕಿರುವುದರಿಂದ ಅವರು ಕಂಬ್ಯಾಕ್ ಆಲೋಚನೆಯಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:50 am, Fri, 5 May 23

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ