AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

MS Dhoni The Untold Story: ಮೇ 12ಕ್ಕೆ ಧೋನಿ ಬಯೋಪಿಕ್​ ಮತ್ತೆ ಬಿಡುಗಡೆ; ಸುಶಾಂತ್ ಫ್ಯಾನ್ಸ್​ ಸಂಭ್ರಮಿಸಲು ಇನ್ನೊಂದು ಚಾನ್ಸ್​

Sushant Singh Rajput: ‘ಎಂ.ಎಸ್​. ಧೋನಿ: ದಿ ಅನ್​ಟೋಲ್ಡ್​ ಸ್ಟೋರಿ’ ಚಿತ್ರ 2016ರಲ್ಲಿ ಸೂಪರ್​ ಹಿಟ್​ ಆಗಿತ್ತು. ಈಗ ಮತ್ತೊಮ್ಮೆ ಆ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡುವ ಅವಕಾಶ ಸಿಗುತ್ತಿದೆ.

MS Dhoni The Untold Story: ಮೇ 12ಕ್ಕೆ ಧೋನಿ ಬಯೋಪಿಕ್​ ಮತ್ತೆ ಬಿಡುಗಡೆ; ಸುಶಾಂತ್ ಫ್ಯಾನ್ಸ್​ ಸಂಭ್ರಮಿಸಲು ಇನ್ನೊಂದು ಚಾನ್ಸ್​
ಎಂಎಸ್ ಧೋನಿ, ಸುಶಾಂತ್ ಸಿಂಗ್ ರಜಪೂತ್
ಮದನ್​ ಕುಮಾರ್​
|

Updated on: May 04, 2023 | 6:22 PM

Share

ಮುಖ್ಯಾಂಶಗಳು

  • 2016ರ ಸೆಪ್ಟೆಂಬರ್​ 30ರಂದು ಬಿಡುಗಡೆ ಆಗಿತ್ತು ‘ಎಂ.ಎಸ್​. ಧೋನಿ: ದಿ ಅನ್​ಟೋಲ್ಡ್​ ಸ್ಟೋರಿ’ ಸಿನಿಮಾ
  • ಮೇ 12ರಂದು ಮರು ಬಿಡುಗಡೆ ಆಗುತ್ತಿದೆ ‘ಎಂ.ಎಸ್​. ಧೋನಿ: ದಿ ಅನ್​ಟೋಲ್ಡ್​ ಸ್ಟೋರಿ’
  • ಚಿತ್ರಮಂದಿರಗಳಲ್ಲಿ ಮತ್ತೊಮ್ಮೆ ಧೋನಿ ಬಯೋಪಿಕ್​ ನೋಡುವ ಸಮಯ ಹತ್ತಿರವಾಗಿದೆ

ಸಿನಿಮಾ ಮತ್ತು ಕ್ರಿಕೆಟ್​ಗೆ ಹತ್ತಿರದ ನಂಟು. ಅನೇಕ ಕ್ರಿಕೆಟರ್​ಗಳ ಬದುಕಿನ ಕುರಿತು ಸಿನಿಮಾಗಳು ಮೂಡಿಬಂದಿವೆ. ಆದರೆ ಯಶಸ್ಸು ಕಂಡಿರುವುದು ಕೆಲವೇ ಕೆಲವು ಮಾತ್ರ. ಕೂಲ್​ ಕ್ಯಾಪ್ಟನ್​ ಎನಿಸಿಕೊಂಡ ಮಹೇಂದ್ರ ಸಿಂಗ್​ ಧೋನಿ ಅವರ ಜೀವನದ ಕುರಿತು ‘ಎಂ.ಎಸ್​. ಧೋನಿ: ದಿ ಅನ್​ಟೋಲ್ಡ್​ ಸ್ಟೋರಿ’ (MS Dhoni: The Untold Story) ಚಿತ್ರ ಮೂಡಿಬಂದಿತ್ತು. ಆ ಬಯೋಪಿಕ್​ನಲ್ಲಿ ಖ್ಯಾತ ನಟ ಸುಶಾಂತ್​ ಸಿಂಗ್​ ರಜಪೂತ್​ (Sushant Singh Rajput) ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದರು. ಧೋನಿ ಪಾತ್ರಕ್ಕೆ ಅವರು ಜೀವ ತುಂಬಿದ್ದರು. ವಿಶೇಷ ಏನೆಂದರೆ, ಮೇ 12ರಂದು ಈ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಈ ಮೂಲಕ ದೊಡ್ಡ ಪರದೆಯಲ್ಲಿ ಸುಶಾಂತ್​ ಸಿಂಗ್​ ರಜಪೂತ್​ ಅವರನ್ನು ನೋಡಿ ಖುಷಿಪಡಲು ಅಭಿಮಾನಿಗಳಿಗೆ ಅವಕಾಶ ಸಿಗುತ್ತಿದೆ. ಎಂ.ಎಸ್​. ಧೋನಿ (MS Dhoni) ಅಭಿಮಾನಿಗಳು ಕೂಡ ಈ ಸಿನಿಮಾ ನೋಡಿ ಎಂಜಾಯ್​ ಮಾಡಲಿದ್ದಾರೆ.

ಎಂ.ಎಸ್​. ಧೋನಿ ಅವರು ಕ್ರಿಕೆಟ್​ ಲೋಕದಲ್ಲಿ ಮಾಡಿದ ಸಾಧನೆ ಅಪಾರ. ಟೀಮ್​ ಇಂಡಿಯಾವನ್ನು ಅವರು ಮುನ್ನಡೆಸಿದ ರೀತಿಗೆ ಫ್ಯಾನ್ಸ್​ ಸಲಾಂ ಎನ್ನುತ್ತಾರೆ. ಧೋನಿ ಅವರ ಬಗ್ಗೆ ಅಭಿಮಾನಿಗಳು ಹೊಂದಿರುವ ಕ್ರೇಜ್​ ಇನ್ನೂ ಕಡಿಮೆ ಆಗಿಲ್ಲ. ಅದರ ಜೊತೆಗೆ ಅವರ ರಿಯಲ್​ ಲೈಫ್​ ಘಟನೆಗಳು ಕೂಡ ಅಷ್ಟೇ ಇಂಟರೆಸ್ಟಿಂಗ್​ ಆಗಿವೆ. ಹಾಗಾಗಿ ಆ ಎಲ್ಲ ವಿವರಗಳನ್ನು ಇಟ್ಟುಕೊಂಡು ಬಯೋಪಿಕ್​​ ಮಾಡಲಾಯಿತು.

ಇದನ್ನೂ ಓದಿ: ಮರಣೋತ್ತರ ಪರೀಕ್ಷೆ ವೇಳೆ ಸುಶಾಂತ್ ಸಿಂಗ್ ದೇಹದ ಮೇಲಿತ್ತು ಗಾಯ; ಸತ್ಯ ಮುಚ್ಚಿಟ್ರಾ ವೈದ್ಯರು?

2016ರ ಸೆಪ್ಟೆಂಬರ್​ 30ರಂದು ‘ಎಂ.ಎಸ್​. ಧೋನಿ: ದಿ ಅನ್​ಟೋಲ್ಡ್​ ಸ್ಟೋರಿ’ ಸಿನಿಮಾ ಬಿಡುಗಡೆ ಆಗಿತ್ತು. ನೀರಜ್​ ಪಾಂಡೆ ನಿರ್ದೇಶನದ ಆ ಚಿತ್ರಕ್ಕೆ ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತ್ತು. ಬಾಕ್ಸ್​ ಆಫೀಸ್​ನಲ್ಲಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ಜಯಭೇರಿ ಬಾರಿಸಿತು. ಕ್ರಿಕೆಟ್​ ಪ್ರೇಮಿಗಳು ಆ ಸಿನಿಮಾವನ್ನು ಮನಸಾರೆ ಮೆಚ್ಚಿಕೊಂಡರು. ಹಾಡುಗಳು ಕೂಡ ಜನರ ಮನಸೆಳೆದವು. ಈಗ ಮತ್ತೊಮ್ಮೆ ಆ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡುವ ಸಮಯ ಹತ್ತಿರವಾಗಿದೆ.

ಇದನ್ನೂ ಓದಿ: ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಈಗ ಎನು ಮಾಡುತ್ತಿದ್ದಾರೆ? ಇಲ್ಲಿದೆ ಮಾಹಿತಿ

ಸುಶಾಂತ್​ ಸಿಂಗ್​ ರಜಪೂತ್​ ಅವರಿಗೆ ‘ಎಂ.ಎಸ್​. ಧೋನಿ: ದಿ ಅನ್​ಟೋಲ್ಡ್​ ಸ್ಟೋರಿ’ ಸಿನಿಮಾದಿಂದ ದೊಡ್ಡ ಯಶಸ್ಸು ಸಿಕ್ಕಿತು. ಧೋನಿ ಪಾತ್ರದಲ್ಲಿ ಅವರ ನಟನೆಗೆ ಎಲ್ಲರೂ ಭೇಷ್​ ಎಂದರು. ಈ ಪಾತ್ರವನ್ನು ನಿಭಾಯಿಸಲು ಅವರು ತೆರೆಹಿಂದೆ ಸಾಕಷ್ಟು ಶ್ರಮಿಸಿದ್ದರು. ನಟಿ ಕಿಯಾರಾ ಅಡ್ವಾಣಿ ಮತ್ತು ದಿಶಾ ಪಟಾಣಿ ಕೂಡ ಈ ಸಿನಿಮಾದಿಂದ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್