ಬೆಚ್ಚಿ ಬೀಳಿಸುವ ‘ಸ್ತ್ರೀ 2’ ಸಿನಿಮಾದ ಟೀಸರ್​ ಲೀಕ್​; ತಮನ್ನಾ ನೋಡಿ ಎಲ್ಲರಿಗೂ ಶಾಕ್​

|

Updated on: Jun 14, 2024 | 7:29 PM

ನಿರ್ದೇಶಕ ಅಮರ್​ ಕೌಶಿಕ್​ ಅವರು ‘ಸ್ತ್ರೀ 2’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಶ್ರದ್ಧಾ ಕಪೂರ್​, ರಾಜ್​ಕುಮಾರ್​ ರಾವ್​, ಪಂಕಜ್​ ತ್ರಿಪಾಠಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆನ್​ಲೈನ್​ನಲ್ಲಿ ಈ ಸಿನಿಮಾದ ಟೀಸರ್​ ಸೋರಿಕೆ ಆಗಿದೆ. ಅದರಲ್ಲಿ ತಮನ್ನಾ ಭಾಟಿಯಾ ಕೂಡ ನಟಿಸಿರುವುದು ಗೊತ್ತಾಗಿದೆ. ಇದರಿಂದಾಗಿ ಸಿನಿಮಾ ಮೇಲಿನ ನಿರೀಕ್ಷೆ ಜಾಸ್ತಿಯಾಗಿದೆ.

ಬೆಚ್ಚಿ ಬೀಳಿಸುವ ‘ಸ್ತ್ರೀ 2’ ಸಿನಿಮಾದ ಟೀಸರ್​ ಲೀಕ್​; ತಮನ್ನಾ ನೋಡಿ ಎಲ್ಲರಿಗೂ ಶಾಕ್​
‘ಸ್ತ್ರೀ 2’ ಸಿನಿಮಾದ ಟೀಸರ್​ ಲೀಕ್​
Follow us on

2018ರಲ್ಲಿ ಬಿಡುಗಡೆ ಆಗಿದ್ದ ‘ಸ್ತ್ರೀ’ ಸಿನಿಮಾಗೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು. ರಾಜ್​ಕುಮಾರ್​ ರಾವ್​ ಹಾಗೂ ಶ್ರದ್ಧಾ ಕಪೂರ್​ (Shraddha Kapoor) ಜೋಡಿಯಾಗಿ ನಟಿಸಿದ್ದ ಆ ಸಿನಿಮಾಗೆ ಈಗ ಸೀಕ್ವೆಲ್​ ಸಿದ್ಧವಾಗಿದೆ. ‘ಸ್ತ್ರೀ 2’ ಚಿತ್ರದ ಟೀಸರ್​ (Stree 2 Teaser) ಈಗ ಲೀಕ್ ಆಗಿದೆ. ಅದರಲ್ಲಿ ನಟಿ ತಮನ್ನಾ ಭಾಟಿಯಾ ಅವರನ್ನು ನೋಡಿ ಪ್ರೇಕ್ಷಕರಿಗೆ ಅಚ್ಚರಿ ಆಗಿದೆ. ಈ ಸಿನಿಮಾದ ಪಾತ್ರವರ್ಗದಲ್ಲಿ ತಮನ್ನಾ ಭಾಟಿಯಾ (Tamannaah Bhatia)ಇರುವ ವಿಚಾರವನ್ನು ಚಿತ್ರತಂಡ ಬಹಿರಂಗಪಡಿಸಿರಲಿಲ್ಲ. ಈಗ ಟೀಸರ್​ನಲ್ಲಿ ಅವರನ್ನು ನೋಡಿದ ಬಳಿಕ ‘ಸ್ತ್ರೀ 2’ ಮೇಲೆ ಜನರ ನಿರೀಕ್ಷೆ ಜಾಸ್ತಿ ಆಗಿದೆ.

ಅಷ್ಟಕ್ಕೂ ‘ಸ್ತ್ರೀ 2’ ಟೀಸರ್​ ಲೀಕ್​ ಆಗಿದ್ದು ಹೇಗೆ? ಹಾರರ್​ ಕಥಾಹಂದರದ ‘ಮುಂಜ್ಯ’ ಸಿನಿಮಾ ಈಗ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಜೊತೆಗೆ ‘ಸ್ತ್ರೀ 2’ ಟೀಸರ್​ ಬಿತ್ತರಿಸಲಾಗುತ್ತಿದೆ. ಆದರೆ ಆನ್​ಲೈನ್​ನಲ್ಲಿ ಟೀಸರ್​ ಲಭ್ಯವಾಗಿಲ್ಲ. ಚಿತ್ರಮಂದಿರಗಳಲ್ಲಿ ಪ್ರದರ್ಶನವಾದ ಟೀಸರ್​ ಅನ್ನು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಕೊಂಡ ಪ್ರೇಕ್ಷಕರು ಅದನ್ನು ಆನ್​ಲೈನ್​ನಲ್ಲಿ ಹರಿಬಿಟ್ಟಿದ್ದಾರೆ.

ಆಗಸ್ಟ್​ನಲ್ಲಿ ‘ಸ್ತ್ರೀ 2’ ಸಿನಿಮಾ ರಿಲೀಸ್​ ಆಗಲಿದೆ. ಶ್ರದ್ಧಾ ಕಪೂರ್​ ಅವರು ದೆವ್ವದ ಗೆಟಪ್​ನಲ್ಲಿ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಲು ಬರುತ್ತಿದ್ದಾರೆ. ಶ್ರದ್ಧಾ ಕಪೂರ್​ ಜೊತೆ ರಾಜ್​ಕುಮಾರ್​ ರಾವ್​ ಅವರ ಕಾಂಬಿನೇಷನ್​ ಈ ಬಾರಿ ಹೇಗಿರಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಮೊದಲ ಪಾರ್ಟ್​ ರೀತಿಯೇ ಪಂಕಜ್​ ತ್ರಿಪಾಠಿ, ಅಭಿಷೇಕ್​ ಬ್ಯಾನರ್ಜಿ, ಅಪಾರಶಕ್ತಿ ಖುರಾನಾ ಮುಂತಾದವರು ‘ಸ್ತ್ರೀ 2’ ಸಿನಿಮಾದ ಭಾಗವಾಗಿದ್ದಾರೆ.

ಇದನ್ನೂ ಓದಿ: ಭಾನುವಾರ ಸ್ನಾನ ಮಾಡಲ್ಲ ನಟಿ ತಮನ್ನಾ ಭಾಟಿಯಾ

ಅಮರ್​ ಕೌಶಿಕ್​ ಅವರು ‘ಸ್ತ್ರೀ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಆನ್​ಲೈನ್​ನಲ್ಲಿ ಲೀಕ್​ ಆಗಿರುವ ಟೀಸರ್​ ನೋಡಿದ ಬಳಿಕ ಅಭಿಮಾನಿಗಳ ಕೌತುಕ ಡಬಲ್​ ಆಗಿದೆ. ಅಷ್ಟಕ್ಕೂ ತಮನ್ನಾ ಭಾಟಿಯಾ ಅವರ ಈ ಸಿನಿಮಾದ ಒಂದು ಸ್ಪೆಷಲ್​ ಹಾಡಿನಲ್ಲಿ ಮಾತ್ರ ನಟಿಸಿದ್ದಾರಾ ಅಥವಾ ಅತಿಥಿ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಾರಾ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಅವರ ಎಂಟ್ರಿಯಿಂದಾಗಿ ಸಿನಿಮಾ ಮೇಲಿನ ಹೈಪ್​ ಜಾಸ್ತಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.