‘ಗದರ್ 2’ ಪಾಕ್ ವಿರೋಧಿಯಲ್ಲ, ಪಾಕ್-ಭಾರತದ ಬಿಕ್ಕಟ್ಟಿಗೆ ರಾಜಕೀಯ ಕಾರಣ: ಸನ್ನಿ ಡಿಯೋಲ್

|

Updated on: Aug 27, 2023 | 2:35 PM

Sunny Deol: ಬಿಜೆಪಿ ಸಂಸದರೂ, ನಟರು ಆಗಿರುವ ಸನ್ನಿ ಡಿಯೋಲ್, ತಮ್ಮ ಗದರ್ 2 ಸಿನಿಮಾ ಬಗ್ಗೆ ಮಾತನಾಡುತ್ತಾ, ನಮ್ಮ ಸಿನಿಮಾ ಪಾಕ್ ವಿರೋಧವಲ್ಲ ಎಂದಿದ್ದಾರೆ. ಮಾತ್ರವಲ್ಲದೆ ತಮ್ಮ ಸಿನಿಮಾವನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.

ಗದರ್ 2 ಪಾಕ್ ವಿರೋಧಿಯಲ್ಲ, ಪಾಕ್-ಭಾರತದ ಬಿಕ್ಕಟ್ಟಿಗೆ ರಾಜಕೀಯ ಕಾರಣ: ಸನ್ನಿ ಡಿಯೋಲ್
ಗದರ್
Follow us on

ಬಿಜೆಪಿ ಸಂಸದ ಸನ್ನಿ ಡಿಯೋಲ್ (Sunny Deol) ನಟನೆಯ ‘ಗದರ್ 2’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಹಿಟ್ ಎನಿಸಿಕೊಂಡಿದೆ. ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾದ ಕಲೆಕ್ಷನ್ ಅನ್ನು ಹಿಂದಿಕ್ಕುವ ಸುಳಿವನ್ನು ಸಿನಿಮಾ ನೀಡಿದ್ದು, ದೇಶದಲ್ಲಿ ಮಾತ್ರವೇ ಅಲ್ಲದೆ ಕೆಲವು ಹೊರ ದೇಶಗಳಲ್ಲಿಯೂ ಸಿನಿಮಾ ಭರ್ಜರಿ ಯಶಸ್ಸು ಗಳಸಿದೆ. ಇದರ ನಡುವೆ ಸಿನಿಮಾದ ಕತೆಯ ಬಗ್ಗೆ ಪಾಕಿಸ್ತಾನಿಯರು, ಕೆಲವು ಭಾರತೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆ ಬಗ್ಗೆ ನಟ ಸನ್ನಿ ಡಿಯೋಲ್ ಪ್ರತಿಕ್ರಿಯೆ ನೀಡಿದ್ದಾರೆ.

ಸುಮಾರು 500 ಕೋಟಿ ಹಣವನ್ನು ಸನ್ನಿ ಡಿಯೋಲ್ ನಟನೆಯ ‘ಗದರ್ 2’ ಸಿನಿಮಾ ಗಳಿಸಿದ್ದು ಚಿತ್ರಮಂದಿರಗಳಲ್ಲಿ ಇನ್ನೂ ಚೆನ್ನಾಗಿಯೇ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ನಾಯಕ ಸನ್ನಿ ಡಿಯೋಲ್ ತನ್ನ ಮಗಳಿಗಾಗಿ ಪಾಕಿಸ್ತಾನಕ್ಕೆ ಅಕ್ರಮವಾಗಿ ತೆರಳಿ ಅಲ್ಲಿನವರೊಟ್ಟಿಗೆ ಹೋರಾಡುವ ಕತೆಯನ್ನು ಸಿನಿಮಾ ಒಳಗೊಂಡಿದೆ. 2001 ರಲ್ಲಿ ಬಿಡುಗಡೆ ಆಗಿದ್ದ ಗದರ್ ಸಿನಿಮಾದಲ್ಲಿ ನಾಯಕ, ನಾಯಕಿಗಾಗಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿನವರೊಟ್ಟಿಗೆ ಹೋರಾಡಿ ಗೆಲ್ಲುವ ಕತೆಯನ್ನು ಒಳಗೊಂಡಿತ್ತು.

‘ಗದರ್ 2’ ಸಿನಿಮಾದ ಬಗ್ಗೆ ಕೆಲ ಪಾಕಿಸ್ತಾನಿಯರು, ಕೆಲ ಭಾರತೀಯರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಿನಿಮಾ ಪಾಕಿಸ್ತಾನ ವಿರೋಧಿ ಭಾವ ಒಳಗೊಂಡಿದೆ. ಪಾಕಿಸ್ತಾನಿಯರನ್ನು ಕಾರಣವಿಲ್ಲದೆ ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸನ್ನಿ ಡಿಯೋಲ್, ”ಸಿನಿಮಾವು ಪಾಕ್ ವಿರೋಧಿ ಅಥವಾ ಇಸ್ಲಾಂ ವಿರೋಧಿ ಅಲ್ಲ” ಎಂದಿದ್ದಾರೆ.

ಇದನ್ನೂ ಓದಿ:‘ಅದು ನನ್ನ ವೈಯಕ್ತಿಕ ವಿಚಾರ’; ಸಾಲ ಮರು ಪಾವತಿ ಮಾಡದ ಬಗ್ಗೆ ಕೇಳಿದ್ದಕ್ಕೆ ಸಿಟ್ಟಾದ ಸನ್ನಿ ಡಿಯೋಲ್

ಸಿನಿಮಾದಲ್ಲಿ ವಿಲನ್ ಅನ್ನು ತೋರಿಸಿದಾಗ ಅಥವಾ ವಿಲನ್ ಯಾವುದಾದರೂ ಅತ್ಯಂತ ಹಿಂಸಾತ್ಮಕ ಕಾರ್ಯ ಮಾಡಿದಾಗೆಲ್ಲ ಹಿನ್ನೆಲೆಯಲ್ಲಿ ಕಲ್ಮಾ ಕೇಳಿ ಬರುತ್ತದೆ. ಇದರ ಬಗ್ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿರುವ ಸನ್ನಿ ಡಿಯೋಲ್, ”ಗದರ್ 2′ ಸಿನಿಮಾವನ್ನು ಅಷ್ಟೋಂದು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಅದೊಂದು ಸಿನಿಮಾ ಅಷ್ಟೆ. ಸಾಮಾಜಿಕ ಜಾಲತಾಣದಲ್ಲಿ, ಸಿನಿಮಾಗಳಲ್ಲಿ ಏನೇನೋ ತೋರಿಸಲಾಗುತ್ತಿರುತ್ತದೆ. ಅದೆಲ್ಲ ಸತ್ಯವಲ್ಲ” ಎಂದಿದ್ದಾರೆ.

‘ಗದರ್ 2’ ಸಿನಿಮಾ ಪಾಕ್ ವಿರೋಧಿ ಅಲ್ಲ ಎಂದಿರುವ ಸನ್ನಿ ಡಿಯೋಲ್, ಭಾರತ ಹಾಗೂ ಪಾಕಿಸ್ತಾನದ ಇಂದಿನ ಸ್ಥಿತಿಗೆ ಕೆಟ್ಟ ರಾಜಕೀಯ ಕಾರಣ. ಎರಡೂ ಕಡೆ ಜನರಲ್ಲಿ ಕೇವಲ ಮಾನವೀಯತೆ ಮಾತ್ರವೇ ಇದೆ” ಎಂದಿದ್ದಾರೆ. ‘ಗದರ್ 2’ ಸಿನಿಮಾ ಸೂಪರ್ ಹಿಟ್ ಆಗಿರುವ ಬೆನ್ನಲ್ಲೆ ‘ಗದರ್ 3’ ಸಿನಿಮಾಕ್ಕೆ ತಯಾರಿ ಆರಂಭವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ