AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅದು ನನ್ನ ವೈಯಕ್ತಿಕ ವಿಚಾರ’; ಸಾಲ ಮರು ಪಾವತಿ ಮಾಡದ ಬಗ್ಗೆ ಕೇಳಿದ್ದಕ್ಕೆ ಸಿಟ್ಟಾದ ಸನ್ನಿ ಡಿಯೋಲ್

ಸನ್ನಿ ಡಿಯೋಲ್ ಅವರು ಈ ಮೊದಲು 56 ಕೋಟಿ ರೂಪಾಯಿ ಸಾಲ ಮಾಡಿದ್ದರು. ಈ ಸಾಲವನ್ನು ಅವರು ಪಡೆದಿದ್ದು ಏಳು ವರ್ಷದ ಹಿಂದೆ ಎನ್ನಲಾಗಿದೆ. ಆದರೆ, ಅವರು ಸಾಲವನ್ನು ಹಿಂದಿರುಗಿಸಿಲ್ಲ. ಈ ಕಾರಣಕ್ಕೆ ಬ್ಯಾಂಕ್​ನವರು ಮನೆ ಹರಾಜಿಗೆ ಮುಂದಾಗಿದ್ದರು. ಈ ಬಗ್ಗೆ ಸನ್ನಿಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ.

‘ಅದು ನನ್ನ ವೈಯಕ್ತಿಕ ವಿಚಾರ’; ಸಾಲ ಮರು ಪಾವತಿ ಮಾಡದ ಬಗ್ಗೆ ಕೇಳಿದ್ದಕ್ಕೆ ಸಿಟ್ಟಾದ ಸನ್ನಿ ಡಿಯೋಲ್
ಸನ್ನಿ ಡಿಯೋಲ್
Follow us
ರಾಜೇಶ್ ದುಗ್ಗುಮನೆ
|

Updated on: Aug 22, 2023 | 11:58 AM

ನಟ, ಸಂಸದ ಸನ್ನಿ ಡಿಯೋಲ್ (Sunny Deol) ಅವರು ಸದ್ಯ ಸುದ್ದಿಯಲ್ಲಿದ್ದಾರೆ. 56 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡದ ಕಾರಣ ಅವರ ಒಡೆತನದ ಬಂಗಲೆ ಹರಾಜು ಹಾಕಲು ಬ್ಯಾಂಕ್​ನವರು ಮುಂದಾಗಿದ್ದರು. ಆದರೆ ತಾಂತ್ರಿಕ ಸಮಸ್ಯೆಯ ಕಾರಣ ನೀಡಿ ಹರಾಜು ಪ್ರಕ್ರಿಯೆಯನ್ನು ಹಿಂಪಡೆಯಲಾಗಿದೆ. ಈ ಬಗ್ಗೆ ಸನ್ನಿ ಡಿಯೋಲ್ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ‘ಅದು ನನ್ನ ವೈಯಕ್ತಿಕ ವಿಚಾರ’ ಎಂದಷ್ಟೇ ಹೇಳಿ ಸುಮ್ಮನಾಗಿದ್ದಾರೆ. ಸದ್ಯ ಸನ್ನಿ ‘ಗದರ್ 2’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ.

ಸನ್ನಿ ಡಿಯೋಲ್ ಅವರು ಈ ಮೊದಲು 56 ಕೋಟಿ ರೂಪಾಯಿ ಸಾಲ ಮಾಡಿದ್ದರು. ಈ ಸಾಲವನ್ನು ಅವರು ಪಡೆದಿದ್ದು ಏಳು ವರ್ಷದ ಹಿಂದೆ ಎನ್ನಲಾಗಿದೆ. ಆದರೆ, ಅವರು ಸಾಲವನ್ನು ಹಿಂದಿರುಗಿಸಿಲ್ಲ. ಸಾಲ ಪಡೆಯುವಾಗ ಅವರು ತಮ್ಮ ಒಡೆತನದ ‘ಸನ್ನಿ ವಿಲ್ಲಾ’ ಬಂಗಲೆಯನ್ನು ಅಡ ಇಟ್ಟಿದ್ದರು. ಈ ಕಾರಣಕ್ಕೆ ಬ್ಯಾಂಕ್​ನವರು ಮನೆ ಹರಾಜಿಗೆ ಮುಂದಾಗಿದ್ದರು. ಈ ಬಗ್ಗೆ ಸನ್ನಿಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ.

‘ನಾನು ಈ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ. ಇದು ನನ್ನ ವೈಯಕ್ತಿಕ ವಿಚಾರ. ನಾನು ಏನೇ ಹೇಳಿದರೂ ಜನರು ತಪ್ಪು ಅರ್ಥವನ್ನೇ ಹುಡುಕುತ್ತಾರೆ’ ಎಂದು ಸನ್ನಿ ಡಿಯೋಲ್ ಅವರು ಎಎನ್​ಐಗೆ ಹೇಳಿಕೆ ನೀಡಿದ್ದಾರೆ. ಈ ವೇಳೆ ಅವರು ಸಖತ್ ಸಿಟ್ಟಾಗಿದ್ದರು ಎನ್ನಲಾಗಿದೆ.

ಇನ್ನು ಬ್ಯಾಂಕ್​ನವರ ನಡೆ ಕೂಡ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಮೊದಲು ಹರಾಜು ನೋಟಿಸ್ ಹೊರಡಿಸಿದ್ದ ಬ್ಯಾಂಕ್ ಆಫ್ ಬರೋಡಾ, 24 ಗಂಟೆ ಕಳೆಯುವುದರೊಳಗೆ ಆ ನೋಟಿಸ್​ನ ಹಿಂಪಡೆದಿತ್ತು. ಇದು ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ನಾಯಕರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ‘ಗದರ್​ 2’ ನಾನ್​-ಸ್ಟಾಪ್​ ಕಮಾಯಿ; 400 ಕೋಟಿ ರೂ. ಗಡಿ ಮುಟ್ಟಲಿದೆ ಸನ್ನಿ ಡಿಯೋಲ್​ ಸಿನಿಮಾ

‘ಗದರ್ 2’ ಸಿನಿಮಾ ಸದ್ಯ ಸದ್ದು ಮಾಡುತ್ತಿದೆ. ಈ ಚಿತ್ರ ಮೂರನೇ ಸೋಮವಾರ (ಆಗಸ್ಟ್ 21) 14 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟೂ ಗಳಿಕೆ 389 ಕೋಟಿ ರೂಪಾಯಿ ಆಗಿದೆ. ಅನಾಯಾಸವಾಗಿ ಈ ಸಿನಿಮಾ ‘ಕೆಜಿಎಫ್ 2’ (ಹಿಂದಿ) ಲೈಫ್​ಟೈಮ್ ಕಲೆಕ್ಷನ್​ನ ಹಿಂದಿಕ್ಕಲಿದೆ. ‘ಕೆಜಿಎಫ್ 2’ ಹಿಂದಿ ಅವತರಣಿಕೆ 432 ಕೋಟಿ ರೂಪಾಯಿ ಬಾಚಿಕೊಂಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ