ದಿವಂಗತ ಸುಶಾಂತ್ ಸಿಂಗ್ ಜೀವನದ ಬಗ್ಗೆ ಸಿನಿಮಾ: ಕೋರ್ಟ್ ಮೆಟ್ಟಿಲೇರಿದ ನಟನ ತಂದೆ

|

Updated on: Aug 18, 2023 | 8:17 PM

Sushant Singh: ದಿವಂಗತ ನಟ ಸುಶಾಂತ್ ಸಿಂಗ್ ಜೀವನದ ಬಗ್ಗೆ ನಿರ್ಮಿಸಲಾಗಿರುವ 'ನ್ಯಾಯ್' ಸಿನಿಮಾದ ವಿರುದ್ಧ ಸುಶಾಂತ್ ಸಿಂಗ್ ತಂದೆ ಕೆಕೆ ಸಿಂಗ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ದಿವಂಗತ ಸುಶಾಂತ್ ಸಿಂಗ್ ಜೀವನದ ಬಗ್ಗೆ ಸಿನಿಮಾ: ಕೋರ್ಟ್ ಮೆಟ್ಟಿಲೇರಿದ ನಟನ ತಂದೆ
ಸುಶಾಂತ್ ಸಿಂಗ್ ರಜಪೂತ್
Follow us on

ನಟ ಸುಶಾಂತ್ ಸಿಂಗ್ (Sushant Singh) ಅಕಾಲಿಕವಾಗಿ ನಿಧನ ಹೊಂದಿ ಮೂರು ವರ್ಷಕ್ಕೂ ಹೆಚ್ಚು ಸಮಯವಾಯ್ತು. ಬಾಲಿವುಡ್ ಅನ್ನು ಬಹುವಾಗಿ ‘ಕಾಡಿದ’ ಸಾವು ಸುಶಾಂತ್ ಸಿಂಗ್​ರದ್ದು. ಸುಶಾಂತ್ ಸಿಂಗ್ ಸಾವಿನ ಬಗ್ಗೆ ಹಲವು ರೀತಿಯ ಅನುಮಾನಗಳು ಎದ್ದಿದ್ದವು, ಸುಶಾಂತ್ ಸಾವಿನ ಬಳಿಕ ಬಾಲಿವುಡ್ ಬಗೆಗಿನ ಜನರ ದೃಷ್ಟಿಕೋನವೇ ಬದಲಾಗುವ ಹಲವು ವಿಷಯಗಳು ಹೊರಬಂದವು, ದೊಡ್ಡ-ದೊಡ್ಡ ಸ್ಟಾರ್ ನಟ-ನಟಿಯರೆಲ್ಲ ಡ್ರಗ್ಸ್ ಪ್ರಕರಣದಲ್ಲಿ ಎನ್​ಸಿಬಿ ಕಚೇರಿ ಮೆಟ್ಟಿಲು ತುಳಿವಂತಾಯಿತು. ಹಲವು ಬಾಲಿವುಡ್ಡಿಗರ ನಿದ್ದೆ ಕೆಡಿಸಿದ್ದ ಸುಶಾಂತ್ ಸಿಂಗ್ ಸಾವಿನ ಬಗ್ಗೆ ಹಾಗೂ ಅವರ ಜೀವನದ ಬಗ್ಗೆ ಸಿನಿಮಾ ಒಂದು ನಿರ್ಮಾಣಗೊಂಡು ಬಿಡುಗಡೆಯೂ ಆಗಿದೆ. ಇದೀಗ ಒಟಿಟಿಯಲ್ಲಿಯೂ (OTT) ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದು, ಸಿನಿಮಾದ ವಿರುದ್ಧ ಸುಶಾಂತ್ ತಂದೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

2021ರಲ್ಲಿಯೇ ಸುಶಾಂತ್ ಸಿಂಗ್ ಜೀವನ ಆಧರಿಸಿದ್ದು ಎನ್ನಲಾದ ‘ನ್ಯಾಯ್; ದಿ ಜಸ್ಟಿಸ್’ ಹೆಸರಿನ ಸಿನಿಮಾ ಒಂದು ಬಿಡುಗಡೆ ಆಗಿತ್ತು, ಲೋ ಬಜೆಟ್​ನಲ್ಲಿ ಕಳಪೆಯಾಗಿ ಚಿತ್ರೀಕರಣಗೊಂಡಿದ್ದ ಆ ಸಿನಿಮಾ ಬಂದಿದ್ದು, ಹೋಗಿದ್ದು ಸಹ ಯಾರಿಗೂ ಗೊತ್ತಾಗಿರಲಿಲ್ಲ. ಇದೀಗ ಈ ಸಿನಿಮಾ ‘ಲಪಾಲಪ್ ಒರಿಜಿನಲ್’ ಹೆಸರಿನ ಒಟಿಟಿಯಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಸಿನಿಮಾವನ್ನು ಒಟಿಟಿ ವೇದಿಕೆಯಿಂದ ತೆಗೆಯಬೇಕೆಂದು ಸುಶಾಂತ್ ಸಿಂಗ್​ರ ತಂದೆ ಕೆಕೆ ಸಿಂಗ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಈ ಹಿಂದೆಯೂ ಸುಶಾಂತ್ ಸಿಂಗ್ ತಂದೆ ಇದೇ ಸಿನಿಮಾದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು, ಆದರೆ ವಿಚಾರಣೆ ನಡೆಸಿದ್ದ ಹೈಕೋರ್ಟ್​ನ ಏಕಸದಸ್ಯ ಪೀಠವು ತಡೆಯಾಜ್ಞೆ ನೀಡಲು ನಿರಾಕರಿಸಿ ಜುಲೈ 12 ರಂದು ಆದೇಶ ನೀಡಿತ್ತು. ಇದೀಗ ಆದೇಶ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿಯನ್ನು ಕೆಕೆ ಸಿಂಗ್ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಸುಶಾಂತ್ ಸಿಂಗ್ ಮೂರನೇ ಪುಣ್ಯತಿಥಿ; ಸಾವಿನಿಂದ ಇಲ್ಲಿಯವರೆಗೆ ನಡೆದ ಘಟನೆಗಳ ಟೈಮ್​ಲೈನ್ ಇಲ್ಲಿದೆ

‘ಸುಶಾಂತ್ ಸಿಂಗ್ ಸಾವಿನಿಂದ ಅವರ ವ್ಯಕ್ತಿತ್ವದ ಹಕ್ಕು, ಖಾಸಗಿ ಹಕ್ಕು ಇಲ್ಲದಾಗಿದೆ. ಈ ಹಕ್ಕುಗಳು ವಂಶಪಾರಂಪರ್ಯವಲ್ಲ ಹಾಗಾಗಿ ಸುಶಾಂತ್ ಖಾಸಗಿತನದ ಹಕ್ಕು, ವ್ಯಕ್ತಿತ್ವದ ಹಕ್ಕಿನ ಬಗ್ಗೆ ಸುಶಾಂತ್ ಸಿಂಗ್​ರ ತಂದೆ ಪ್ರಶ್ನೆ ಮಾಡುವಂತಿಲ್ಲ” ಎಂದಿದ್ದರು. ಇದೀಗ ಆದೇಶದ ವಿರುದ್ಧ ಕೆಕೆ ಸಿಂಗ್ ಅರ್ಜಿ ಸಲ್ಲಸಿದ್ದಾರೆ.

ಸುಶಾಂತ್ ಸಿಂಗ್ 2020ರ ಜುಲೈ 21ರಂದು ಮುಂಬೈನ ತಮ್ಮ ಅಪಾರ್ಟ್​ಮೆಂಟ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸುಶಾಂತ್ ಸಿಂಗ್ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡಿದ್ದವು, ಪ್ರಾಥಮಿಕ ತನಿಖೆ ನಡೆಸಿದ್ದ ಮುಂಬೈ ಪೊಲೀಸರು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿತ್ತು, ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಯ್ತು, ಸುಶಾಂತ್ ಸಿಂಗ್​ರ ತಂದೆಯ ದೂರನ್ನು ಆಧರಿಸಿ ಬಿಹಾರ ಪೊಲೀಸರು ಸಹ ಪ್ರಕರಣದ ತನಿಖೆ ನಡೆಸಿದರು.

ಸುಶಾಂತ್ ಸಾವಿನ ತನಿಖೆ ಸಮಯದಲ್ಲಿ ಡ್ರಗ್ಸ್ ಪ್ರಕರಣ ಹೊರಬಂದು ಸುಶಾಂತ್​ರ ಮಾಜಿ ಗೆಳತಿ ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಬಂಧನವೂ ಆಯ್ತು. ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಇನ್ನೂ ಹಲವು ನಟಿಯರು ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆ ಎದುರಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:14 pm, Fri, 18 August 23