ಖ್ಯಾತ ನಟಿ ಸುಶ್ಮಿತಾ ಸೇನ್ ಅವರಿಗೆ ಹೃದಯಾಘಾತ (Heart Attack) ಆಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕೆಲವೇ ದಿನಗಳ ಹಿಂದೆ ನಡೆದ ಈ ಘಟನೆ ಈಗ ಬೆಳಕಿಗೆ ಬಂದಿದೆ. ಸ್ವತಃ ಸುಶ್ಮಿತಾ ಸೇನ್ (Sushmita Sen) ಅವರು ಈ ಬಗ್ಗೆ ತಡವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಆದರೆ ಆತಂಕಪಡುವ ಅಗತ್ಯವಿಲ್ಲ ಎಂದು ಸುಶ್ಮಿತಾ ಸೇನ್ ಹೇಳಿದ್ದಾರೆ. ಹೃದಯಾಘಾತ ಆದ ಕೂಡಲೇ ಅವರಿಗೆ ವೈದ್ಯಕೀಯ ನೆರವು ಸಿಕ್ಕಿತು. ವೈದ್ಯರ ಸಲಹೆ ಮೇರೆಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ ಮತ್ತು ಸ್ಟೆಂಟ್ಸ್ ಅಳವಡಿಸಲಾಗಿದೆ. ಈಗ ತಮ್ಮ ಆರೋಗ್ಯ ಸ್ಥಿರವಾಗಿದೆ ಎಂದು ಸುಶ್ಮಿತಾ ಸೇನ್ ಅವರು ಹೆಲ್ತ್ ಅಪ್ಡೇಟ್ (Sushmita Sen Health Update) ನೀಡಿದ್ದಾರೆ.
ಸುಶ್ಮಿತಾ ಸೇನ್ ಅವರಿಗೆ ಈಗ 47 ವರ್ಷ ವಯಸ್ಸು. ಫಿಟ್ನೆಸ್ ಬಗ್ಗೆ ಅವರು ಸಾಕಷ್ಟು ಕಾಳಜಿ ವಹಿಸುತ್ತಾರೆ. ಹಾಗಿದ್ದರೂ ಕೂಡ ಅವರಿಗೆ ಹೃದಯಾಘಾತ ಆಗಿದೆ. ‘ಈ ಕಷ್ಟದ ಸಂದರ್ಭದಲ್ಲಿ ನನಗೆ ಹಲವರು ನೆರವಿಗೆ ಬಂದರು. ಅವರಿಗೆಲ್ಲ ಪ್ರತ್ಯೇಕ ಪೋಸ್ಟ್ನಲ್ಲಿ ಧನ್ಯವಾದ ತಿಳಿಸುವೆ’ ಎಂದು ಸುಶ್ಮಿತಾ ಸೇನ್ ಹೇಳಿದ್ದಾರೆ.
ತಮ್ಮ ನೆಚ್ಚಿನ ನಟಿಗೆ ಹಾರ್ಟ್ ಅಟ್ಯಾಕ್ ಆಗಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಸುಶ್ಮಿತಾ ಸೇನ್ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ಗೆ ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಕಾಳಜಿ ವ್ಯಕ್ತಪಡಿಸಿದ್ದಾರೆ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಫ್ಯಾನ್ಸ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Sushmita Sen: ಒಂದೂವರೆ ತಿಂಗಳಿಗೆ ಸುಶ್ಮಿತಾ ಸೇನ್, ಲಲಿತ್ ಮೋದಿ ಬ್ರೇಕಪ್? ಸಾಕ್ಷಿ ಸಮೇತ ಕಮೆಂಟ್ ಮಾಡಿದ ನೆಟ್ಟಿಗರು
ರೋಹ್ಮನ್ ಶಾಲ್ ಮತ್ತು ಲಲಿತ್ ಮೋದಿ ಮುಂತಾದವರ ಜೊತೆ ಸುಶ್ಮಿತಾ ಸೇನ್ ಡೇಟಿಂಗ್ ಮಾಡುತ್ತಿದ್ದರು. ಆದರೆ ಅವರು ಮದುವೆ ಆಗಿಲ್ಲ. ಇಬ್ಬರು ಮಕ್ಕಳನ್ನು ಅವರು ದತ್ತು ಪಡೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅವರು ಆಗಾಗ ತಮ್ಮ ದಿನಚರಿ ಬಗ್ಗೆ ಅಪ್ಡೇಟ್ ನೀಡುತ್ತಾ ಇರುತ್ತಾರೆ. ಜಿಮ್ನಲ್ಲಿ ವರ್ಕೌಟ್ ಮಾಡುವ ಮತ್ತು ಯೋಗ ಮಾಡುತ್ತಿರುವ ವಿಡಿಯೋಗಳನ್ನು ಅವರು ಹಂಚಿಕೊಳ್ಳುತ್ತಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:24 pm, Thu, 2 March 23